IPL 2023: ಗಂಗೂಲಿಯನ್ನು ದುರುಗುಟ್ಟಿದ ವಿರಾಟ್ ಕೊಹ್ಲಿ: ಮತ್ತೊಂದು ವಿಡಿಯೋ ವೈರಲ್

Virat Kohli vs Sourav Ganguly: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ಗಂಗೂಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

IPL 2023: ಗಂಗೂಲಿಯನ್ನು ದುರುಗುಟ್ಟಿದ ವಿರಾಟ್ ಕೊಹ್ಲಿ: ಮತ್ತೊಂದು ವಿಡಿಯೋ ವೈರಲ್
Virat Kohli - Sourav Ganguly
Edited By:

Updated on: Apr 17, 2023 | 11:30 PM

IPL 2023: ವಿರಾಟ್ ಕೊಹ್ಲಿ (Virat Kohli) ಹಾಗೂ ಸೌರವ್ ಗಂಗೂಲಿ (Sourav Ganguly) ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಬಹಿರಂಗವಾಗಿದೆ. ಕಿಂಗ್ ಕೊಹ್ಲಿಯನ್ನು ಟೀಮ್ ಇಂಡಿಯಾ (Team India) ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಶುರುವಾದ ಈ ಶೀತಲ ಸಮರ ಇದೀಗ ಐಪಿಎಲ್ (IPL 2023)​ ಅಂಗಳಕ್ಕೆ ಬಂದು ನಿಂತಿದೆ. ಅಷ್ಟೇ ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದ ವೇಳೆ ಕಂಡ ಬಂದ ದೃಶ್ಯಗಳು ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರುಗೊಳಿಸಿತ್ತು. ಇದೀಗ ಇಬ್ಬರ ನಡುವಣ ಮುನಿಸನ್ನು ಪುಷ್ಠೀಕರಿಸುವಂತಹ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲೂ ಕೂಡ ಸೌರವ್ ಗಂಗೂಲಿಯನ್ನು ಟಾರ್ಗೆಟ್ ಮಾಡುತ್ತಿರುವುದು ವಿರಾಟ್ ಕೊಹ್ಲಿ ಎಂಬುದು ವಿಶೇಷ.

ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಪ್ಯಾಡ್ ಕಟ್ಟಿ ಬ್ಯಾಟಿಂಗ್​ಗೆ ಇಳಿಯಲು ಸಜ್ಜಾಗಿ ಕೂತಿರುವುದನ್ನು ಕಾಣಬಹುದು. ಈ ವೇಳೆ ಕೊಹ್ಲಿಯನ್ನು ನೋಡಿಯೂ ನೋಡದಂತೆ ಗಂಗೂಲಿ ಹಾದು ಹೋಗಿದ್ದರು. ಆದರೆ ಅತ್ತ ವಿರಾಟ್ ಕೊಹ್ಲಿ ಮಾತ್ರ ಗಂಗೂಲಿಯನ್ನು ದುರುಗುಟ್ಟಿ ನೋಡುತ್ತಿರುವುದು ಕಾಣಬಹುದು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ
Rinku Singh: ಬಡ ಕ್ರಿಕೆಟಿಗರಿಗಾಗಿ ಹಾಸ್ಟೆಲ್ ನಿರ್ಮಿಸಿದ ರಿಂಕು ಸಿಂಗ್
IPL 2023: ಪಂದ್ಯದ ನಡುವೆ ಮೈದಾನದಲ್ಲೇ ಜಗಳಕ್ಕಿಳಿದ ಡೆಲ್ಲಿ ಬಾಯ್ಸ್​..!
IPL 2023: ಕೆಎಲ್ ರಾಹುಲ್ ಅಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಉಡೀಸ್
IPL 2023: ಸೌರವ್ ಗಂಗೂಲಿಯನ್ನು ಗುರಾಯಿಸಿದ ವಿರಾಟ್ ಕೊಹ್ಲಿ..!

ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಡಗೌಟ್​ನಲ್ಲಿ ಕೂತಿದ್ದ ಸೌರವ್ ಗಂಗೂಲಿಯನ್ನು ಗುರಾಯಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.
ಅಷ್ಟೇ ಅಲ್ಲದೆ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ಪರಸ್ಪರ ಹಸ್ತಲಾಘವ ಮಾಡಿರಲಿಲ್ಲ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು. ಇದೀಗ ಈ ಪಟ್ಟಿಗೆ ಮತ್ತೊಂದು ವಿಡಿಯೋ ಕೂಡ ಸೇರ್ಪಡೆಯಾಗಿದ್ದು, ಇದರೊಂದಿಗೆ ವಿರಾಟ್ ಕೊಹ್ಲಿಯ ಟಾರ್ಗೆಟ್ ಗಂಗೂಲಿ ಎಂಬುದು ಬಹಿರಂಗವಾಗಿದೆ.

ಕಿಂಗ್ ಕೊಹ್ಲಿ-ದಾದಾ ಮುನಿಸು:

2021 ರಲ್ಲಿ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ನಾಯಕತ್ವದಿಂದ ವಜಾಗೊಳಿಸಲಾಗಿತ್ತು. ಈ ವೇಳೆ ಬಿಸಿಸಿಐ ಅಧ್ಯಕ್ಷರಾಗಿದದ್ದು ಸೌರವ್ ಗಂಗೂಲಿ. ಅಂದು ನಾಯಕತ್ವದಿಂದ ಕೆಳಗಿಳಿಸುವ ತಮ್ಮ ನಿರ್ಧಾರವನ್ನು ವಿರಾಟ್ ಕೊಹ್ಲಿಗೆ ತಿಳಿಸಲಾಗಿದೆ ಎಂದು ಸೌರವ್ ಗಂಗೂಲಿ ತಿಳಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ಮುಂಚಿತವಾಗಿ ತಿಳಿಸದೆ ಬಿಸಿಸಿಐ ಸುಳ್ಳು ಹೇಳಿದೆ ಎಂದು ಆರೋಪಿಸಿದ್ದರು.

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಒಂದೂವರೆ ಗಂಟೆಗಳ ಮೊದಲು ಚೇತನ್ ಶರ್ಮಾ ಅವರು ದೂರವಾಣಿ ಮೂಲಕ ಈ ಕ್ರಮದ ಬಗ್ಗೆ ತಿಳಿಸಿದ್ದರು ಎಂದು ಕೊಹ್ಲಿ ಹೇಳಿದ್ದರು. ಈ ಹೇಳಿಕೆಯ ಬಳಿಕ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಬಹಿರಂಗವಾಗಿತ್ತು.

ಇದನ್ನೂ ಓದಿ: IPL 2023: ಪಂದ್ಯದ ನಡುವೆ ಮೈದಾನದಲ್ಲೇ ಜಗಳಕ್ಕಿಳಿದ ಡೆಲ್ಲಿ ಬಾಯ್ಸ್​..!

ಇದೀಗ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ಗಂಗೂಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ನಡುವೆ ಆರ್​ಸಿಬಿ-ಡೆಲ್ಲಿ ನಡುವಣ ಪಂದ್ಯದ ವೇಳೆ ಇಬ್ಬರು ಮತ್ತೆ ಮುಖಾಮುಖಿಯಾಗಿದ್ದು, ಇದಾಗ್ಯೂ ಕೊಹ್ಲಿ-ದಾದಾ ಹಳೆಯ ದ್ವೇಷವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಚರ್ಚಗೆ ಕಾರಣವಾಗಿದೆ.