IPL 2024 PBKS vs RCB Live Streaming: ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್​ಸಿಬಿ- ಪಂಜಾಬ್​; ಪಂದ್ಯ ಎಷ್ಟು ಗಂಟೆಗೆ, ಎಲ್ಲಿ ಆರಂಭ?

Punjab Kings vs Royal Challengers Bengaluru Live Streaming: ಐಪಿಎಲ್‌ನ 58ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಧರ್ಮಶಾಲಾದಲ್ಲಿ ನಡೆಯಲಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ಈ ಪಂದ್ಯದ ಗೆಲುವು ಎರಡೂ ತಂಡಗಳಿಗೆ ಬಹಳ ಅವಶ್ಯಕವಾಗಿದೆ.

IPL 2024 PBKS vs RCB Live Streaming: ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್​ಸಿಬಿ- ಪಂಜಾಬ್​; ಪಂದ್ಯ ಎಷ್ಟು ಗಂಟೆಗೆ, ಎಲ್ಲಿ ಆರಂಭ?
ಪಂಜಾಬ್- ಆರ್​ಸಿಬಿ
Follow us
ಪೃಥ್ವಿಶಂಕರ
|

Updated on:May 08, 2024 | 5:53 PM

ಐಪಿಎಲ್ 2024 ರ (IPL 2024) ಲೀಗ್ ಹಂತ ಇನ್ನೇನು ಮುಗಿಯುವ ಹಂತದಲ್ಲಿದೆ. ಎರಡು ವಾರಗಳ ನಂತರ ಟೂರ್ನಿಯ ಪ್ಲೇ-ಆಫ್ ಪಂದ್ಯಗಳು ನಡೆಯಲಿವೆ. ಸದ್ಯಕ್ಕೆ ಪ್ಲೇ ಆಫ್ ರೇಸ್ ಸಾಕಷ್ಟು ಕುತೂಹಲಕಾರಿಯಾಗಿದೆ. ಇಲ್ಲಿಯವರೆಗೆ, ಒಂದೇ ಒಂದು ತಂಡವು ಲೀಗ್‌ನಿಂದ ಅಧಿಕೃತವಾಗಿ ಹೊರಗುಳಿದಿಲ್ಲ ಅಥವಾ ಯಾವ ತಂಡವೂ ಪ್ಲೇ-ಆಫ್‌ಗೆ ಅರ್ಹತೆ ಪಡೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಳಿದಿರುವ ಪಂದ್ಯಗಳು ಎಲ್ಲ ತಂಡಗಳಿಗೂ ಮಹತ್ವ ಪಡೆದುಕೊಂಡಿವೆ. ಐಪಿಎಲ್‌ನ 58ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ( Punjab Kings vs Royal Challengers Bengaluru) ನಡುವೆ ಧರ್ಮಶಾಲಾದಲ್ಲಿ ನಡೆಯಲಿದೆ. ಮೇಲೆ ಹೇಳಿದಂತೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಈ ಪಂದ್ಯದ ಗೆಲುವು ಎರಡೂ ತಂಡಗಳಿಗೆ ಬಹಳ ಅವಶ್ಯಕವಾಗಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿದೆ.

ಉಭಯ ತಂಡಗಳ ಪ್ರದರ್ಶನ

ಈ ಆವೃತ್ತಿಯಲ್ಲಿ ಎರಡೂ ತಂಡಗಳ ಪ್ರದರ್ಶನ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಅದರಲ್ಲಿ ಪಂಜಾಬ್ ತಂಡದ ಪ್ರದರ್ಶನವನ್ನು ನೋಡುವುದಾದರೆ.. ಸ್ಯಾಮ್ ಕರನ್ ಪಡೆ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದ್ದು 8 ನೇ ಸ್ಥಾನದಲ್ಲಿದೆ. ಇತ್ತ ಆರ್​ಸಿಬಿ ಕೂಡ 11 ಪಂದ್ಯಗಳನ್ನು ಆಡಿದ್ದು, 4 ಗೆಲುವಿನೊಂದಿಗೆ 7 ನೇ ಸ್ಥಾನದಲ್ಲಿದೆ. ಲೀಗ್​ನಲ್ಲಿ ಪಂಜಾಬ್ ಮತ್ತು ಬೆಂಗಳೂರು ತಂಡಗಳಿಗೆ ತಲಾ 3 ಪಂದ್ಯಗಳು ಬಾಕಿ ಇವೆ. ಅರ್ಹತೆ ಪಡೆಯಲು, ಎರಡೂ ತಂಡಗಳು ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಇತರ ತಂಡಗಳ ಸೋಲಿನ ಮೇಲೆ ಅವಲಂಬಿತವಾಗಿವೆ. ಆದರೆ ಈಗ ಈ ಎರಡೂ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪಂದ್ಯದಲ್ಲಿ ಯಾವ ತಂಡ ಸೋತರೂ ಆ ತಂಡ ಲೀಗ್‌ನಿಂದ ಹೊರಗುಳಿಯಲಿದೆ. ಪಂಜಾಬ್ ಕಿಂಗ್ಸ್ ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಧರ್ಮಶಾಲಾದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದ ನಂತರ ಸೋತಿತ್ತು. ಅದೇ ಸಮಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಸೋಲಿನ ನಂತರ ಇದೀಗ ಹ್ಯಾಟ್ರಿಕ್ ಗೆಲುವಿನೊಂದಿಗೆ ಗೆಲುವಿನ ಲಯಕ್ಕೆ ಮರಳಿದೆ.

ಐಪಿಎಲ್ 2024 ರ ಬಹುಮಾನದ ಗಾತ್ರ ಎಷ್ಟು ಕೋಟಿ ಗೊತ್ತಾ?

ಪಂದ್ಯದ ಬಗ್ಗೆ ಉಳಿದ ಮಾಹಿತಿ

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯ ಯಾವಾಗ ನಡೆಯಲ್ಲಿದೆ?

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯವು ಗುರುವಾರ ಮೇ 9 ರಂದು ನಡೆಯಲಿದೆ.

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯ ಎಲ್ಲಿ ನಡೆಯಲ್ಲಿದೆ?

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯವು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದೆ.

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯ ರಾತ್ರಿ 7:30ಕ್ಕೆ ಆರಂಭವಾಗಲಿದೆ. ಟಾಸ್ ಸಂಜೆ 7.30ಕ್ಕೆ ನಡೆಯಲಿದೆ.

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ವೀಕ್ಷಿಸಬೇಕು?

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯವನ್ನು ಮೊಬೈಲ್‌ನಲ್ಲಿ ಎಲ್ಲಿ ನೋಡಬೇಕು?

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯವನ್ನು Jio ಸಿನಿಮಾ ಅಪ್ಲಿಕೇಶನ್‌ನಲ್ಲಿ ಮೊಬೈಲ್‌ನಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಪಂಜಾಬ್ ಕಿಂಗ್ಸ್ ತಂಡ: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಪ್ರಭಾಸಿಮ್ರಾನ್ ಸಿಂಗ್, ರೈಲಿ ರೊಸ್ಸೊ, ಜಿತೇಶ್ ಶರ್ಮಾ, ಸ್ಯಾಮ್ ಕರನ್, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಶಿವಂ ಸಿಂಗ್, ಸಿಕಂದರ್ ರಜಾ, ಅಥರ್ವ ಟೈಡೆ, ಕ್ರಿಸ್ ವೋಕ್ಸ್, ಅರ್ಷದೀಪ್ ಸಿಂಗ್, ರಾಹುಲ್ ಚಹಾರ್, ನಾಥನ್ ಎಲ್ಲಿಸ್, ಹರ್‌ಪ್ರೀತ್ ಬ್ರಾರ್, ವಿದ್ವತ್ ಕಾವೇರಪ್ಪ, ಹರ್ಷಲ್ ಪಟೇಲ್, ಕಗಿಸೊ ರಬಾಡ, ಪ್ರಿನ್ಸ್ ಚೌಧರಿ, ಅಶುತೋಷ್ ಶರ್ಮಾ, ವಿಶ್ವನಾಥ್ ಸಿಂಗ್ ಮತ್ತು ತನಯ್ ತ್ಯಾಗರಾಜನ್.

ಆರ್‌ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಯಶ್ ದಯಾಳ್, ವೈಶಾಕ್ ವಿಜಯ್‌ಕುಮಾರ್, ರೀಸ್ ಟೋಪ್ಲಿ, ಸ್ವಪ್ನೀಲ್ ಸಿಂಗ್, ಕರ್ಣ್ ಶರ್ಮಾ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಮಯಾಂಕ್ ದಾಗರ್, ಸುಯೇಶ್ ಪ್ರಭುದೇಸಾಯಿ, ಗ್ಲೆನ್ ಮ್ಯಾಕ್ಸ್‌ವೆಲ್ ಲೋಮ್ರೋರ್, ವಿಲ್ ಜಾಕ್ಸ್, ಕ್ಯಾಮೆರಾನ್ ಗ್ರೀನ್, ಮನೋಜ್ ಭಾಂಡಗೆ, ಆಕಾಶ್ ದೀಪ್, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಸೌರವ್ ಚೌಹಾಣ್ ಮತ್ತು ಅನುಜ್ ರಾವತ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Wed, 8 May 24

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ