ಡಬ್ಲ್ಯುಪಿಎಲ್‌ನ (WPL 2023) ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ವೈಡ್ ಬಾಲ್‌ಗೆ ಡಿಆರ್‌ಎಸ್ (DRS) ತೆಗೆದುಕೊಂಡಾಗ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಏಕೆಂದರೆ ಆಗ ಈ ನಿಯಮದ ಸಂಪೂರ್ಣ ಜ್ಞಾನ ಯಾರಿಗು ಇರಲಿಲ್ಲ. ಆದರೆ, ಡಬ್ಲ್ಯುಪಿಎಲ್‌ನ ಮೊದಲ ಸೀಸನ್‌ನಲ್ಲಿ ಬಳಸಲಾದ ಇದೇ ನಿಯಮವನ್ನು ಈಗ ಐಪಿಎಲ್ 2023 (IPL 2023) ರಲ್ಲಿಯೂ ಕಾಣಬಹುದಾಗಿದೆ. ಅಂಪೈರ್‌ನ ನಿರ್ಧಾರದ ವಿರುದ್ಧ ಡಿಆರ್‌ಎಸ್ ತೆಗೆದುಕೊಳ್ಳಲು ಅವಕಾಶ ನೀಡುವ ಈ ಹೊಸ ನಿಯಮವನ್ನು ಐಪಿಎಲ್‌ನಲ್ಲೂ ಜಾರಿಗೆ ತರಲು ಬಿಸಿಸಿಐ (BCCI) ಮುಂದಾಗಿದೆ. ಇದರಿಂದ ಬೌಲಿಂಗ್ ಮಾಡುವ ತಂಡ ಹಾಗೂ ಬೌಲರ್ಗೆ ಸಾಕಷ್ಟು ಅನುಕೂಲವಾಗಲಿದೆ.
ವಾಸ್ತವವಾಗಿ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಇದೇ ಮೊದಲ ಬಾರಿಗೆ ವೈಡ್ ಮತ್ತು ನೋ ಬಾಲ್ ನಿರ್ಧಾರವನ್ನು ಪರಿಶೀಲಿಸುವ ನಿಯಮವನ್ನು ಜಾರಿಗೆ ತರಲಾಗಿದೆ. ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ ಈ ನಿಯಮವನ್ನು ಬಳಸಲಾಗುತ್ತಿದೆ. ಈಗ ಈ ನಿಯಮವನ್ನು ಐಪಿಎಲ್‌ನಲ್ಲೂ ಬಳಸಲು ತೀರ್ಮಾನಿಸಲಾಗಿದೆ.
IND vs AUS: ಕಮಿನ್ಸ್ ಅಥವಾ ಸ್ಮಿತ್; ಕೊನೆಯ ಟೆಸ್ಟ್ಗೆ ಯಾರಾಗ್ತಾರೆ ಆಸೀಸ್ ನಾಯಕ?
ಈ ಹಿಂದೆ ಕೇವಲ ಅಂಪೈರ್ ನೀಡಿದ ಔಟ್ ನಿರ್ಣಯದ ವಿರುದ್ಧ ಡಿಆರ್‌ಎಸ್ ತೆಗದುಕೊಳ್ಳಲಾಗುತ್ತಿತ್ತು. ಆದರೆ ಈಗ ವೈಡ್ ಮತ್ತು ನೋ ಬಾಲ್ ನಿರ್ಧಾರದ ವಿರುದ್ಧವೂ ಡಿಆರ್‌ಎಸ್ ಬಳಸಬಹುದಾಗಿದೆ. ಪ್ರತಿ ಇನ್ನಿಂಗ್ಸ್‌ನಲ್ಲಿ ಪ್ರತಿ ತಂಡವು 2 ಎರಡು ಡಿಆರ್ಎಸ್ಗಳನ್ನು ತೆಗೆದುಕೊಳ್ಳುವ ಅವಕಾಶ ಹೊಂದಿರುತ್ತದೆ. ಆದರೆ, ಲೆಗ್ ಬೈ ನಿರ್ಧಾರಕ್ಕೆ ಡಿಆರ್‌ಎಸ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿಲ್ಲ.
ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ 2 ಪಂದ್ಯಗಳಲ್ಲಿ, ಆಟಗಾರರು ಈ ಹೊಸ ನಿಯಮವನ್ನು ನಿರ್ಭಯವಾಗಿ ಬಳಸಿಕೊಂಡರು. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಮೊದಲ ಪಂದ್ಯದಲ್ಲಿ ಮುಂಬೈ ಸ್ಪಿನ್ನರ್ ಸೈಕಾ ಇಶಾಕ್ ಎಸೆತವನ್ನು ಅಂಪೈರ್ ವೈಡ್ ಎಂದು ನಿರ್ಧಾರ ನೀಡಿದಾಗ, ಅಂಪೈರ್ ತೀರ್ಮಾನದ ವಿರುದ್ಧ ಮುಂಬೈ ಡಿಆರ್‌ಎಸ್ ತೆಗೆದುಕೊಂಡಿತು. ಬಳಿಕ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಬೇಕಾಯಿತು.
ಅದೇ ರೀತಿ, ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಸಹ ಈ ಹೊಸ ನಿಯಮವನ್ನು ಬಳಸಿಕೊಂಡರು. ಮೇಗನ್ ಅವರ ಫುಲ್ ಟಾಸ್ ಬಾಲ್ ಅನ್ನು ಬೌಂಡರಿ ಬಾರಿಸಿದಾಗ ಆ ಎಸೆತವನ್ನು ಆನ್-ಫೀಲ್ಡ್ ಅಂಪೈರ್ ನೋ ಬಾಲ್ ನೀಡಿದರು. ಆದರೆ, ಜೆಮಿಮಾ ಅಂಪೈರ್ ನಿರ್ಧಾರದ ವಿರುದ್ಧ ಡಿಆರ್‌ಎಸ್ ತೆಗೆದುಕೊಂಡರಾದರೂ ಯಶಸ್ವಿಯಾಗಲಿಲ್ಲ.
ಆದಾಗ್ಯೂ, ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಸೈಮನ್ ಟೌಫೆಲ್ ಈ ನಿಯಮದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವರ್ಷ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಜೊತೆಗಿನ ಸಂವಾದದಲ್ಲಿ, ಟಿ20 ಕ್ರಿಕೆಟ್‌ನಲ್ಲಿ ವೈಡ್ ಮತ್ತು ನೋ ಬಾಲ್ ವಿರುದ್ಧ ಡಿಆರ್‌ಎಸ್ ತೆಗೆದುಕೊಳ್ಳುವ ಈ ನಿಯಮವನ್ನು ಜಾರಿಗೆ ತರಬಾರದು ಎಂದು ಅವರು ಹೇಳಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Mon, 6 March 23