IPL 2023 RCB Squad: ಆರ್ಸಿಬಿ ಪರ ಕಣಕ್ಕಿಳಿಯುವ 8 ವಿದೇಶಿ ಆಟಗಾರರು ಇವರೇ..!
RCB Squad 2023: ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ. ಅದರಂತೆ ಈ ಬಾರಿ ಆರ್ಸಿಬಿ ತಂಡವು 6 ವಿದೇಶಿ ಆಟಗಾರರನ್ನು ಉಳಿಸಿಕೊಂಡು, ಜೇಸನ್ ಬೆಹ್ರೆನ್ಡ್ರಾಫ್ ಹಾಗೂ ಶೆರ್ಫಾನ್ ರುದರ್ಫೋರ್ಡ್ ಅವರನ್ನು ರಿಲೀಸ್ ಮಾಡಿತ್ತು.
Updated on: Dec 23, 2022 | 6:59 PM

IPL 2023 RCB Squad: ಐಪಿಎಲ್ 2023ರ ಮಿನಿ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಿದೆ. ಇದರೊಂದಿಗೆ ಆರ್ಸಿಬಿ ತಂಡದ ಫಾರಿನ್ ಪ್ಲೇಯರ್ಸ್ ಕೋಟಾ ಪೂರ್ಣಗೊಂಡಿದೆ.

ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ. ಅದರಂತೆ ಈ ಬಾರಿ ಆರ್ಸಿಬಿ ತಂಡವು 6 ವಿದೇಶಿ ಆಟಗಾರರನ್ನು ಉಳಿಸಿಕೊಂಡು, ಜೇಸನ್ ಬೆಹ್ರೆನ್ಡ್ರಾಫ್ ಹಾಗೂ ಶೆರ್ಫಾನ್ ರುದರ್ಫೋರ್ಡ್ ಅವರನ್ನು ರಿಲೀಸ್ ಮಾಡಿತ್ತು.

ಇದೀಗ ತಂಡದಿಂದ ಕೈ ಬಿಡಲಾಗಿದ್ದ ಇಬ್ಬರು ವಿದೇಶಿ ಆಟಗಾರರ ಸ್ಥಾನದಲ್ಲಿ ಆರ್ಸಿಬಿ ಇಂಗ್ಲೆಂಡ್ ಆಟಗಾರರನ್ನು ಖರೀದಿಸಿದೆ. ಅದರಂತೆ ತಂಡಕ್ಕೆ ಆಂಗ್ಲ ವೇಗಿ ರೀಸ್ ಟೋಪ್ಲಿ ಹಾಗೂ ಯುವ ಬ್ಯಾಟರ್ ವಿಲ್ ಜಾಕ್ಸ್ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಆರ್ಸಿಬಿ ತಂಡದ 8 ವಿದೇಶಿ ಆಟಗಾರರ ಸ್ಲಾಟ್ಗಳು ಪೂರ್ಣಗೊಂಡಂತಾಗಿದೆ. ಆರ್ಸಿಬಿ ತಂಡದಲ್ಲಿರುವ ವಿದೇಶಿ ಆಟಗಾರರ ಪಟ್ಟಿ ಹೀಗಿದೆ...

1- ಫಾಫ್ ಡುಪ್ಲೆಸಿಸ್ (ನಾಯಕ)

ಡೇವಿಡ್ ವಿಲ್ಲಿ

ವನಿಂದು ಹಸರಂಗ

ಜೋಶ್ ಹ್ಯಾಝಲ್ವುಡ್

ಫಿನ್ ಅಲೆನ್

3- ಗ್ಲೆನ್ ಮ್ಯಾಕ್ಸ್ವೆಲ್

ವಿಲ್ ಜಾಕ್ಸ್

ರೀಸ್ ಟೋಪ್ಲಿ



















