ಐಪಿಎಲ್ 17ನೇ (IPL 2024) ಸೀಸನ್ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ (Royal Challengers Bengaluru vs Lucknow Super Giants) ತಂಡವನ್ನು ಎದುರಿಸಲಿದೆ. ಇದು ಈ ಸೀಸನ್ನಲ್ಲಿ ಲಕ್ನೋಗೆ ಮೂರನೇ ಮತ್ತು ಆರ್‌ಸಿಬಿಗೆ ನಾಲ್ಕನೇ ಪಂದ್ಯವಾಗಿದೆ. ಲಕ್ನೋ ಮತ್ತು ಬೆಂಗಳೂರು ಎರಡೂ ತಂಡಗಳು ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಒಂದೊಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ ಉಭಯ ತಂಡಗಳು ಅಂಕಪಟ್ಟಿಯಲ್ಲಿ ಆರು ಮತ್ತು ಒಂಬತ್ತನೇ ಸ್ಥಾನದಲ್ಲಿವೆ. ಹೀಗಾಗಿ ಎರಡೂ ತಂಡಗಳು ಈ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸಲಿವೆ. ಉಳಿದಂತೆ ಪಂದ್ಯದ ಬಗ್ಗೆ ಹೆಚ್ಚಿನ ಮಾಹಿತಿ ಹೀಗಿದೆ
ಆರ್‌ಸಿಬಿ vs ಲಕ್ನೋ ನಡುವಿನ ಐಪಿಎಲ್ 15ನೇ ಪಂದ್ಯ ಏಪ್ರಿಲ್ 2 ರಂದು ನಡೆಯಲಿದೆ.
ಆರ್‌ಸಿಬಿ vs ಲಕ್ನೋ ನಡುವಿನ ಐಪಿಎಲ್ 15ನೇ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆರ್‌ಸಿಬಿ vs ಲಕ್ನೋ ನಡುವಿನ ಐಪಿಎಲ್ 15ನೇ ಪಂದ್ಯ ರಾತ್ರಿ 7:30ಕ್ಕೆ ಆರಂಭವಾಗಲಿದೆ.
ಆರ್‌ಸಿಬಿ vs ಲಕ್ನೋ ನಡುವಿನ ಐಪಿಎಲ್ 15ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.
ಆರ್‌ಸಿಬಿ vs ಲಕ್ನೋ ನಡುವಿನ ಐಪಿಎಲ್ 15ನೇ ಪಂದ್ಯವನ್ನು ಮೊಬೈಲ್‌ನಲ್ಲಿರುವ Jio ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
IPL 2024: ಇದ್ದಕ್ಕಿದ್ದಂತೆ ಎಲ್ಲಾ ಫ್ರಾಂಚೈಸಿಗಳ ಮಾಲೀಕರ ಸಭೆ ಕರೆದ ಬಿಸಿಸಿಐ..!
ಆರ್‌ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ) ಯಶ್ ದಯಾಳ್, ವಿಜಯ್‌ಕುಮಾರ್ ವಿಶಾಕ್, ರೀಸ್ ಟೋಪ್ಲೆ, ಸ್ವಪ್ನೀಲ್ ಸಿಂಗ್, ಕರ್ಣ್ ಶರ್ಮಾ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಮಯಾಂಕ್ ದಾಗರ್, ಸುಯೇಶ್ ಪ್ರಭುದೇಸಾಯಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಾಹಿಪಾಲ್ ಲೋಮ್ರೊ , ವಿಲ್ ಜಾಕ್ಸ್, ಕ್ಯಾಮೆರಾನ್ ಗ್ರೀನ್, ಮೊಹಮ್ಮದ್ ಸಿರಾಜ್, ಮನೋಜ್ ಭಾಂಡಗೆ, ಆಕಾಶ್ ದೀಪ್, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಸೌರವ್ ಚೌಹಾಣ್ ಮತ್ತು ಅನುಜ್ ರಾವತ್.
ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಯುಧ್ವೀರ್ ಸಿಂಗ್ ಚರಕ್, ಯಶ್ ಠಾಕೂರ್, ಮಯಾಂಕ್ ಯಾದವ್, ಮಣಿಮಾರನ್ ಸಿದ್ಧಾರ್ಥ್, ಶಿವಂ ಮಾವಿ, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಶಮರ್ ಜೋಸೆಫ್, ಡೇವಿಡ್ ವಿಲ್ಲಿ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ಕೈಲ್ ಮೇಯರ್ಸ್ , ಪ್ರೇರಕ್ ಮಂಕಡ್, ಅರ್ಶಿನ್ ಕುಲಕರ್ಣಿ, ದೀಪಕ್ ಹೂಡಾ, ಕೃಷ್ಣ ಗೌತಮ್, ಆಷ್ಟನ್ ಟರ್ನರ್, ನಿಕೋಲಸ್ ಪೂರನ್, ದೇವದತ್ ಪಡಿಕ್ಕಲ್, ಕ್ವಿಂಟನ್ ಡಿ ಕಾಕ್, ಆಯುಷ್ ಬಡೋನಿ, ಮೊಹ್ಸಿನ್ ಖಾನ್, ಮೊಹ್ಸಿನ್ ಖಾನ್, ಅಮಿತ್ ಮಿಶ್ರಾ ಮತ್ತು ಅರ್ಷದ್ ಖಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ