
ಚೆನ್ನೈ ಸೂಪರ್ ಕಿಂಗ್ಸ್ ತಂಡದ (Chennai Super Kings) ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಆಟಗಾರ ಇದೀಗ ತಂಡವನ್ನು ಸೇರಿಕೊಂಡಿದ್ದಾನೆ. ಇಂಜುರಿಯಿಂದ ಬಳಲುತ್ತಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ (Ben Stokes), ಈ ಬಾರಿಯ ಐಪಿಎಲ್ನಲ್ಲಿ (IPL 2023) ಆಡುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಈ ಎಲ್ಲಾ ಊಹಾಪೋಹಗಳಿಗು ತೆರೆಬಿದ್ದಿದ್ದು, ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕ ಮತ್ತು ಅನುಭವಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಳಯವನ್ನು ಸೇರಿಕೊಂಡಿದ್ದಾರೆ. ಈ ಇಬ್ಬರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಚೆನ್ನೈ ಫ್ರಾಂಚೈಸ್ ಈ ಇಬ್ಬರೂ ಇಂಗ್ಲೆಂಡ್ ಆಲ್ರೌಂಡರ್ಗಳು ತಂಡವನ್ನು ಸೇರಿಕೊಂಡಿದ್ದಾರೆ ಎಂದು ಬರೆದುಕೊಂಡಿದೆ. ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಮಿನಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಧೋನಿ ತಂಡ 16.25 ಕೋಟಿಗೆ ಖರೀದಿಸಿತ್ತು. ಅಲ್ಲದೆ ಧೋನಿ ನಂತರ ತಂಡವನ್ನು ಸ್ಟೋಕ್ಸ್ ಮುನ್ನಡೆಸಲಿದ್ದಾರೆ ಎಂಬ ಮಾತುಗಳು ಕೂಡ ಈಗಾಗಲೇ ಕೇಳಿಬರುತ್ತಿವೆ.
ವಾಸ್ತವವಾಗಿ, ಧೋನಿ ಮತ್ತು ಬೆನ್ ಸ್ಟೋಕ್ಸ್ ಈ ಹಿಂದೆ ಐಪಿಎಲ್ನಲ್ಲಿ ಒಟ್ಟಿಗೆ ಆಡಿದ್ದಾರೆ. 2017ರ ಐಪಿಎಲ್ನಲ್ಲಿ ಈ ಇಬ್ಬರೂ ಆಟಗಾರರು ರೈಸಿಂಗ್ ಪುಣೆ ಸೂಪರ್ಜೈಂಟ್ ಪರ ಆಡಿದ್ದರು. ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಒಟ್ಟಿಗೆ ಆಡಿದ್ದ ಧೋನಿ-ಸ್ಟೋಕ್ಸ್, ಒಟ್ಟಿಗೆ 12 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆ ಸೀಸನ್ನಲ್ಲಿ 12 ಪಂದ್ಯಗಳನ್ನಾಡಿದ್ದ ಬೆನ್ ಸ್ಟೋಕ್ಸ್, ಒಂದು ಶತಕ ಮತ್ತು ಅರ್ಧಶತಕದ ಸಹಾಯದಿಂದ 316 ರನ್ ಬಾರಿಸಿದ್ದರು.
ಆ ಆವೃತ್ತಿಯಲ್ಲಿ ಪುಣೆ ತಂಡ ಕೂಡ ಫೈನಲ್ ತಲುಪಿತ್ತು. ಆದರೆ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಈ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 1 ರನ್ಗಳಿಂದ ಸೋಲನುಭವಿಸಬೇಕಾಯಿತು. ಇನ್ನು ಚೆನ್ನೈ ಪರ ಸ್ಟೋಕ್ಸ್ ಹಾಗೂ ಧೋನಿ ಜೊತೆಯಾಗಿ ಆಡಲಿದ್ದು, ಈ ತಂಡ ಐದನೇ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಲಿ ಎಂದು ಈ ತಂಡದ ಅಭಿಮಾನಿಗಳು ಹಾರೈಸಿದ್ದಾರೆ.
The Hundred: ಮಾರಾಟವಾಗದೆ ಉಳಿದ ಬಾಬರ್, ರಿಜ್ವಾನ್, ಪೊಲಾರ್ಡ್, ರಸೆಲ್..!
ಬೆನ್ ಸ್ಟೋಕ್ಸ್ ಐಪಿಎಲ್ನಲ್ಲಿ ಕೇವಲ 43 ಪಂದ್ಯಗಳನ್ನು ಆಡಿದ್ದು, ಅವರ ಬ್ಯಾಟ್ 25.55 ಸರಾಸರಿಯಲ್ಲಿ 920 ರನ್ ಗಳಿಸಿದೆ. ಈ ಲೀಗ್ನಲ್ಲಿ ಸ್ಟೋಕ್ಸ್ ಎರಡು ಶತಕಗಳನ್ನು ಬಾರಿಸಿದ್ದು, ಬೌಲಿಂಗ್ನಲ್ಲಿ 28 ವಿಕೆಟ್ ಕೂಡ ಕಬಳಿಸಿದ್ದಾರೆ. ಅಲ್ಲದೆ ಸ್ಟೋಕ್ಸ್ಗೆ ಯಾವುದೇ ಸಮಯದಲ್ಲೂ ಪಂದ್ಯದ ಗತಿ ಬದಲಾಯಿಸುವ ಸಾಮಥ್ಯ್ರವಿದ್ದು, ಅವರ ಆಗಮನ ಚೆನ್ನೈ ತಂಡಕ್ಕೆ ಆನೆಬಲ ತಂದಿದೆ. ಇನ್ನು ಸ್ಟೋಕ್ಸ್ ಆಲ್ರೌಂಡರ್ ಆಗಿರುವುದರಿಂದ ಅವಶ್ಯಕ ಸಮಯದಲ್ಲಿ ತಂಡಕ್ಕೆ ಬೌಲಿಂಗ್ನಲ್ಲೂ ನೆರವಾಗಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ