AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಕೈ ಬೆರಳಿಗೆ ಹೊಲಿಗೆ; ಡೈವ್ ಬಿದ್ದು ರಾಜಸ್ಥಾನ್​ ತಂಡಕ್ಕೆ ಸಂಕಷ್ಟ ತಂದ ಬಟ್ಲರ್..!

Jos Buttler Injury: ಮೊದಲ ಪಂದ್ಯದಲ್ಲಿ ಅಬ್ಬರದ ಅರ್ಧಶತಕದ ಇನಿಂಗ್ಸ್‌ ಆಡಿದ್ದ ಬಟ್ಲರ್ ಓಪನ್ ಮಾಡದೇ ಇದ್ದದ್ದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.

IPL 2023: ಕೈ ಬೆರಳಿಗೆ ಹೊಲಿಗೆ; ಡೈವ್ ಬಿದ್ದು ರಾಜಸ್ಥಾನ್​ ತಂಡಕ್ಕೆ ಸಂಕಷ್ಟ ತಂದ ಬಟ್ಲರ್..!
ಜೋಸ್ ಬಟ್ಲರ್
ಪೃಥ್ವಿಶಂಕರ
|

Updated on:Apr 06, 2023 | 5:56 PM

Share

ಗುವಾಹಟಿಯಲ್ಲಿ ನಡೆದ ಐಪಿಎಲ್​ನ (IPL 2023) 9ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮಾಜಿ ರನ್ನರ್ ಅಪ್ ರಾಜಸ್ಥಾನ್ ರಾಯಲ್ಸ್ (Rajasthan Royals vs Punjab Kings) ತಂಡವನ್ನು ಕೇವಲ 5 ರನ್‌ಗಳಿಂದ ಸೋಲಿಸಿತು. ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದ ರಾಜಸ್ಥಾನ್​ಗೆ ತಾನು ಮಾಡಿದ ತಪ್ಪಿನಿಂದಲೇ ಸೋಲಿನ ಶಾಕ್ ಎದುರಾಯಿತು. ವಾಸ್ತವವಾಗಿ ಎಲ್ಲಾ ಪಂದ್ಯಗಳಲ್ಲಿ ರಾಜಸ್ಥಾನ್ ಪರ ಜೋಸ್ ಬಟ್ಲರ್ (Jos Buttler) ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ. ಆದರೆ ಈ ಪಂದ್ಯದಲ್ಲಿ ಆರಂಭಿಕ ಜೋಡಿಯನ್ನು ಬದಲಾಯಿಸಲಾಯಿತು. ಹೀಗಾಗಿ ರಾಜಸ್ಥಾನ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಇತ್ತ ರಾಜಸ್ಥಾನ್ ತಂಡ ತನ್ನ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡಲು ಕಾರಣವೂ ಇದ್ದು, ಖಾಯಂ ಆರಂಭಿಕ ಜೋಸ್ ಬಟ್ಲರ್ ಇಂಜುರಿಗೊಳಗಾಗಿದ್ದೆ ಈ ಬದಲಾವಣೆಗೆ ಕಾರಣವಾಗಿತ್ತು. ಇದೀಗ ಪಂಜಾಬ್ ವಿರುದ್ಧ ಟೂರ್ನಿಯ ಮೊದಲ ಸೋಲು ಅನುಭವಿಸಿದ ರಾಜಸ್ಥಾನ್​ಗೆ ಇದೀಗ ಇನ್ನೊಂದು ಬಿಗ್ ಶಾಕ್ ಎದುರಾಗಿದ್ದು, ಇಂಜುರಿಗೊಳಗಾಗಿರುವ ಬಟ್ಲರ್ ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಗಳು ತೀರ ಕಡಿಮೆ ಎಂದು ಹೇಳಲಾಗುತ್ತಿದೆ.

ಕೈಗೆ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ

ಮೊದಲ ಪಂದ್ಯದಲ್ಲಿ ಅಬ್ಬರದ ಅರ್ಧಶತಕದ ಇನಿಂಗ್ಸ್‌ ಆಡಿದ್ದ ಬಟ್ಲರ್ ಓಪನ್ ಮಾಡದೇ ಇದ್ದದ್ದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಪಂದ್ಯದ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಾಯಕ ಸಂಜು ಸ್ಯಾಮ್ಸನ್, ಕ್ಯಾಚ್ ಹಿಡಿಯುವ ವೇಳೆ ಬಟ್ಲರ್ ಕೈಗೆ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ. ಹೀಗಾಗಿ ಅವರು ಓಪನಿಂಗ್ ಮಾಡಲಿಲ್ಲ ಎಂದಿದ್ದರು.

ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಶಾರುಖ್ ಖಾನ್ ಅವರ ಕ್ಯಾಚ್ ಹಿಡಿಯುವ ವೇಳೆ ಬಟ್ಲರ್ ಅವರ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ರಾಜಸ್ಥಾನ್ ಇನ್ನಿಂಗ್ಸ್ ಆರಂಭವಾದಾಗ ಯಶಸ್ವಿ ಜೊತೆ ಬಟ್ಲರ್ ಆರಂಭಿಕರಾಗಿ ಕಣಕ್ಕಿಳಿದಿರಲಿಲ್ಲ. ಹೀಗಾಗಿ ಅಶ್ವಿನ್ ಅವರ ಬದಲಿಗೆ ರಾಜಸ್ಥಾನ್ ಪರ ಇನ್ನಿಂಗ್ಸ್ ಆರಂಭಿಸಿದ್ದರು.

IPL 2023: ಕನ್ನಡಿಗನ ಕ್ರಿಕೆಟ್ ಬದುಕನ್ನೇ ಹಾಳುಗೆಡವಿದ ರಾಜಸ್ಥಾನ್ ಫ್ರಾಂಚೈಸಿ..!

ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ

ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಗಾಯದ ಕಾರಣ ಬಟ್ಲರ್ ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ರಾಜಸ್ಥಾನ್ ರಾಯಲ್ಸ್ ತನ್ನ ಮೂರನೇ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 8 ರಂದು ಆಡಲಿದೆ. ಎರಡನೇ ಪಂದ್ಯದ ಸೋಲಿನ ಶಾಕ್​ನಲ್ಲಿರುವ ರಾಜಸ್ಥಾನ್ ಡೆಲ್ಲಿ ವಿರುದ್ಧ ಗೆದ್ದು ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸಲಿದೆ. ಆದರೆ ಬಟ್ಲರ್ ಅಲಭ್ಯತೆ ರಾಜಸ್ಥಾನ್ ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ. ಡೆಲ್ಲಿ ವಿರುದ್ಧದ ಆ ಪಂದ್ಯವೂ ಕೂಡ ಗುವಾಹಟಿಯ ಕ್ರೀಡಾಂಗಣದಲ್ಲಿ ನಡೆಯಲಿದ್ದು ತವರಿನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ರಾಜಸ್ಥಾನ ತನ್ನ ಸ್ಫೋಟಕ ಆರಂಭಿಕನಿಲ್ಲದೆ ಕಣಕ್ಕಿಳಿಯಬೇಕಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Thu, 6 April 23

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ