
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ದುಬೈ ಕೋಕಾಕೋಲ ಅರೇನಾದಲ್ಲಿ ಇಂದು (ಡಿ.19) ನಡೆಯಲಿರುವ ಹರಾಜಿನಲ್ಲಿ ಒಟ್ಟು 333 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇವರಲ್ಲಿ ಈ ಬಾರಿಯ ಐಪಿಎಲ್ನಲ್ಲಿ ಅವಕಾಶ ಸಿಗಲಿರುವುದು ಕೇವಲ 77 ಆಟಗಾರರಿಗೆ ಮಾತ್ರ. ಅಂದರೆ 10 ತಂಡಗಳಲ್ಲಿ ಕೇವಲ 77 ಸ್ಲಾಟ್ಗಳು ಮಾತ್ರ ಖಾಲಿಯಿವೆ. ಈ ಖಾಲಿಯಿರುವ ಸ್ಥಾನಗಳಿಗೆ ಮಾತ್ರ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಈ ಬಾರಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.
ಇನ್ನು ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿರುವ 333 ಆಟಗಾರರ ಪಟ್ಟಿಯನ್ನು 19 ಸೆಟ್ಗಳಾಗಿ ವಿಂಗಡಿಸಲಾಗಿದೆ. ಈ ಸೆಟ್ಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಸ್ಟಾರ್ ಬ್ಯಾಟರ್ಗಳು. ಇದಾದ ಬಳಿಕ ಆಲ್ರೌಂಡರ್ಗಳ ಪಟ್ಟಿ ಬರಲಿದೆ. ಹಾಗೆಯೇ ಮೂರನೇ ಸೆಟ್ನಲ್ಲಿ ಸ್ಟಾರ್ ವಿಕೆಟ್ ಕೀಪರ್ಗಳು ಕಾಣಿಸಿಕೊಳ್ಳಲಿದ್ದಾರೆ. ಇನ್ನು 4ನೇ ಸೆಟ್ನಲ್ಲಿ ಪ್ರಮುಖ ವೇಗಿಗಳಿದ್ದರೆ, 5ನೇ ಸೆಟ್ನಲ್ಲಿ ಸ್ಪಿನ್ನರ್ಗಳಿದ್ದಾರೆ. ಅದರಂತೆ 19 ಸೆಟ್ಗಳಲ್ಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಇದನ್ನೂ ಓದಿ: IPL 2024 Auction Live: ಐಪಿಎಲ್ 2024 ಹರಾಜಿಗೆ ಆಗಮಿಸಿದ ರಿಷಭ್ ಪಂತ್
Published On - 11:58 am, Tue, 19 December 23