IPL 2023 RCB Team: ಐಪಿಎಲ್ ಸೀಸನ್ 16 ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಬಲಿಷ್ಠ ತಂಡ ಕಟ್ಟಿದೆ. ಈ ಬಾರಿಯ ಹರಾಜಿಗೂ ಮುನ್ನ 18 ಆಟಗಾರರನ್ನು ಉಳಿಸಿಕೊಂಡಿದ್ದ ಆರ್ಸಿಬಿ, ಮಿನಿ ಹರಾಜಿನ ಮೂಲಕ 7 ಆಟಗಾರರನ್ನು ಖರೀದಿಸಿದೆ. ಈ ಮೂಲಕ 25 ಸದಸ್ಯರ ಬಳಗವನ್ನು ರೂಪಿಸಿದೆ. ಈ 25 ಆಟಗಾರರಲ್ಲಿ 10 ಆಲ್ರೌಂಡರ್ಗಳು ಎಂಬುದು ವಿಶೇಷ. ಇನ್ನು ತಂಡದಲ್ಲಿ ನಾಲ್ವರು ಬ್ಯಾಟ್ಸ್ಮನ್ಗಳಿದ್ದರೆ, 8 ಬೌಲರ್ಗಳಿದ್ದಾರೆ. ಹಾಗೆಯೇ 3 ವಿಕೆಟ್ ಕೀಪರ್ಗಳು ತಂಡದಲ್ಲಿದ್ದಾರೆ.
ಅಂದರೆ 10 ಆಲ್ರೌಂಡರ್ಗಳನ್ನು ಹೊಂದಿರುವ ಆರ್ಸಿಬಿಗೆ ಈ ಬಾರಿ ಉತ್ತಮ ಸಮತೋಲನದಿಂದ ಕೂಡಿರುವ ಪ್ಲೇಯಿಂಗ್ ಇಲೆವೆನ್ ರೂಪಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ಐಪಿಎಲ್ ಸೀಸನ್ 16 ನಲ್ಲಿ ಆರ್ಸಿಬಿ ತಂಡದಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.
RCB ಹೊಸ ತಂಡ ಹೀಗಿದೆ:
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವಿಲ್ ಜಾಕ್ಸ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.
RCB ತಂಡಕ್ಕೆ ಹೊಸದಾಗಿ ಆಯ್ಕೆಯಾದ 7 ಆಟಗಾರರು:
ಸೋನು ಯಾದವ್, ಮನೋಜ್ ಭಾಂಡಗೆ, ರಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ, ವಿಲ್ ಜಾಕ್ಸ್ (ಇಂಗ್ಲೆಂಡ್), ರೀಸ್ ಟೋಪ್ಲಿ (ಇಂಗ್ಲೆಂಡ್).
Published On - 5:04 pm, Sat, 24 December 22