ಮಿನಿ ಹರಾಜಿಗೂ ಮುನ್ನ ಎಲ್ಲಾ 10 ತಂಡಗಳ ಬಳಿ ಉಳಿದಿರುವ ಹಣವೆಷ್ಟು ಗೊತ್ತಾ?
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ 2024ನ ಡಿಸೆಂಬರ್ 19 ರಂದು, ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಎಲ್ಲಾ ತಂಡಗಳ ಬಳಿ ಬಾಕಿ ಹಣವೆಷ್ಟು ಉಳಿದಿದೆ ಮತ್ತು ಯಾವ ತಂಡದ ಬಳಿ ಅಧಿಕ ಮೊತ್ತ ಉಳಿದಿದೆ ಎಂದು ತಿಳಿಯಿರಿ.
ಪ್ರತಿ ವರ್ಷದಂತೆ ಈ ಬಾರಿ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ತೀವ್ರ ಕುತೂಹಲ ಕೆರಳಿಸಿದೆ. ಬಹು ನಿರೀಕ್ಷಿತ ಐಪಿಎಲ್ 2024 ತಂಡಗಳ ಹರಾಜು ಪ್ರಕ್ರಿಯೆ ಇನ್ನೇನು ಸಮೀಪಿಸುತ್ತಿದೆ. ಡಿಸೆಂಬರ್ 19 ರಂದು, ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಪ್ರತಿಯೊಂದು ತಂಡಗಳು ತಮಗೆ ಬೇಕಾದ ಆಟಗಾರರ ಖರೀದಿಗಾಗಿ ಈಗಾಗಲೇ ಪ್ಲಾನ್ ಸಿದ್ದಪಡಿಸಿವೆ. ಅಲ್ಲದೆ ಮಿನಿ ಹರಾಜಿಗೂ ಮುನ್ನ ತಂಡಗಳು ತಮ್ಮಲ್ಲಿ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿ ನೀಡಲು ನ. 26 ರವರೆಗೆ ಗಡುವು ನೀಡಲಾಗಿದೆ. ಅದಕ್ಕೂ ಮುನ್ನ ಎಲ್ಲಾ ತಂಡಗಳ ಬಳಿ ಬಾಕಿ ಉಳಿದಿರುವ ಹಣವೆಷ್ಟು? ಯಾವ ತಂಡದ ಬಳಿ ಅಧಿಕ ಮೊತ್ತ ಉಳಿದಿದೆ ಎಂಬುದನ್ನು ನೋಡುವುದಾದರೆ..
ಮಿನಿ ಹರಾಜಿಗೂ ಮುನ್ನ ಈಗಾಗಲೇ ಆಟಗಾರರ ಟ್ರೆಡಿಂಗ್ ಕೂಡ ಮುಗಿದಿದ್ದು, ಕೆಲವು ತಂಡಗಳು ತಮಗೆ ಬೇಕಾದ ಆಟಗಾರರನ್ನು ಟ್ರೆಡಿಂಗ್ ಮೂಲಕ ತಮ್ಮ ತೆಕ್ಕೆಗೆ ಹಾಕಿಕೊಂಡಿವೆ. ಅದರಂತೆ ಈ ಹಿಂದೆ ಸನ್ ರೈಸರ್ಸ್ ತ ತಂಡದಲ್ಲಿದ್ದ ಸ್ಟಾರ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್, ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಹರಾಜಿಗೂ ಮುನ್ನ 10 ತಂಡಗಳಿಂದ ಗೇಟ್ಪಾಸ್ ಪಡೆದ ಆಟಗಾರರು ಯಾರ್ಯಾರು? ಸಂಭಾವ್ಯ ಪಟ್ಟಿ ಇಲ್ಲಿದೆ
ಅದೇ ರೀತಿಯಾಗಿ ಅವೇಶ್ ಖಾನ್ ರನ್ನು ರಾಜಸ್ಥಾನ ರಾಯಲ್ಸ್ ಗೆ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ಗೆ ಟ್ರೆಡಿಂಗ್ ಮೂಲಕ ಖರೀದಿಸಲಾಗಿದೆ. ಇನ್ನುಳಿದಂತೆ ಹರಾಜಿಗೂ ಮುನ್ನ ಯಾವ್ಯಾವ ತಂಡದ ಬಳಿ ಎಷ್ಟೆಷ್ಟು ಹಣವಿದೆ ಎಂಬುದನ್ನು ನೋಡುವುದದಾರೆ..
ಈಗ ಪ್ರತಿ ತಂಡದ ಹರಾಜು ಪರ್ಸ್ ಹೀಗಿದೆ
- ಪಂಜಾಬ್ ಕಿಂಗ್ಸ್: 12.20 ಕೋಟಿ ರೂ.
- ಸನ್‌ರೈಸರ್ಸ್ ಹೈದರಾಬಾದ್: 6.55 ಕೋಟಿ ರೂ.
- ಗುಜರಾತ್ ಟೈಟಾನ್ಸ್: 4.45 ಕೋಟಿ ರೂ.
- ದೆಹಲಿ ಕ್ಯಾಪಿಟಲ್ಸ್: 4.45 ಕೋಟಿ ರೂ.
- ಲಕ್ನೋ ಸೂಪರ್ ಜೈಂಟ್ಸ್: 3.55 ಕೋಟಿ ರೂ.
- ರಾಜಸ್ಥಾನ್ ರಾಯಲ್ಸ್: 3.35 ಕೋಟಿ ರೂ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು: 1.75 ಕೋಟಿ ರೂ.
- ಕೋಲ್ಕತ್ತಾ ನೈಟ್ ರೈಡರ್ಸ್: 1.65 ಕೋಟಿ ರೂ.
- ಚೆನ್ನೈ ಸೂಪರ್ ಕಿಂಗ್ಸ್: 1.50 ಕೋಟಿ ರೂ.
- ಮುಂಬೈ ಇಂಡಿಯನ್ಸ್: 50 ಲಕ್ಷ ರೂ.
ಇದನ್ನೂ ಓದಿ: IPL 2024: ಮುಂಬೈಗೆ ಹಾರ್ದಿಕ್ ಪಾಂಡ್ಯ? ಗುಜರಾತ್ ಸಾರಥ್ಯ ಯಾರಿಗೆ? ರೇಸ್ನಲ್ಲಿ ಇಬ್ಬರು
ಈ ಬಾರಿಯ ಹರಾಜು ಪ್ರಕ್ರಿಯೆಗೆ ಪ್ರತಿ ತಂಡದ ಪರ್ಸ್ ಮೊತ್ತವನ್ನು 100 ಕೋಟಿ ರೂ. ಹೆಚ್ಚಿಸಲಾಗಿದೆ. ಕಳೆದ ವರ್ಷ ಈ ಪರ್ಸ್ ಮೊತ್ತ 95 ಕೋಟಿ ರೂ. ಇತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:56 pm, Sat, 25 November 23