Vijay Hazare Trophy 2023: ಫೈನಲ್ಗೆ ಪ್ರವೇಶಿಸಿದ ಹರ್ಯಾಣ ತಂಡ
Haryana vs Tamil Nadu: ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಿಮಾಂಶು ರಾಣಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ತಮಿಳುನಾಡು ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ರಾಣಾ 118 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 116 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ 30 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಫೋರ್ಗಳೊಂದಿಗೆ ಸುಮಿತ್ ಕುಮಾರ್ 48 ರನ್ ಬಾರಿಸಿದರು.
Vijay Hazare Trophy 2023: ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಷೇಯನ್ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಹರ್ಯಾಣ ತಂಡ ಭರ್ಜರಿ ಜಯ ಸಾಧಿಸಿದೆ. ತಮಿಳುನಾಡು ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಯಾಣ ತಂಡದ ನಾಯಕ ಅಶೋಕ್ ಮೆನಾರಿಯಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಹರ್ಯಾಣ ತಂಡಕ್ಕೆ ಆರಂಭಿಕ ಆಟಗಾರ ಯುವರಾಜ್ ಸಿಂಗ್ ಉತ್ತಮ ಆರಂಭ ಒದಗಿಸಿದ್ದರು. 79 ಎಸೆತಗಳನ್ನು ಎದುರಿಸಿದ ಯುವರಾಜ್ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 65 ರನ್ ಬಾರಿಸಿ ಟಿ ನಟರಾಜನ್ಗೆ ವಿಕೆಟ್ ಒಪ್ಪಿಸಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಿಮಾಂಶು ರಾಣಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ತಮಿಳುನಾಡು ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ರಾಣಾ 118 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 116 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ 30 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಫೋರ್ಗಳೊಂದಿಗೆ ಸುಮಿತ್ ಕುಮಾರ್ 48 ರನ್ ಬಾರಿಸಿದರು. ಇದರೊಂದಿಗೆ ಹರ್ಯಾಣ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 293 ರನ್ ಕಲೆಹಾಕಿತು.
294 ರನ್ಗಳ ಗುರಿ ಬೆನ್ನತ್ತಿದ ತಮಿಳುನಾಡು ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಬಾಬಾ ಅಪರಜಿತ್ (7) ಹಾಗೂ ಎನ್ ಜಗದೀಸನ್ (30) ಬೇಗನೆ ಔಟಾದರು. ಇನ್ನು ಹರಿ ನಿಶಾಂತ್ ಕೇವಲ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಆ ಬಳಿಕ ಬಂದ ವಿಜಯ್ ಶಂಕರ್ 23 ರನ್ಗಳಿಸಲಷ್ಟೇ ಶಕ್ತರಾದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಬಾಬಾ ಇಂದ್ರಜಿತ್ 64 ರನ್ಗಳ ಕೊಡುಗೆ ನೀಡಿದರು. ಇನ್ನು ನಾಯಕ ದಿನೇಶ್ ಕಾರ್ತಿಕ್ 31 ರನ್ ಬಾರಿಸಿ ಔಟಾದರು.
ಇದರೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹರ್ಯಾಣ ಬೌಲರ್ಗಳು ಅಂತಿಮವಾಗಿ ತಮಿಳುನಾಡು ತಂಡವನ್ನು 47.1 ಓವರ್ಗಳಲ್ಲಿ 230 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಹರ್ಯಾಣ ತಂಡವು 63 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಈ ಹರ್ಯಾಣ ತಂಡ ವಿಜಯ್ ಹಜಾರೆ ಟೂರ್ನಿ 2023 ರ ಫೈನಲ್ಗೆ ಪ್ರವೇಶಿಸಿದೆ.
ಹರ್ಯಾಣ ಪ್ಲೇಯಿಂಗ್ 11: ಯುವರಾಜ್ ಸಿಂಗ್ , ಅಂಕಿತ್ ಕುಮಾರ್ , ಹಿಮಾಂಶು ರಾಣಾ , ಅಶೋಕ್ ಮೆನಾರಿಯಾ (ನಾಯಕ) , ನಿಶಾಂತ್ ಸಿಂಧು , ರೋಹಿತ್ ಪರ್ಮೋದ್ ಶರ್ಮಾ (ವಿಕೆಟ್ ಕೀಪರ್) , ರಾಹುಲ್ ತೆವಾಟಿಯಾ , ಸುಮಿತ್ ಕುಮಾರ್ , ಹರ್ಷಲ್ ಪಟೇಲ್ , ಅಮಿತ್ ರಾಣಾ , ಅಂಶುಲ್ ಕಾಂಬೋಜ್.
ಇದನ್ನೂ ಓದಿ: RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?
ತಮಿಳುನಾಡು ಪ್ಲೇಯಿಂಗ್ 11: ಬಾಬಾ ಅಪರಜಿತ್ , ಎನ್ ಜಗದೀಸನ್ , ಹರಿ ನಿಶಾಂತ್ , ಬಾಬಾ ಇಂದ್ರಜಿತ್ , ವಿಜಯ್ ಶಂಕರ್ , ದಿನೇಶ್ ಕಾರ್ತಿಕ್ (ನಾಯಕ) , ಶಾರುಖ್ ಖಾನ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ , ಮಣಿಮಾರನ್ ಸಿದ್ಧಾರ್ಥ್ , ವರುಣ್ ಚಕ್ರವರ್ತಿ , ಟಿ ನಟರಾಜನ್.