ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (CSk vs SRH) ನಡುವಿನ ಪಂದ್ಯದಲ್ಲಿ ಸಿಎಸ್‌ಕೆ ತಂಡ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಇದರೊಂದಿಗೆ ಧೋನಿ ಬಳಗ ಟೂರ್ನಿಯಲ್ಲಿ 4ನೇ ಗೆಲುವು ಕಂಡಿತು. ಹೈದರಾಬಾದ್ ತಂಡ ನೀಡಿದ 135 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ಕಾನ್ವೇ ಅವರ ಅರ್ಧಶತಕದ ನೆರವಿನಿಂದಾಗಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ತಂಡದ ಪರ ಡೆವೊನ್ ಕಾನ್ವೇ (Devon Conway) ಅಜೇಯ 77 ರನ್ ಬಾರಿಸಿದರೆ, ಮತ್ತೊಬ್ಬ ಆರಂಭಿಕ ರುತುರಾಜ್ ಗಾಯಕ್ವಾಡ್ ಕೂಡ 35 ರನ್ ಗಳಿಸಿದರು. ಇವರೊಂದಿಗೆ ಕೀಪಿಂಗ್ನಲ್ಲೂ ಮಿಂಚಿದ ಧೋನಿ ಒಂದು ಕ್ಯಾಚ್, ಒಂದು ರನೌಟ್ ಮತ್ತು ಸ್ಟಂಪ್ ಔಟ್ ಮಾಡಿದರು. ಅದರಲ್ಲೂ ಹೈದರಾಬಾದ್ ಇನ್ನಿಂಗ್ಸ್ನ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಧೋನಿ (MS Dhoni) ಮಾಡಿದ ರನೌಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಧೋನಿ ಪ್ರಮುಖ 3 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಅದರಲ್ಲಿ ಮೊದಲನೇಯ ವಿಕೆಟ್ ಆಗಿ ಹೈದರಾಬಾದ್ ನಾಯಕ ಐಡೆನ್ ಮಾರ್ಕ್ರಾಮ್ ಅವರ ಅದ್ಭುತ ಕ್ಯಾಚ್ ಪಡೆದ ಧೋನಿ, ಆನಂತರ ರವೀಂದ್ರ ಜಡೇಜಾ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಸ್ಟಂಪ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಹಾಗೆಯೇ ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಧೋನಿ ಚಾಣಾಕ್ಷತನದಿಂದ ರನೌಟ್ ಮಾಡುವಲ್ಲಿ ಯಶಸ್ವಿಯಾದರು. ಈಗ ಇದೇ ರನೌಟ್ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
IPL 2023: ಸಿಎಸ್‌ಕೆ ತಂಡಕ್ಕೆ ಬಿಗ್ ಶಾಕ್; ಸ್ಟಾರ್ ಆಲ್ರೌಂಡರ್ ಒಂದು ವಾರ ತಂಡದಿಂದ ಔಟ್..!
ಅಷ್ಟಕ್ಕೂ ಧೋನಿ ಮಾಡಿದ ಈ ರನೌಟ್ ಇಷ್ಟೊಂದು ವೈರಲ್ ಆಗಲು ಕಾರಣ, ಧೋನಿ ರನ್ ಔಟ್ ಮಾಡುವುದಕ್ಕೂ ಮೊದಲು ಅಂದರೆ, ಪತಿರಾನ ಕೊನೆಯ ಎಸೆತವನ್ನು ಬೌಲ್ ಮಾಡುವುದಕ್ಕೂ ಕೆಲವು ಸೆಕೆಂಡುಗಳ ಮೊದಲು ಧೋನಿ ರನೌಟ್ ಅಭ್ಯಾಸ ನಡೆಸಿದ್ದರು. ತಮ್ಮ ಕೈಗವಸನ್ನು ತೆಗೆದ ಧೋನಿ ತಮ್ಮ ಬಲಗೈಯಿಂದ ಚೆಂಡನ್ನು ಸ್ಟಂಪ್ಗೆ ಹೊಡೆಯುವ ಅಭ್ಯಾಸ ನಡೆಸಿದ್ದರು. ಆ ಬಳಿಕ ಪತಿರಾನ ಎಸೆದ ಕೊನೆಯ ಎಸೆತವನ್ನು ಯಾನ್ಸೆನ್ ದಂಡಿಸುವಲ್ಲಿ ವಿಫಲರಾದರು. ಚೆಂಡು ನೇರವಾಗಿ ಧೋನಿ ಕೈಸೇರಿತು. ಕೂಡಲೇ ಧೋನಿ ಮೊದಲೇ ಅಭ್ಯಾಸ ನಡೆಸಿದಂತೆ ಸೀದಾ ಚೆಂಡನ್ನು ವಿಕೆಟ್ಗೆ ಹೊಡೆಯುವಲ್ಲಿ ಯಶಸ್ವಿಯಾದರು. ಇದೀಗ ಧೋನಿಯ ಈ ಅಭ್ಯಾಸದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೊನೆಯ ಎಸೆತದಲ್ಲಿ ರನೌಟ್ ಆಗುವುದು ಧೋನಿಗೆ ಮೊದಲೇ ತಿಳಿದಿತ್ತಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
Gloves off for the last ball!! A warm up for the throw!! Thats how he plan and practise for those moments!! #Dhoni #CSKvsSRH #AnbuDen Thala Dhoni pic.twitter.com/EeIYCotcnq
— Jaighanesh (@jaighanesh) April 21, 2023
ಇನ್ನು ಇದೇ ಪಂದ್ಯದಲ್ಲಿ ಅಪರೂಪದ ದಾಖಲೆಯೊಂದನ್ನು ಬರೆದ ಧೋನಿ, ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಕೆಟ್-ಕೀಪರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಹಿಂದೆ ಕ್ವಿಂಟನ್ ಡಿಕಾಕ್ ಅವರು ಈ ದಾಖಲೆಯನ್ನು ಹೊಂದಿದ್ದರು. ಇದೀಗ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮೀರಿಸಿದ್ದಾರೆ. ಈ ಪಂದ್ಯಕ್ಕು ಮುನ್ನ ಧೋನಿ ಹಾಗೂ ಡಿಕಾಕ್ ಒಟ್ಟು 207 ಕ್ಯಾಚ್‌ಗಳನ್ನು ಪಡೆದು ನಂಬರ್ 1 ಸ್ಥಾನದಲ್ಲಿದ್ದರು. ಮಹೇಶ್ ತೀಕ್ಷಣ ಅವರ ಬೌಲಿಂಗ್‌ನಲ್ಲಿ ಆ್ಯಡಂ ಮಾರ್ಕ್ರಮ್ ಅವರ ಕ್ಯಾಚ್ ಅನ್ನು ಧೋನಿ ಪಡೆದ ಕೂಡಲೆ ಇತಿಹಾಸ ನಿರ್ಮಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Sat, 22 April 23