WPL 2023: ಅಂದು ದ್ರಾವಿಡ್, ಇಂದು ಸ್ಮೃತಿ; ಐಪಿಎಲ್ನಲ್ಲಿ ಆರ್ಸಿಬಿ ಶುಭಾರಂಭ ಮಾಡಲೇ ಇಲ್ಲ..!
WPL 2023: ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡದ ಈ ಪಂದ್ಯದಲ್ಲಿ ದೆಹಲಿ ಸೃಷ್ಟಿಸಿದ ಬಿರುಗಾಳಿ ಮುಂಬೈಗಿಂತ ಹೆಚ್ಚಾಗಿದ್ದು, ಇದರೊಂದಿಗೆ ಆರ್‌ಸಿಬಿಗೆ 15 ವರ್ಷದ ಆ ಕಹಿ ನೆನಪು ಮತ್ತೆ ಕಾಡಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ನಿರೀಕ್ಷಿಸಿದ್ದ ರೋಚಕತೆ ಇಲ್ಲಿಯವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಕಂಡುಬಂದಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಲೀಗ್‌ನ ಮೊದಲ ಪಂದ್ಯದಲ್ಲಿ 207 ರನ್ ಗಳಿಸಿತ್ತು. ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Royal Challengers Bangalore and Delhi Capitals) ಮುಖಾಮುಖಿಯಾಗಿದ್ದವು. ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ದೆಹಲಿ ಸೃಷ್ಟಿಸಿದ ಬಿರುಗಾಳಿ ಮುಂಬೈಗಿಂತ ಹೆಚ್ಚಾಗಿದ್ದು, ಇದರೊಂದಿಗೆ ಆರ್‌ಸಿಬಿಗೆ 15 ವರ್ಷದ ಆ ಕಹಿ ನೆನಪು ಮತ್ತೆ ಕಾಡಿದೆ. ಡಬ್ಲ್ಯುಪಿಎಲ್‌ನ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 223 ರನ್ ಗಳಿಸಿತು. ತಂಡದ ಪರ ಶಫಾಲಿ ವರ್ಮಾ (Shefali Verma) 84 ಮತ್ತು ಮೆಗ್ ಲ್ಯಾನಿಂಗ್ 72 ರನ್ ಗಳಿಸಿ ತಮ್ಮ ತಂಡವನ್ನು ಈ ಸ್ಕೋರ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಒಂದೇ ರೀತಿಯ ಪ್ರಾರಂಭ
ಈ ಪಂದ್ಯದಲ್ಲಿ ಆರ್ಸಿಬಿ ಬೌಲರ್‌ಗಳು ತೀರ ದುಬಾರಿಯಾದರು. ಪ್ರತಿಯೊಬ್ಬ ಬೌಲರ್ಗಳ ಎಕಾನಮಿ ರೇಟ್ 10ಕ್ಕಿಂತಲೂ ಹೆಚ್ಚಿತ್ತು. ಇದರೊಂದಿಗೆ 15 ವರ್ಷಗಳ ಹಿಂದೆ ಐಪಿಎಲ್‌ನ ಮೊದಲ ಸೀಸನ್ನ ಮೊದಲ ಪಂದ್ಯವನ್ನು ಆರ್ಸಿಬಿ ಪುರುಷರ ತಂಡ ಯಾವ ರೀತಿ ಆಡಿತ್ತೋ, ಅದೇ ರೀತಿಯ ಪಂದ್ಯವನ್ನು ಮಹಿಳಾ ತಂಡ ಆಡಿದೆ. 2008ರ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಬಿರುಸಿನ ಶತಕ ಗಳಿಸಿ ಆರ್ಸಿಬಿ ಬೌಲರ್ಗಳನ್ನು ಕಾಡಿದರು. ಆ ಪಂದ್ಯದಲ್ಲಿ ಕೋಲ್ಕತ್ತಾ ತಂಡ ನಿಗದಿತ 20 ಓವರ್‌ಗಳಲ್ಲಿ 222 ರನ್ ಗಳಿಸಿ ಕೇವಲ ಮೂರು ವಿಕೆಟ್ ಕಳೆದುಕೊಂಡಿತ್ತು.
WPL 2023: ಅಂದು ದ್ರಾವಿಡ್, ಇಂದು ಸ್ಮೃತಿ; ಐಪಿಎಲ್ನಲ್ಲಿ ಆರ್ಸಿಬಿ ಶುಭಾರಂಭ ಮಾಡಲೇ ಇಲ್ಲ..!
ಡಬ್ಲ್ಯುಪಿಎಲ್ನಲ್ಲೂ ಇದೇ ರೀತಿಯ ಫಲಿತಾಂಶ ಕಂಡುಬಂದಿದೆ. ಆರ್ಸಿಬಿ ಹಾಗೂ ಡೆಲ್ಲಿ ನಡುವೆ ನಡೆದ ಈ ಪಂದ್ಯದಲ್ಲಿ ಡೆಲ್ಲಿ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 223 ರನ್ ಗಳಿಸಿತು. ಇದರಲ್ಲಿ ಒಂದು ವ್ಯತ್ಯಾಸವೆಂದರೆ ಎರಡೂ ಲೀಗ್ಗಳಲ್ಲೂ ಆರ್ಸಿಬಿ ಬಿರುದ್ಧ ಆಡಿದ ಪುರುಷರ ತಂಡ 222 ರನ್ಗಳಿಸಿದರೆ ಮಹಿಳಾ ತಂಡವು ತನ್ನ ಮೊದಲ ಪಂದ್ಯದಲ್ಲಿ 223 ರನ್ ಗಳಿಸಿದೆ.
ಡೆಲ್ಲಿ ಆರಂಭಿಕರ ಅಬ್ಬರ
ವಾಸ್ತವವಾಗಿ ಡೆಲ್ಲಿ ಇದಕ್ಕೂ ಹೆಚ್ಚಿನ ಟಾರ್ಗೆಟ್ ಸೆಟ್ ಮಾಡುವ ಅವಕಾಶ ಹೊಂದಿತ್ತು. ಆದರೆ ಹೀದರ್ ನೈಟ್ ಒಂದೇ ಓವರ್‌ನಲ್ಲಿ ಮೊದಲು ಲ್ಯಾನಿಂಗ್ ಮತ್ತು ನಂತರ ಶಫಾಲಿಯನ್ನು ಔಟ್ ಮಾಡುವ ಮೂಲಕ ಡೆಲ್ಲಿಯ ಬಿರುಗಾಳಿಯ ಬ್ಯಾಟಿಂಗ್ಗೆ ಬ್ರೇಕ್ ಹಾಕಿದರು. ಈ ಇಬ್ಬರು ಬ್ಯಾಟರ್ಗಳಲ್ಲಿ ಯಾರಾದರೂ ಪೂರ್ಣ 20 ಓವರ್‌ಗಳನ್ನು ಆಡಿದ್ದರೆ, ದೆಹಲಿಯ ಸ್ಕೋರ್ 230 ರಿಂದ 240 ದಾಟಬಹುದಿತ್ತು. ಈ ಪಂದ್ಯದಲ್ಲಿ 45 ಎಸೆತಗಳನ್ನು ಎದುರಿಸಿದ ಶಫಾಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಅವರಲ್ಲದೆ ಲ್ಯಾನಿಂಗ್ 43 ಎಸೆತಗಳನ್ನು ಎದುರಿಸಿ 14 ಬೌಂಡರಿಗಳನ್ನು ಬಾರಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:22 am, Mon, 6 March 23