IPL 2024 Auction: ಐಪಿಎಲ್ ಹರಾಜಿನಲ್ಲಿ ಕರ್ನಾಟಕದ 14 ಕ್ರಿಕೆಟಿಗರು
IPL 2024 Auction: ಈ ಬಾರಿಯ ಐಪಿಎಲ್ ಮಿಜಿ ಹರಾಜಿಗಾಗಿ ಒಟ್ಟು 333 ಆಟಗಾರರ ಹೆಸರು ಫೈನಲ್ ಮಾಡಲಾಗಿದೆ. ಆದರೆ ಇತ್ತ 10 ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳ ಸಂಖ್ಯೆ 77 ಮಾತ್ರ. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜಿನ ಮೂಲಕ ಕೇವಲ 77 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 19 ರಂದು ದುಬೈನ ಕೋಕಾಕೋಲಾ ಅರೇನಾದಲ್ಲಿ ನಡೆಯಲಿರುವ ಮಿನಿ ಹರಾಜಿಗಾಗಿ ಒಟ್ಟು 333 ಆಟಗಾರರ ಹೆಸರುಗಳು ಫೈನಲ್ ಆಗಿವೆ. ವಿಶೇಷ ಎಂದರೆ ಈ 333 ಆಟಗಾರರಲ್ಲಿ ಕರ್ನಾಟಕದ 14 ಪ್ಲೇಯರ್ಸ್ ಹೆಸರು ಕೂಡ ಕಾಣಿಸಿಕೊಂಡಿದೆ.
ಈ ಹಿಂದೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಕರುಣ್ ನಾಯರ್ ಈ ಬಾರಿ ವಿದರ್ಭ ಕ್ರಿಕೆಟ್ ಮಂಡಳಿ ಕಡೆಯಿಂದ ಐಪಿಎಲ್ ಹರಾಜಿಗೆ ಹೆಸರು ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕರುಣ್ ನಾಯರ್ ಇದೀಗ ವಿದರ್ಭ ಪರ ಆಡುತ್ತಿರುವುದು.
ಹಾಗೆಯೇ ಕೇರಳ ಪರ ಕಣಕ್ಕಿಳಿಯುತ್ತಿರುವ ಕರ್ನಾಟಕದ ಆಟಗಾರ ಶ್ರೇಯಸ್ ಗೋಪಾಲ್ ಕೂಡ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ಮಿಜೋರಂ ಪರ ಆಡುತ್ತಿರುವ ಮತ್ತೋರ್ವ ಕನ್ನಡಿಗ ಕೆ.ಸಿ ಕಾರ್ಯಪ್ಪ ಕೂಡ ಹರಾಜಿಗಾಗಿ ಹೆಸರು ನೀಡಿದ್ದಾರೆ.
ಇನ್ನುಳಿದಂತೆ ಕರ್ನಾಟಕ ಪರ ಆಡುತ್ತಿರುವ ಮನೀಷ್ ಪಾಂಡೆ, ಜಗದೀಶ್ ಸುಚಿತ್, ಶುಭಾಂಗ್ ಹೆಗ್ಡೆ, ನಿಹಾಲ್ ಉಲ್ಲಾಳ್, ಬಿಆರ್ ಶರತ್, ಮನ್ವಂತ್ ಕುಮಾರ್, ಎಲ್ಆರ್ ಚೇತನ್, ಕೆಎಲ್ ಶ್ರೀಜಿತ್, ಎಂ. ವೆಂಕಟೇಶ್, ಮೋನಿಶ್ ರೆಡ್ಡಿ, ಅಭಿಲಾಷ್ ಶೆಟ್ಟಿ ಹೆಸರುಗಳು ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಐಪಿಎಲ್ ತಂಡಗಳಲ್ಲಿ ರಿಟೈನ್ ಆಗಿರುವ ಕರ್ನಾಟಕದ ಆಟಗಾರರು:
- ಕೆಎಲ್ ರಾಹುಲ್ (ಲಕ್ನೋ ಸೂಪರ್ ಜೈಂಟ್ಸ್)
- ಕೃಷ್ಣಪ್ಪ ಗೌತಮ್ (ಲಕ್ನೋ ಸೂಪರ್ ಜೈಂಟ್ಸ್)
- ದೇವದತ್ ಪಡಿಕಲ್ (ಲಕ್ನೋ ಸೂಪರ್ ಜೈಂಟ್ಸ್)
- ಮಯಾಂಕ್ ಅಗರ್ವಾಲ್ (ಸನ್ರೈಸರ್ಸ್ ಹೈದರಾಬಾದ್)
- ಪ್ರಸಿದ್ಧ್ ಕೃಷ್ಣ (ರಾಜಸ್ಥಾನ್ ರಾಯಲ್ಸ್)
- ಪ್ರವಿಣ್ ದುಬೆ (ಡೆಲ್ಲಿ ಕ್ಯಾಪಿಟಲ್ಸ್)
- ಅಭಿನವ್ ಮನೋಹರ್ (ಗುಜರಾತ್ ಟೈಟಾನ್ಸ್)
- ವಿದ್ವತ್ ಕಾವೇರಪ್ಪ (ಪಂಜಾಬ್ ಕಿಂಗ್ಸ್)
- ವೈಶಾಕ್ ವಿಜಯ್ಕುಮಾರ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
- ಮನೋಜ್ ಭಾಂಡಗೆ (ರಾಯಲ್ ಚಾಲೆಂಜರ್ಸ್ ಬೆಂಗಳೂರು).
ಇದನ್ನೂ ಓದಿ: ಶತಕಗಳ ಸರದಾರ: ಕಿಂಗ್ ಕೊಹ್ಲಿಯ ನಂತರದ ಸ್ಥಾನದಲ್ಲಿ ಡೇವಿಡ್ ವಾರ್ನರ್
ಕೇವಲ 77 ಸ್ಲಾಟ್ಗಳು:
ಈ ಬಾರಿಯ ಐಪಿಎಲ್ ಮಿಜಿ ಹರಾಜಿಗಾಗಿ ಒಟ್ಟು 333 ಆಟಗಾರರ ಹೆಸರು ಫೈನಲ್ ಮಾಡಲಾಗಿದೆ. ಆದರೆ ಇತ್ತ 10 ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳ ಸಂಖ್ಯೆ 77 ಮಾತ್ರ. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜಿನ ಮೂಲಕ ಕೇವಲ 77 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.