IND vs AUS: ಕಮಿನ್ಸ್ ಅಥವಾ ಸ್ಮಿತ್; ಕೊನೆಯ ಟೆಸ್ಟ್​ಗೆ ಯಾರಾಗ್ತಾರೆ ಆಸೀಸ್ ನಾಯಕ?

IND vs AUS: ಅಹಮದಾಬಾದ್‌ನಲ್ಲಿ ರೋಹಿತ್ ಶರ್ಮಾ ತಂಡ ಆಸೀಸ್ ಪಡೆಯನ್ನು ಸೋಲಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಡುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಿದ್ಧವಾಗಿದೆ.

IND vs AUS: ಕಮಿನ್ಸ್ ಅಥವಾ ಸ್ಮಿತ್; ಕೊನೆಯ ಟೆಸ್ಟ್​ಗೆ ಯಾರಾಗ್ತಾರೆ ಆಸೀಸ್ ನಾಯಕ?
ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್
Follow us
ಪೃಥ್ವಿಶಂಕರ
|

Updated on:Mar 06, 2023 | 11:46 AM

ಸ್ಟೀವ್ ಸ್ಮಿತ್ (Steve Smith) ನಾಯಕತ್ವದಲ್ಲಿ ಆಸ್ಟ್ರೇಲಿಯಾ ಆರು ವರ್ಷಗಳ ನಂತರ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತು. ನಿಯಮಿತ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅನುಪಸ್ಥಿತಿಯಲ್ಲಿ, ಇಂದೋರ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ (Border -Gavaskar Trophy ) ಸರಣಿಯ ಮೂರನೇ ಟೆಸ್ಟ್‌ನಲ್ಲಿ ಆಸೀಸ್ ತಂಡ ಭಾರತವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಆ ಟೆಸ್ಟ್‌ನಲ್ಲಿ ಪ್ಯಾಟ್ ಕಮಿನ್ಸ್ ಬದಲಿಗೆ ಮಾಜಿ ನಾಯಕ ಸ್ಮಿತ್ ತಂಡದ ನಾಯಕತ್ವವಹಿಸಿಕೊಂಡಿದ್ದರು. ಮೊದಲೆರಡು ಟೆಸ್ಟ್​ನಲ್ಲಿ ಹೀನಾಯವಾಗಿ ಸೋಲುಂಡ ನಂತರ ದೇಶದ ಮಾಜಿ ಕ್ರಿಕೆಟಿಗರು ಕಮಿನ್ಸ್ ನಾಯಕತ್ವವನ್ನು ಪ್ರಶ್ನಿಸಿದ್ದರು. ಅಲ್ಲದೆ ಟೀಕೆಗಳ ನಡುವೆ, ಅವರು ತಮ್ಮ ತಾಯಿಯ ದೈಹಿಕ ಅನಾರೋಗ್ಯದ ಕಾರಣ ಆಸ್ಟ್ರೇಲಿಯಾಕ್ಕೆ ಮರಳಿದ್ದರು. ಏತನ್ಮಧ್ಯೆ, ಸ್ಮಿತ್ ಅವರ ಬುದ್ಧಿವಂತಿಕೆಯು ಆಸೀಸ್ ತಂಡ ಇಂದೋರ್ ಟೆಸ್ಟ್ ಗೆಲ್ಲುವಂತೆ ಮಾಡಿತ್ತು. ಹೀಗಾಗಿ ನಾಯಕನ ಬದಲಾವಣೆ ಮ್ಯಾಜಿಕ್ ಕೆಲಸ ಮಾಡಿದೆ ಎಂದು ಆಸೀಸ್ ಮಾಜಿ ಆಟಗಾರರು ಸ್ಮಿತ್​ರನ್ನು ಹೊಗಳಿದ್ದರು. ಹೀಗಾಗಿ ಸ್ಮಿತ್ ಅವರೇ ಅಹಮದಾಬಾದ್‌ನಲ್ಲಿ ತಂಡವನ್ನು ಮುನ್ನಡೆಸುತ್ತಾರಾ? ಅಥವಾ ಸರಣಿಯ ನಾಲ್ಕನೇ ಟೆಸ್ಟ್‌ಗಾಗಿ ಕಮಿನ್ಸ್ ಭಾರತಕ್ಕೆ ಮರಳುತ್ತಾರಾ? ಎಂಬುದಕ್ಕೆ ಇಲ್ಲಿದೆ ಉತ್ತರ.

ಭಾರತ ಸೋತರೆ ಸರಣಿ ಡ್ರಾ

ಇಂದೋರ್ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿದೆ. ಸರಣಿ ಗೆಲುವಿಗಿಂತ ಫೈನಲ್‌ ಖಚಿತವಾಗಿರುವುದು ಆಸೀಸ್ ಪಾಳಯಕ್ಕೆ ಖುಷಿ ತಂದಿದೆ. ಸರಣಿಯ ಮೊದಲೆರಡು ಟೆಸ್ಟ್‌ಗಳಲ್ಲಿ ಸೋತಿರುವ ಕಾಂಗರೂಗಳಿಗೆ ಬಾರ್ಡರ್-ಗವಾಸ್ಕರ್ ಸರಣಿ ಗೆಲ್ಲುವ ಅವಕಾಶವಿಲ್ಲ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಸೋತರೆ ಸರಣಿ ಡ್ರಾ ಆಗಲಿದೆ. ಆದರೆ ಅಹಮದಾಬಾದ್ ಟೆಸ್ಟ್ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲು ಭಾರತವು ಅಹಮದಾಬಾದ್‌ನಲ್ಲಿ ಗೆಲ್ಲಲೇಬೇಕು.

WPL 2023: ಅಂದು ದ್ರಾವಿಡ್, ಇಂದು ಸ್ಮೃತಿ; ಐಪಿಎಲ್​ನಲ್ಲಿ ಆರ್​ಸಿಬಿ ಶುಭಾರಂಭ ಮಾಡಲೇ ಇಲ್ಲ..!

ಹೀಗಾಗಿ ಅಹಮದಾಬಾದ್‌ನಲ್ಲಿ ರೋಹಿತ್ ಶರ್ಮಾ ತಂಡ ಆಸೀಸ್ ಪಡೆಯನ್ನು ಸೋಲಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಡುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಿದ್ಧವಾಗಿದೆ. ಕೊನೆಯ ಟೆಸ್ಟ್‌ನಲ್ಲಿ ಆಸೀಸ್ ತಂಡವನ್ನು ಪ್ಯಾಟ್ ಕಮಿನ್ಸ್ ಅಥವಾ ಸ್ಮಿತ್, ಯಾರು ಮುನ್ನಡೆಸುತ್ತಾರೆ ಎಂಬ ಗೊಂದಲ ಇನ್ನೂ ಇದೆ. ಕಮಿನ್ಸ್ ಇನ್ನೂ ಭಾರತಕ್ಕೆ ಮರಳಿಲ್ಲ. ಆದರೆ, ಅವರು ತಂಡದೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಅದಕ್ಕೂ ಮುನ್ನ ನಾಯಕತ್ವದ ಬಗ್ಗೆ ಆಸ್ಟ್ರೇಲಿಯಾ ನಿರ್ಧರಿಸಲಿದೆ.

ಕಮಿನ್ಸ್ ತಂಡಕ್ಕೆ ಮರಳುವುದು ಅನುಮಾನ

ನಾಲ್ಕನೇ ಟೆಸ್ಟ್ ಮಾರ್ಚ್ 9 ರಿಂದ ಆರಂಭವಾಗುತ್ತದೆ. ಹೀಗಾಗಿ ಪಂದ್ಯ ಆರಂಭವಾಗುವುದಕ್ಕೆ 3 ದಿನಗಳಿಗಿಂತ ಕಡಿಮೆ ಸಮಯ ಇದೆ. ಆದ್ದರಿಂದ ಪಂದ್ಯಕ್ಕೂ ಮುನ್ನ ಕಮಿನ್ಸ್ ತಂಡಕ್ಕೆ ಮರಳುವುದು ಅನುಮಾನ ಎಂದು ಆಸ್ಟ್ರೇಲಿಯಾ ಅಭಿಮಾನಿಗಳ ಅಭಿಪ್ರಾಯವಾಗಿದೆ. ಹಾಗಿದ್ದಲ್ಲಿ, ಸ್ಮಿತ್ ಇನ್ನೂ ಒಂದು ಟೆಸ್ಟ್ ಅನ್ನು ಮುನ್ನಡೆಸಬಹುದು. ಸ್ಮಿತ್ 2018 ರವರೆಗೆ ಆಸೀಸ್​ ತಂಡದ ನಿಯಮಿತ ನಾಯಕರಾಗಿ ನಾಯಕತ್ವವನ್ನು ನಿಭಾಯಿಸಿದ್ದರು. ಆದರೆ ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಸಿಕ್ಕಿಬಿದ್ದ ನಂತರ ಸ್ಮಿತ್ ತಮ್ಮ ನಾಯಕತ್ವವನ್ನು ಕಳೆದುಕೊಂಡರು.

ತಂಡದ ನಾಯಕನಾಗುವ ಆಸೆ ನನಗಿಲ್ಲ

ಆದಾಗ್ಯೂ, 2021 ರಲ್ಲಿ ಕಮಿನ್ಸ್‌ಗೆ ಟೆಸ್ಟ್ ನಾಯಕತ್ವವನ್ನು ಹಸ್ತಾಂತರಿಸಿದಾಗ ಸ್ಮಿತ್ ಅವರನ್ನು ಉಪನಾಯಕರನ್ನಾಗಿ ಮಾಡಲಾಯಿತು. ಪ್ರಸ್ತುತ ಕಮಿನ್ಸ್ ನಾಯಕತ್ವವನ್ನು ಪ್ರಶ್ನಿಸಲಾಗುತ್ತಿದೆ. ಹಾಗಾದರೆ ಸ್ಮಿತ್ ಮತ್ತೊಮ್ಮೆ ಆಸೀಸ್​ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಆದರೆ ಇದಕ್ಕೆಲ್ಲ ಸ್ಪಷ್ಟನೆ ನೀಡಿರುವ ಸ್ಮಿತ್ ಮತ್ತೊಮ್ಮೆ ಆಸ್ಟ್ರೇಲಿಯಾ ತಂಡದ ನಾಯಕನಾಗುವ ಆಸೆ ನನಗಿಲ್ಲ ಎಂದಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Mon, 6 March 23

ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಬೆಂಗಳೂರಿನ ಬಯೋ ಇನ್ನೋವೇಶನ್ ಸೆಂಟರ್​ನಲ್ಲಿ ಅಗ್ನಿ ಅವಘಡ
ಬೆಂಗಳೂರಿನ ಬಯೋ ಇನ್ನೋವೇಶನ್ ಸೆಂಟರ್​ನಲ್ಲಿ ಅಗ್ನಿ ಅವಘಡ
ಬಿಗ್ ಬಾಸ್ ಮುಗಿದ ಬಳಿಕ ಎಲ್​ಎಲ್​ಬಿ ಓದಲು ರೆಡಿ ಆದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮುಗಿದ ಬಳಿಕ ಎಲ್​ಎಲ್​ಬಿ ಓದಲು ರೆಡಿ ಆದ ಚೈತ್ರಾ ಕುಂದಾಪುರ