
ಅಹಮದಾಬಾದ್, ಏಪ್ರಿಲ್ 5: ಐಪಿಎಲ್ ಟೂರ್ನಿಯಲ್ಲಿ (IPL 2024) ಮುಂಬೈ ಇಂಡಿಯನ್ಸ್ (MI) ಮುಂದಿನ ಪಂದ್ಯವನ್ನು ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಸೆಣಸಲಿದೆ. ಇದಕ್ಕೂ ಮುನ್ನ ತಂಡಕ್ಕೆ ಆರು ದಿನಗಳ ಬಿಡುವು ದೊರೆತಿದ್ದು, ಇಡೀ ತಂಡ ಗುಜರಾತ್ನ ಜಾಮ್‌ನಗರಕ್ಕೆ ಸಣ್ಣ ಪ್ರವಾಸ ತೆರಳಿದೆ. ಪ್ರವಾಸದ ಸಂದರ್ಭ ನಾಯಕ ಹಾರ್ದಿಕ್ ಪಾಂಡ್ಯ, ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಇತರ ಆಟಗಾರರು ಮೋಜು ಮಸ್ತಿ ನಡೆಸುತ್ತಿರುವ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಅದೀಗ ವೈರಲ್ ಆಗುತ್ತಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿನ ನಂತರ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರು ಗುಜರಾತ್ಗೆ ತೆರಳಿದ್ದಾರೆ. ಮುಂಬೈ ಇಂಡಿಯನ್ಸ್ ಹಂಚಿಕೊಂಡಿರುವ ವಿಡಿಯೋ ಕ್ಲಿಪ್‌ನಲ್ಲಿ, ರೋಹಿತ್ ಮತ್ತು ಹಾರ್ದಿಕ್ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದನ್ನು ಕಾಣಬಹುದಾಗಿದೆ. ತಂಡದ ಇತರ ಕೆಲವು ಮಂದಿ ಆಟಗಾರರು ಜಲ ಕ್ರೀಡೆಗಳಲ್ಲಿ ತೊಡಗಿಕೊಂಡು ಆನಂದಿಸುತ್ತಿರುವುದನ್ನು ಕಾಣಬಹುದಾಗಿದೆ.
That’s one way to unwind and have some quality team time 🤩➡️ https://t.co/GyuukJgUDk
Catch it all on #MIDaily now, available on our website and MI app 📹💙#MumbaiMeriJaan #MumbaiIndians pic.twitter.com/rwTLt8mMRi
— Mumbai Indians (@mipaltan) April 5, 2024
ವಿಶ್ರಾಂತಿ ಪಡೆಯಲು ಮತ್ತು ಕೆಲವು ಜತೆಯಾಗಿ ಉತ್ತಮ ಸಮಯವನ್ನು ಕಳೆಯಲು ಇದು ಒಂದು ಮಾರ್ಗವಾಗಿದೆ ಎಂದು ಎಂಐ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
ಪ್ರಸಕ್ತ ಋತುವಿನ ಟೂರ್ನಿಯಲ್ಲಿ ಮುಂಬೈ ಸತತ ಸೋಲಿನಿಂದ ಕಂಗೆಟ್ಟಿದೆ. ಮೂರು ಪಂದ್ಯಗಳಲ್ಲಿ ಸೋಲನುಭವಿಸಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಮಧ್ಯೆ, ರೋಹಿತ್ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನ್ನಾಗಿ ಮಾಡಿದ ಬಗ್ಗೆಯೂ ಬಹಳಷ್ಟು ಚರ್ಚೆಗಳಾಗುತ್ತಿವೆ.
ಇದನ್ನೂ ಓದಿ: ‘ಆರ್ಸಿಬಿ ಗೆಲ್ಲಬೇಕೆಂದರೆ..’; ಕಿಂಗ್ ಕೊಹ್ಲಿಗೆ ವಿಶೇಷ ಸಲಹೆ ನೀಡಿದ ಎಬಿ ಡಿವಿಲಿಯರ್ಸ್
ಉಭಯ ನಾಯಕರ ಅಭಿಮಾನಿಗಳಿಂದಲೂ ಸಹ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಟೂರ್ನಿ ವೇಳೆ ಕ್ರೀಡಾಂಗಣದಲ್ಲಿ ಮತ್ತು ಹೊರಗೆ ರೋಹಿತ್ ಪರ ಅಭಿಮಾನಿಗಳು ಘೋಷಣೆ ಕೂಗಿದ್ದ ವಿಚಾರ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ನಂತರ ಪಾಂಡ್ಯ ವಿರುದ್ಧ ಘೋಷಣೆ ಕೂಗದಂತೆ ಅಭಿಮಾನಿಗಳಲ್ಲಿ ರೋಹಿತ್ ಮನವಿ ಮಾಡಿದ ಬಗ್ಗೆಯೂ ವರದಿಯಾಗಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ರೋಹಿತ್ – ಹಾರ್ದಿಕ್ ಇಬ್ಬರೂ ಖುಷಿಯಿಂದ ತಬ್ಬಿಕೊಂಡಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ