
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಕೆಲ ತಂಡಗಳಿಂದ ಊಹಿಸಲಾಗದ ಪ್ರದರ್ಶನ ಬರುತ್ತಿದೆ. ಶುಕ್ರವಾರ ಐಪಿಎಲ್ನಲ್ಲಿ ಲಖನೌ ಸೂಪರ್ ಜೇಂಟ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಕೆಎಲ್ ರಾಹುಲ್ ನೇತೃತ್ವದ ಎಲ್ಎಸ್ಜಿ ತಂಡ 5 ವಿಕೆಟ್ಗಳ ಸುಲಭ ಜಯ ಸಾಧಿಸಿತು. ಇದೀಗ ಎಲ್ಎಸ್ಜಿ-ಎಸ್ಆರ್ಹೆಚ್ ಪಂದ್ಯದ ಬಳಿಕ ಐಪಿಎಲ್ 2023 ಪಾಯಿಂಟ್ ಟೇಬಲ್ನಲ್ಲಿ ಸಂಪೂರ್ಣ ಬದಲಾವಣೆ ಆಗಿದೆ. ಹಾಗಾದರೆ ಪಾಯಿಂಟ್ಸ್ ಟೇಬಲ್ ಹೇಗಿದೆ ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.
IPL 2023: ಶತಕ ಬಾರಿಸು ಎಂದ ಧೋನಿ ಫ್ಯಾನ್ಗೆ ಕೊಹ್ಲಿ ಪಾಠ ಕಲಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಆರೆಂಜ್ ಕ್ಯಾಪ್:
ಸಿಎಸ್ಕೆ ತಂಡದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇವರು ಜಿಟಿ ವಿರುದ್ಧ 92 ರನ್ ಹಾಗೂ ಲಖನೌ ವಿರುದ್ಧ 57 ರನ್ ಸಿಡಿಸಿದ್ದರು. ಈ ಮೂಲಕ ಆಡಿದ ಎರಡು ಪಂದ್ಯಗಳಲ್ಲಿ ಒಟ್ಟು 149 ರನ್ ಕಲೆಹಾಕಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಎಲ್ಎಸ್ಜಿಯ ಖೈಲ್ ಮೇಯರ್ಸ್ ಅವರಿದ್ದು 139 ರನ್ ಕಲೆಹಾಕಿದ್ದಾರೆ.
ಪರ್ಪಲ್ ಕ್ಯಾಪ್:
ಲಖನೌ ಸೂಪರ್ ಜೇಂಟ್ಸ್ ತಂಡದ ಮಾರ್ಕ್ ವುಡ್ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಡೆಲ್ಲಿ ವಿರುದ್ಧ 5 ವಿಕೆಟ್ ಕಬಳಿಸಿದ್ದರು. ಹಾಗೆಯೆ ಚೆನ್ನೈ ವಿರುದ್ಧ 3 ವಿಕೆಟ್ ಕಿತ್ತಿದ್ದಾರೆ. ಒಟ್ಟು 8 ವಿಕೆಟ್ ಪಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ಇದೇ ಲಖನೌ ತಂಡದ ರವಿ ಬಿಷ್ಟೋಯಿ ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದು ಆಡಿದ ಮೂರು ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 am, Sat, 8 April 23