ಕೊಹ್ಲಿ, ರೋಹಿತ್ ಅಲ್ಲ…ಈ ಬಾರಿ ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಾಡಿದ್ದು ಯಾರನ್ನ ಗೊತ್ತಾ?
Most Googled Cricketers 2023: ಗೂಗಲ್ ಸರ್ಚ್ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕ್ರೀಡಾಪಟುಗಳ ಟಾಪ್-10 ಪಟ್ಟಿಯಲ್ಲಿ ಖ್ಯಾತ ಫುಟ್ಬಾಲ್ ತಾರೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೋನೆಲ್ ಮೆಸ್ಸಿ ಹೆಸರು ಕಾಣಿಸಿಕೊಂಡಿಲ್ಲ. ಹಾಗೆಯೇ ಟೀಮ್ ಇಂಡಿಯಾದ ದಿಗ್ಗಜರೆನಿಸಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಗ್ಗೆ ಕೂಡ ಹೆಚ್ಚಿನವರು ಹುಡುಕಾಟ ನಡೆಸಿಲ್ಲ.
ಗೂಗಲ್ 2023 ರಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕ್ರೀಡಾಪಟುಗಳ ಹೆಸರುಗಳನ್ನು ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಅಮೆರಿಕದ ಖ್ಯಾತ ರಗ್ಬಿ ತಾರೆ ಡಮರ್ ಹ್ಯಾಮ್ಲಿನ್. ಇನ್ನು 2ನೇ ಸ್ಥಾನದಲ್ಲಿರುವುದು ಫ್ರಾನ್ಸ್ನ ಫುಟ್ಬಾಲ್ ಪಟು ಕೈಲಿಯನ್ ಎಂಬಾಪ್ಪೆ. ಹಾಗೆಯೇ ಈ ಟಾಪ್ 10 ಪಟ್ಟಿಯಲ್ಲಿ ಇಬ್ಬರು ಕ್ರಿಕೆಟಿಗರ ಹೆಸರು ಕೂಡ ಕಾಣಿಸಿಕೊಂಡಿದೆ.
ಅಂದರೆ 2023 ರಲ್ಲಿ ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟ್ ತಾರೆಯಾಗಿ ನ್ಯೂಝಿಲೆಂಡ್ನ ರಚಿನ್ ರವೀಂದ್ರ ಹೊರಹೊಮ್ಮಿದ್ದಾರೆ. ಏಕದಿನ ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ರಚಿನ್ ಅವರನ್ನು ಈ ಬಾರಿ ಕ್ರಿಕೆಟ್ ಪ್ರೇಮಿಗಳು ಅತೀ ಹೆಚ್ಚು ಬಾರಿ ಹುಡುಕಾಡಿದ್ದಾರೆ.
ಇನ್ನು ಕ್ರಿಕೆಟಿಗರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ಟೀಮ್ ಇಂಡಿಯಾ ಆಟಗಾರ ಶುಭ್ಮನ್ ಗಿಲ್ ಎಂಬುದು ವಿಶೇಷ. ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಬ್ಯಾಟ್ಸ್ಮನ್ ಆಗಿರುವ ಶುಭ್ಮನ್ ಗಿಲ್ ಬಗ್ಗೆ ಕೂಡ ಹೆಚ್ಚಿನವರು ಹುಡುಕಾಟ ನಡೆಸಿದ್ದಾರೆ.
ಅಚ್ಚರಿ ಎಂದರೆ ಗೂಗಲ್ ಸರ್ಚ್ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕ್ರೀಡಾಪಟುಗಳ ಟಾಪ್-10 ಪಟ್ಟಿಯಲ್ಲಿ ಖ್ಯಾತ ಫುಟ್ಬಾಲ್ ತಾರೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೋನೆಲ್ ಮೆಸ್ಸಿ ಹೆಸರು ಕಾಣಿಸಿಕೊಂಡಿಲ್ಲ. ಹಾಗೆಯೇ ಟೀಮ್ ಇಂಡಿಯಾದ ದಿಗ್ಗಜರೆನಿಸಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಗ್ಗೆ ಕೂಡ ಹೆಚ್ಚಿನವರು ಹುಡುಕಾಟ ನಡೆಸಿಲ್ಲ.
ಬದಲಾಗಿ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ರಚಿನ್ ರವೀಂದ್ರ ಹಾಗೂ ಶುಭ್ಮನ್ ಗಿಲ್ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನವರು ಆಸಕ್ತಿ ತೋರಿಸಿದ್ದಾರೆ. ಅದರಲ್ಲೂ ಟಾಪ್-10 ಗೂಗಲ್ಡ್ ಅಥ್ಲೀಟ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯನಾಗಿ ಶುಭ್ಮನ್ ಗಿಲ್ ಹೊರಹೊಮ್ಮಿದ್ದಾರೆ.
2023ರ ಗೂಗಲ್‌ನ ಟಾಪ್ ಟ್ರೆಂಡಿಂಗ್ ಅಥ್ಲೀಟ್‌ಗಳು:
- ಡಮರ್ ಹ್ಯಾಮ್ಲಿನ್ (ರಗ್ಬಿ ಪ್ಲೇಯರ್)
- ಕೈಲಿಯನ್ ಎಂಬಾಪ್ಪೆ (ಫುಟ್ಬಾಲ್ ಆಟಗಾರ)
- ಟ್ರಾವಿಸ್ ಕೆಲ್ಸೆ (ರಗ್ಬಿ ಪ್ಲೇಯರ್)
- ಜಾ ಮೊರಾಂಟ್ (ಬಾಸ್ಕೆಟ್ ಬಾಲ್ ಪ್ಲೇಯರ್)
- ಹ್ಯಾರಿ ಕೇನ್ (ಫುಟ್ಬಾಲ್ ಆಟಗಾರ)
- ನೊವಾಕ್ ಜೊಕೊವಿಕ್ (ಟೆನಿಸ್ ಪ್ಲೇಯರ್)
- ಕಾರ್ಲೋಸ್ ಅಲ್ಕರಾಝ್ (ಟೆನಿಸ್ ಪ್ಲೇಯರ್)
- ರಚಿನ್ ರವೀಂದ್ರ (ಕ್ರಿಕೆಟ್ ಆಟಗಾರ)
- ಶುಭ್ಮನ್ ಗಿಲ್ (ಕ್ರಿಕೆಟ್ ಆಟಗಾರ)
- ಕೈರಿ ಇರ್ವಿಂಗ್ (ಬಾಸ್ಕೆಟ್ ಬಾಲ್ ಪ್ಲೇಯರ್)
ಇದನ್ನೂ ಓದಿ: ಶತಕಗಳ ಸರದಾರ: ಕಿಂಗ್ ಕೊಹ್ಲಿಯ ನಂತರದ ಸ್ಥಾನದಲ್ಲಿ ಡೇವಿಡ್ ವಾರ್ನರ್
2023ರ ಗೂಗಲ್ ಟಾಪ್ ಟ್ರೆಂಡಿಂಗ್ ಕ್ರೀಡಾ ತಂಡಗಳು:
- ಇಂಟರ್ ಮಿಯಾಮಿ CF
- ಲಾಸ್ ಏಂಜಲೀಸ್ ಲೇಕರ್ಸ್
- ಅಲ್-ನಾಸ್ರ್ ಎಫ್‌ಸಿ
- ಮ್ಯಾಂಚೆಸ್ಟರ್ ಸಿಟಿ FC
- ಮಿಯಾಮಿ ಹೀಟ್
- ಟೆಕ್ಸಾಸ್ ರೇಂಜರ್ಸ್
- ಅಲ್ ಹಿಲಾಲ್ SFC
- ಬೊರುಸ್ಸಿಯಾ ಡಾರ್ಟ್ಮಂಡ್
- ಇಂಡಿಯನ್ ನ್ಯಾಷನಲ್ ಕ್ರಿಕೆಟ್ ಟೀಮ್
- ಬೋಸ್ಟನ್ ಬ್ರೂಯಿನ್ಸ್