AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್ 2024 ರ ವೇಳಾಪಟ್ಟಿ ಘೋಷಣೆಗೆ ಸಮಯ ನಿಗದಿ: ಮೊದಲ ಪಂದ್ಯ ಯಾವಾಗ ಗೊತ್ತೇ?

Indian Premier League 2024 Schedule: ವರದಿಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ 2024 ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಇದು ಸುಮಾರು ಎರಡು 2 ತಿಂಗಳುಗಳ ಕಾಲ ನಡೆಯಲಿದೆ. ಅಂತಿಮ ಫೈನಲ್ ಪಂದ್ಯವು ಮೇ 26 ರಂದು ಏರ್ಪಡಿಸಲಾಗಿದೆ ಎಂದು ಹೇಳಲಾಗಿದೆ.

IPL 2024: ಐಪಿಎಲ್ 2024 ರ ವೇಳಾಪಟ್ಟಿ ಘೋಷಣೆಗೆ ಸಮಯ ನಿಗದಿ: ಮೊದಲ ಪಂದ್ಯ ಯಾವಾಗ ಗೊತ್ತೇ?
IPL 2024
Vinay Bhat
|

Updated on: Jan 22, 2024 | 9:08 AM

Share

ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ಐಸಿಸಿ ಟಿ20 ವಿಶ್ವಕಪ್ 2024 ಆಯೋಜಿಸಲಾಗಿದೆ. ಭಾರತ ಕ್ರಿಕೆಟ್ ತಂಡ 10 ವರ್ಷಗಳಲ್ಲಿ ಮೊದಲ ಐಸಿಸಿ ಟ್ರೋಫಿಯನ್ನು ಗೆಲ್ಲುವ ಗುರಿಯಿಟ್ಟುಕೊಂಡಿದ್ದು, ಈ ಟೂರ್ನಿ ಅತ್ಯಂತ ಮಹತ್ವದ್ದಾಗಿದೆ. ಆದರೆ, ಈ ಮೆಗಾ ಟೂರ್ನಮೆಂಟ್‌ಗೆ ಮೊದಲು ಟೀಮ್ ಇಂಡಿಯಾಕ್ಕೆ ಯಾವುದೇ ಟಿ20I ಸರಣಿ ಇಲ್ಲದಿರುವುದರಿಂದ, ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ 16 ನೇ ಸೀಸನ್ ಮಹತ್ವದ್ದಾಗಿದೆ. ಇದೀಗ ವಿಶ್ವದ ನಂಬರ್ ಟಿ 20 ಲೀಗ್ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದ್ದು, ದಿನಾಂಕವನ್ನು ದೃಢೀಕರಿಸಲಾಗಿದೆ ಎಂದು ವರದಿಯಾಗಿದೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಐಪಿಎಲ್ 2024 ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಇದು ಸುಮಾರು ಎರಡು 2 ತಿಂಗಳುಗಳ ಕಾಲ ನಡೆಯಲಿದೆ. ಅಂತಿಮ ಫೈನಲ್ ಪಂದ್ಯವು ಮೇ 26 ರಂದು ಏರ್ಪಡಿಸಲಾಗಿದೆ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಅಧಿಕೃತವಾಗಿ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.

Ayodhya Ram Mandir inauguration: ಅಯೋಧ್ಯೆಗೆ ಆಗಮಿಸಿದ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್

ಇದನ್ನೂ ಓದಿ
Image
VIDEO: ಮೈದಾನದಲ್ಲಿ ಮ್ಯಾಜಿಕ್: ವಿಕೆಟ್ ಪಡೆದು ರಂಜಿಸಿದ ಸ್ಪಿನ್ ಜಾದೂಗಾರ
Image
WPL 2024: ವುಮೆನ್ಸ್ ಪ್ರೀಮಿಯರ್ ಲೀಗ್​ಗೆ ಡೇಟ್ ಫಿಕ್ಸ್​
Image
ಭಾರತದ ಹೊರಗೂ ರಾಮಮಂದಿರದ ಸದ್ದು: ವಿಡಿಯೋ ಮಾಡಿದ ವಿದೇಶಿ ಕ್ರಿಕೆಟಿಗ
Image
ರಾಮಲಾಲ ಪ್ರಾಣ ಪ್ರತಿಷ್ಠಾಕ್ಕಾಗಿ ಅಯೋಧ್ಯೆಗೆ ತಲುಪಿದ ವಿರಾಟ್ ಕೊಹ್ಲಿ

ಈ ಹಿಂದೆ ಎರಡು ಬಾರಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಐಪಿಎಲ್ ನಡೆದಿತ್ತು. ಐಪಿಎಲ್ 2009 ಸಂಪೂರ್ಣವಾಗಿ ಭಾರತದ ಹೊರಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದರೆ, 2014 ರ ಆವೃತ್ತಿಯ ಕೆಲ ಪಂದ್ಯಗಳು ಯುಎಇಯಲ್ಲಿ ನಡೆಯಿತು. ಆದರೆ, ಬಿಸಿಸಿಐ ಈ ಬಾರಿ ಇಡೀ ಟೂರ್ನಿಯನ್ನು ಭಾರತದಲ್ಲಿಯೇ ನಡೆಸುವ ವಿಶ್ವಾಸವಿದೆ ಎಂದು ಕ್ರಿಕ್ ಬಜ್ ವರದಿ ಹೇಳಿದೆ.

ಬಿಸಿಸಿಐ ಎಲ್ಲಾ ಇತರ ಕ್ರಿಕೆಟ್ ಮಂಡಳಿಗಳಿಂದ ತಮ್ಮ ಆಟಗಾರರು ಸಂಪೂರ್ಣ ಐಪಿಎಲ್‌ಗೆ ಲಭ್ಯವಿರುತ್ತಾರೆ ಎಂಬ ಭರವಸೆಯನ್ನು ಪಡೆದಿದೆ ಎಂದು ವರದಿ ಹೇಳಿದೆ. ಆದಾಗ್ಯೂ, ಟಿ20 ವಿಶ್ವಕಪ್ 2024 ಸಮೀಪಿಸುತ್ತಿರುವಾಗ, ಕೆಲವು ಆಟಗಾರರು ಪೂರ್ಣ ಟೂರ್ನಿಗೆ ಅಲಭ್ಯರಾದರೆ ಆಶ್ಚರ್ಯವೇನಿಲ್ಲ. ಇದರ ನಡುವೆ ವುಮೆನ್ಸ್ ಪ್ರೀಮಿಯರ್ ಲೀಗ್​ನ ಎರಡನೇ ಸೀಸನ್ ಕೂಡ ಫೆಬ್ರವರಿ 22 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಆದರೆ ಇದು ಮಾರ್ಚ್ 17 ಕ್ಕೆ ಕೊನೆಗೊಳ್ಳುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ