IPL 2024 Final: ಇಂದು KKR vs SRH ನಡುವೆ ಫೈನಲ್ ಪಂದ್ಯ
IPL 2024 Final KKR vs SRH: ಉಭಯ ತಂಡಗಳು ಈವರೆಗೆ 27 ಬಾರಿ ಮುಖಾಮುಖಿಯಾಗಿದ್ದು, ಈ ವೇಳೆ ಕೆಕೆಆರ್ ತಂಡ 18 ಬಾರಿ ಜಯ ಸಾಧಿಸಿದರೆ, ಎಸ್ಆರ್ಹೆಚ್ ತಂಡ ಗೆದ್ದಿರುವುದು ಕೇವಲ 9 ಬಾರಿ ಮಾತ್ರ. ಅದರಲ್ಲೂ ಈ ಸಲ ಆಡಲಾದ ಎರಡೂ ಪಂದ್ಯಗಳಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿದೆ.

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ 2024 ಫೈನಲ್ ಪಂದ್ಯ ಇಂದು ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್‌ರೈಸರ್ಸ್ ಹೈದಾರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಐಪಿಎಲ್ ಸೀಸನ್ 17 ಗೆ ತೆರೆ ಬೀಳಲಿದೆ.
ವಿಶೇಷ ಎಂದರೆ ಕೊಲ್ಕತ್ತಾ ನೈಟ್ ರೈಡರ್ಸ್ ಈವರೆಗೆ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದೀಗ ಮೂರನೇ ಸಲ ಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. ಅತ್ತ ಹೈದರಾಬಾದ್ ಫ್ರಾಂಚೈಸಿ ಕೂಡ ಈಗಾಗಲೇ 2 ಸಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದೀಗ ಮೂರನೇ ಬಾರಿ ಟ್ರೋಫಿ ಗೆಲ್ಲುವ ಇರಾದೆಯಲ್ಲಿದೆ.
ಇನ್ನು ಉಭಯ ತಂಡಗಳು ಈವರೆಗೆ 27 ಬಾರಿ ಮುಖಾಮುಖಿಯಾಗಿದ್ದು, ಈ ವೇಳೆ ಕೆಕೆಆರ್ ತಂಡ 18 ಬಾರಿ ಜಯ ಸಾಧಿಸಿದರೆ, ಎಸ್ಆರ್ಹೆಚ್ ತಂಡ ಗೆದ್ದಿರುವುದು ಕೇವಲ 9 ಬಾರಿ ಮಾತ್ರ. ಅದರಲ್ಲೂ ಈ ಸಲ ಆಡಲಾದ ಎರಡೂ ಪಂದ್ಯಗಳಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿದೆ. ಅಂದರೆ ಎಸ್ಆರ್ಹೆಚ್ ವಿರುದ್ಧ ಕೆಕೆಆರ್ ಮೇಲುಗೈ ಹೊಂದಿರುವುದು ಸ್ಪಷ್ಟ. ಇದಾಗ್ಯೂ ಅಂತಿಮ ಪಂದ್ಯದಲ್ಲಿ ಎಸ್ಆರ್ಹೆಚ್ ಕಡೆಯಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಪಂದ್ಯದ ಕುರಿತಾದ ಸಂಕ್ಷಿಪ್ತ ಮಾಹಿತಿ:
ಮುಖಾಮುಖಿ: ಕೆಕೆಆರ್ vs ಎಸ್ಆರ್ಹೆಚ್
ನಾಯಕರುಗಳು: ಶ್ರೇಯಸ್ ಅಯ್ಯರ್ (ಕೆಕೆಆರ್), ಪ್ಯಾಟ್ ಕಮಿನ್ಸ್ (ಎಸ್ಆರ್ಹೆಚ್)
ಪಂದ್ಯ ನಡೆಯುವ ಸ್ಥಳ: ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಟಾಸ್ ಪ್ರಕ್ರಿಯೆ: ರಾತ್ರಿ 7 ಗಂಟೆಗೆ
ಪಂದ್ಯ ಶುರು: ರಾತ್ರಿ 7.30 ರಿಂದ
2 ಬಾರಿ ಚಾಂಪಿಯನ್ಸ್:
ಕೆಕೆಆರ್ ಮತ್ತು ಎಸ್ಆರ್ಹೆಚ್ (ಹೈದಾರಾಬಾದ್ ಫ್ರಾಂಚೈಸಿ) ಈವರೆಗೆ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದರಂತೆ ಈ ಸಲ ಗೆಲ್ಲುವ ತಂಡ 3ನೇ ಬಾರಿ ಟ್ರೋಫಿ ಎತ್ತಿ ಹಿಡಿಯಲಿದೆ.
2012: ಕೊಲ್ಕತ್ತಾ ನೈಟ್ ರೈಡರ್ಸ್
2014: ಕೊಲ್ಕತ್ತಾ ನೈಟ್ ರೈಡರ್ಸ್
2009: ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ (ಈಗಿನ ಎಸ್ಆರ್ಹೆಚ್)
2016: ಸನ್‌ರೈಸರ್ಸ್ ಹೈದರಾಬಾದ್.
ಸನ್‌ರೈಸರ್ಸ್ ಹೈದರಾಬಾದ್ ತಂಡ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಟಿ ನಟರಾಜನ್, ಜಯದೇವ್ ಉನಾದ್ಕಟ್, ಶಹಬಾಝ್ ಅಹ್ಮದ್, ಉಮ್ರಾನ್ ಮಲಿಕ್, ಸನ್ವಿರ್ ಸಿಂಗ್, ಗ್ಲೆನ್ ಫಿಲಿಪ್ಸ್, ಮಯಾಂಕ್ ಮಾರ್ಕಂಡೆ, ಮಯಾಂಕ್ ಅಗರ್ವಾಲ್, ವಾಷಿಂಗ್ಟನ್ ಸುಂದರ್, ಅನ್ಮೋಲ್ಪ್ರೀತ್ ಸಿಂಗ್, ಉಪೇಂದ್ರ ಯಾದವ್, ಜಾತವೇಧ್ ಸುಬ್ರಹ್ಮಣ್ಯನ್, ವಿಜಯಕಾಂತ್ ವ್ಯಾಸ್ಕಂತ್, ಫಝಲ್ಹಕ್ ಫಾರೂಕಿ, ಮಾರ್ಕೊ ಯಾನ್ಸೆನ್, ಆಕಾಶ್ ಮಹಾರಾಜ್ ಸಿಂಗ್.
ಇದನ್ನೂ ಓದಿ: Virat Kohli: ಈ ಸಲ ಆರೆಂಜ್ ಕ್ಯಾಪ್ ನಮ್ದೆ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್, ಮನೀಶ್ ಪಾಂಡೆ, ನಿತೀಶ್ ರಾಣಾ, ಶ್ರೀಕರ್ ಭರತ್, ಶೆರ್ಫಾನೆ ರುದರ್‌ಫೋರ್ಡ್, ದುಷ್ಮಂತ ಚಮೀರಾ, ಚೇತನ್ ಸಕರಿಯಾ, ಅಂಗ್‌ಕ್ರಿಶ್ ರಘುವಂಶಿ, ಸಾಕಿಬ್ ಹುಸೇನ್, ಸುಯಾಶ್ ಶರ್ಮಾ, ಅಲ್ಲಾ ಘಜನ್‌ಫರ್.
Published On - 7:17 am, Sun, 26 May 24