ICC T20I Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಅಗ್ರಸ್ಥಾನದಲ್ಲಿ ಇಬ್ಬರು ಭಾರತೀಯರು
ICC T20I Rankings: ಅಗ್ರಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಒಟ್ಟು 865 ಅಂಕಗಳನ್ನು ಹೊಂದಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಪಾಕಿಸ್ತಾನ್ ತಂಡದ ಮೊಹಮ್ಮದ್ ರಿಝ್ವಾನ್ 787 ಅಂಕಗಳಿಸಿದ್ದಾರೆ. ಅಂದರೆ ಸೂರ್ಯಕುಮಾರ್ 78 ಅಂಕಗಳಿಂದ ಮುಂದಿದ್ದಾರೆ.
ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಅನ್ನು ಪ್ರಕಟಿಸಿದೆ. ಈ ಬಾರಿ ಕೂಡ ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ (Suryakumar Yadav) ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಟಿ20 ಬೌಲರ್ಗಳ ಶ್ರೇಯಾಂಕದಲ್ಲಿ ಭಾರತದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ (Ravi Bishnoi) ಅಗ್ರಸ್ಥಾನ ಅಲಂಕರಿಸಿದ್ದಾರೆ.
ವಿಶೇಷ ಎಂದರೆ ರವಿ ಬಿಷ್ಣೋಯ್ ಅವರನ್ನು ಹೊರತುಪಡಿಸಿ ಟೀಮ್ ಇಂಡಿಯಾ ಮತ್ಯಾವುದೇ ಬೌಲರ್ ಟಾಪ್-10 ನಲ್ಲಿ ಸ್ಥಾನ ಪಡೆದಿಲ್ಲ. ಇನ್ನೊಂದೆಡೆ ಬ್ಯಾಟರ್ಗಳ ಪಟ್ಟಿಯಲ್ಲಿ ರುತುರಾಜ್ ಗಾಯಕ್ವಾಡ್ 7ನೇ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕಳೆದ ಒಂದು ವರ್ಷದಿಂದ ಟಿ20 ಕ್ರಿಕೆಟ್ ಆಡದಿರುವ ವಿರಾಟ್ ಕೊಹ್ಲಿ 37ನೇ ಸ್ಥಾನಕ್ಕೆ ಕುಸಿದಿದ್ದು, ಹಾಗೆಯೇ ರೋಹಿತ್ ಶರ್ಮಾ 62ನೇ ಸ್ಥಾನದಲ್ಲಿದ್ದಾರೆ.
ಸದ್ಯ ಅಗ್ರಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಒಟ್ಟು 865 ಅಂಕಗಳನ್ನು ಹೊಂದಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಪಾಕಿಸ್ತಾನ್ ತಂಡದ ಮೊಹಮ್ಮದ್ ರಿಝ್ವಾನ್ 787 ಅಂಕಗಳಿಸಿದ್ದಾರೆ. ಅಂದರೆ ಸೂರ್ಯಕುಮಾರ್ 78 ಅಂಕಗಳಿಂದ ಮುಂದಿದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ಟೀಮ್ ಇಂಡಿಯಾ ಆಟಗಾರನನ್ನು ಅಗ್ರಸ್ಥಾನದಿಂದ ಕೆಳಗಿಳಿಸಲಾಗುವುದಿಲ್ಲ ಎನ್ನಬಹುದು.
ಟಿ20 ಬ್ಯಾಟರ್ಗಳ ಹೊಸ ರ‍್ಯಾಂಕಿಂಗ್:
- ಸೂರ್ಯಕುಮಾರ್ ಯಾದವ್ (ಭಾರತ)- 865 ಅಂಕಗಳು
- ಮೊಹಮ್ಮದ್ ರಿಝ್ವಾನ್ (ಪಾಕಿಸ್ತಾನ್)- 787 ಅಂಕಗಳು
- ಐಡೆನ್ ಮಾರ್ಕ್ರಮ್ (ಸೌತ್ ಆಫ್ರಿಕಾ)- 758 ಅಂಕಗಳು
- ಬಾಬರ್ ಆಝಂ (ಪಾಕಿಸ್ತಾನ್)- 734 ಅಂಕಗಳು
- ರಿಲೀ ರೊಸ್ಸೊವ್ (ಸೌತ್ ಆಫ್ರಿಕಾ)- 695 ಅಂಕಗಳು
- ಡೇವಿಡ್ ಮಲಾನ್ (ಇಂಗ್ಲೆಂಡ್)- 692 ಅಂಕಗಳು
- ರುತುರಾಜ್ ಗಾಯಕ್ವಾಡ್ (ಭಾರತ)- 681 ಅಂಕಗಳು
- ರೀಝ ಹೆಂಡಿಕ್ಸ್ (ಸೌತ್ ಆಫ್ರಿಕಾ)- 674 ಅಂಕಗಳು
- ಜೋಸ್ ಬಟ್ಲರ್ (ಇಂಗ್ಲೆಂಡ್)- 666 ಅಂಕಗಳು
- ಗ್ಲೆನ್ ಫಿಲಿಪ್ಸ್ (ನ್ಯೂಝಿಲೆಂಡ್)- 649 ಅಂಕಗಳು
ಇದನ್ನೂ ಓದಿ: David Warner: ಪಾಕ್ ವಿರುದ್ಧ ಸ್ಪೋಟಕ ಸೆಂಚುರಿ ಸಿಡಿಸಿದ ವಾರ್ನರ್
ಟಿ20 ಬೌಲರ್ಗಳ ಹೊಸ ರ‍್ಯಾಂಕಿಂಗ್:
- ರವಿ ಬಿಷ್ಣೋಯ್ (ಭಾರತ)- 692 ಅಂಕಗಳು
- ರಶೀದ್ ಖಾನ್ (ಅಫ್ಘಾನಿಸ್ತಾನ್)- 692 ಅಂಕಗಳು
- ವನಿಂದು ಹಸರಂಗ (ಶ್ರೀಲಂಕಾ)- 679 ಅಂಕಗಳು
- ಆದಿಲ್ ರಶೀದ್ (ಇಂಗ್ಲೆಂಡ್)- 679 ಅಂಕಗಳು
- ಮಹೀಶ್ ತೀಕ್ಷಣ (ಶ್ರೀಲಂಕಾ)- 677 ಅಂಕಗಳು
- ಸ್ಯಾಮ್ ಕರನ್ (ಇಂಗ್ಲೆಂಡ್)- 659 ಅಂಕಗಳು
- ಫಝಲ್ಹಕ್ ಫಾರೂಖಿ (ಅಫ್ಘಾನಿಸ್ತಾನ್)- 657 ಅಂಕಗಳು
- ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ್)- 656 ಅಂಕಗಳು
- ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್)- 655 ಅಂಕಗಳು
- ತಬ್ರೇಝ್ ಶಂಸಿ (ಸೌತ್ ಆಫ್ರಿಕಾ)- 654 ಅಂಕಗಳು