IPL 2024 Auction: 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ 25 ಆಟಗಾರರು..!
IPL 2024 Auction: ಐಪಿಎಲ್ ಸೀಸನ್ 17 ಕ್ಕಾಗಿ ಡಿಸೆಂಬರ್ 19 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಈ ಹರಾಜಿನಲ್ಲಿ 1166 ಆಟಗಾರರ ಹೆಸರು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಲಾಗುತ್ತದೆ. ಇದಾದ ಬಳಿಕವಷ್ಟೇ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಫೈನಲ್ ಪಟ್ಟಿ ಪ್ರಕಟವಾಗಲಿದೆ.
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಕ್ಕಾಗಿ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಭಾಗವಾಗಿ ಈಗಾಗಲೇ ಆಟಗಾರರ ರಿಟೈನ್ ಹಾಗೂ ರಿಲೀಸ್ ಪ್ರಕ್ರಿಯೆಗಳು ಮುಗಿದಿದೆ. ಅಲ್ಲದೆ ಇದೀಗ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಒಟ್ಟು ಆಟಗಾರರ ಪಟ್ಟಿ ಪ್ರಕಟವಾಗಿದೆ. ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು 1,166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 830 ಭಾರತೀಯ ಆಟಗಾರರಿದ್ದರೆ, 336 ವಿದೇಶಿ ಆಟಗಾರರಿದ್ದಾರೆ.
ಈ 1,166 ಆಟಗಾರರಲ್ಲಿ ಈಗಾಗಲೇ ರಾಷ್ಟ್ರೀಯ ತಂಡದ ಪರ ಆಡಿದ 212 ಆಟಗಾರರಿದ್ದಾರೆ. ಹಾಗೆಯೇ 909 ಆಟಗಾರರು ಅನ್ಕ್ಯಾಪ್ಡ್. ಅಂದರೆ ಇನ್ನು ಸಹ ರಾಷ್ಟ್ರೀಯ ತಂಡದ ಪರ ಆಡದ ಆಟಗಾರರು. ವಿಶೇಷ ಎಂದರೆ 1166 ಆಟಗಾರರಲ್ಲಿ ಗರಿಷ್ಠ ಮೂಲ ಬೆಲೆ ಪ್ರಕಟಿಸಿರುವುದು ಕೇವಲ 25 ಆಟಗಾರರು ಮಾತ್ರ.
ಹೀಗೆ 2 ಕೋಟಿ ರೂ. ಮೂಲ ಬೆಲೆ ಘೋಷಿಸಿರುವ 25 ಆಟಗಾರರ ಪಟ್ಟಿಯಲ್ಲಿ ಭಾರತದ ನಾಲ್ವರು ಆಟಗಾರರ ಹೆಸರು ಕಾಣಿಸಿಕೊಂಡಿದೆ. ಹಾಗೆಯೇ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದಿಂದ ತಲಾ 7 ಆಟಗಾರರಿದ್ದಾರೆ. ಇನ್ನು ಸೌತ್ ಆಫ್ರಿಕಾ ತಂಡದ ಮೂವರು, ನ್ಯೂಝಿಲೆಂಡ್, ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ತಂಡದಿಂದ ಒಬ್ಬೊಬ್ಬ ಆಟಗಾರರು 2 ಕೋಟಿ ರೂ. ಬೇಸ್ ಪ್ರೈಸ್ ಘೋಷಿಸಿದ್ದಾರೆ. ಅದರಂತೆ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 25 ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
- ಹರ್ಷಲ್ ಪಟೇಲ್ (ಭಾರತ)
- ಶಾರ್ದೂಲ್ ಠಾಕೂರ್ (ಭಾರತ)
- ಉಮೇಶ್ ಯಾದವ್ (ಭಾರತ)
- ಕೇದಾರ್ ಜಾಧವ್ (ಭಾರತ)
- ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ್)
- ಶಾನ್ ಅಬಾಟ್ (ಆಸ್ಟ್ರೇಲಿಯಾ)
- ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ)
- ಜೋಶ್ ಹ್ಯಾಝಲ್‌ವುಡ್ (ಆಸ್ಟ್ರೇಲಿಯಾ)
- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)
- ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ)
- ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
- ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ್)
- ಟಾಮ್ ಬ್ಯಾಂಟನ್ (ಇಂಗ್ಲೆಂಡ್)
- ಹ್ಯಾರಿ ಬ್ರೂಕ್ (ಇಂಗ್ಲೆಂಡ್)
- ಜಾಮಿ ಓವರ್‌ಟನ್ (ಇಂಗ್ಲೆಂಡ್)
- ಬೆನ್ ಡಕೆಟ್ (ಇಂಗ್ಲೆಂಡ್)
- ಆದಿಲ್ ರಶೀದ್ (ಇಂಗ್ಲೆಂಡ್)
- ಡೇವಿಡ್ ವಿಲ್ಲಿ (ಇಂಗ್ಲೆಂಡ್)
- ಕ್ರಿಸ್ ವೋಕ್ಸ್ (ಇಂಗ್ಲೆಂಡ್)
- ಲಾಕಿ ಫರ್ಗುಸನ್ (ನ್ಯೂಝಿಲೆಂಡ್)
- ಜೆರಾಲ್ಡ್ ಕೋಟ್ಜಿ (ಸೌತ್ ಆಫ್ರಿಕಾ)
- ರಿಲೀ ರೊಸ್ಸೌ (ಸೌತ್ ಆಫ್ರಿಕಾ)
- ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ಸೌತ್ ಆಫ್ರಿಕಾ)
- ಏಂಜೆಲೊ ಮ್ಯಾಥ್ಯೂಸ್ (ಶ್ರೀಲಂಕಾ)
ಇದನ್ನೂ ಓದಿ: Virat Kohli: ಸಚಿನ್ ಅವರ 3 ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ
ಐಪಿಎಲ್ ಹರಾಜು ಯಾವಾಗ?
ಐಪಿಎಲ್ ಸೀಸನ್ 17 ಕ್ಕಾಗಿ ಡಿಸೆಂಬರ್ 19 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಈ ಹರಾಜಿನಲ್ಲಿ 1166 ಆಟಗಾರರ ಹೆಸರು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಲಾಗುತ್ತದೆ. ಇದಾದ ಬಳಿಕವಷ್ಟೇ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಫೈನಲ್ ಪಟ್ಟಿ ಪ್ರಕಟವಾಗಲಿದೆ.