AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Josh Buttler: 33ನೇ ವಯಸ್ಸಿನಲ್ಲಿ ಹೆಸರು ಬದಲಿಸಿಕೊಂಡ ‘ಜೋಶ್’ ಬಟ್ಲರ್..!

Josh Buttler: ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಹಾಗೂ ಇಂಗ್ಲೆಂಡ್‌ ಸೀಮಿತ ಓವರ್​ಗಳ ನಾಯಕ ಜೋಶ್ ಬಟ್ಲರ್ 33ನೇ ವಯಸ್ಸಿನಲ್ಲಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಕಳೆದ 33 ವರ್ಷಗಳಲ್ಲಿ ತನ್ನ ಹೆಸರನ್ನು ತಪ್ಪಾಗಿ ಉಚ್ಚರಿಸಿದಕ್ಕೆ ಬಟ್ಲರ್ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

Josh Buttler: 33ನೇ ವಯಸ್ಸಿನಲ್ಲಿ ಹೆಸರು ಬದಲಿಸಿಕೊಂಡ ‘ಜೋಶ್’ ಬಟ್ಲರ್..!
ಜೋಶ್ ಬಟ್ಲರ್
ಪೃಥ್ವಿಶಂಕರ
|

Updated on:Apr 01, 2024 | 8:04 PM

Share

ಐಪಿಎಲ್ 2024 (IPL 2024) ರಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಆಡಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಮೂರರಲ್ಲಿ ಸ್ಥಾನ ಪಡೆದಿದೆ. ಇಂದು ತನ್ನ ಮೂರನೇ ಪಂದ್ಯವನ್ನು ಆಡುತ್ತಿರುವ ರಾಜಸ್ಥಾನ್ ರಾಯಲ್ಸ್ ಈ ಹೈವೋಲ್ಟೇಜ್ ಕದನದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI vs RR) ತಂಡವನ್ನು ಎದುರಿಸಲಿದೆ. ಆದರೆ ಈ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಹಾಗೂ ಇಂಗ್ಲೆಂಡ್‌ ಸೀಮಿತ ಓವರ್​ಗಳ ನಾಯಕ ಜೋಶ್ ಬಟ್ಲರ್ (Josh Buttler) 33ನೇ ವಯಸ್ಸಿನಲ್ಲಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಕಳೆದ 33 ವರ್ಷಗಳಲ್ಲಿ ತನ್ನ ಹೆಸರನ್ನು ತಪ್ಪಾಗಿ ಉಚ್ಚರಿಸಿದಕ್ಕೆ ಬಟ್ಲರ್ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಬಟ್ಲರ್ ತಮ್ಮ ಹೆಸರನ್ನು ಬದಲಿಸಿಕೊಂಡಿರುವ ವಿಡಿಯೋವನ್ನು ಇಂಗ್ಲೆಂಡ್‌ ಕ್ರಿಕೆಟ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಹೆಸರನ್ನು ಬದಲಿಸಿದ್ದು ಏಕೆ?

ಇಂಗ್ಲೆಂಡ್‌ ಕ್ರಿಕೆಟ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಟ್ಲರ್ ತಮ್ಮ ಹೆಸರನ್ನು ಬದಲಾಯಿಸಲು ಕಾರಣವನ್ನು ಸಹ ಉಲ್ಲೇಖಿಸಿದ್ದಾರೆ. ವೀಡಿಯೋದಲ್ಲಿ ಬಟ್ಲರ್, ‘ ಹಾಯ್ ನಾನು ಇಂಗ್ಲೆಂಡ್‌ ಸೀಮಿತ ಓವರ್​ಗಳ ನಾಯಕ ಜೋಸ್ ಬಟ್ಲರ್. ಆದರೆ ಇದುವರೆಗೆ ಜನರು ತಪ್ಪು ಉಚ್ಚರಣೆಯ ಮೂಲಕ ನನ್ನ ಹೆಸರನ್ನು ಕೂಗುತ್ತಾರೆ. ದಾರಿ ಹೋಕರಿಂದ ಹಿಡಿದು ನನ್ನ ತಾಯಿ ಕೂಡ ನನ್ನ ಜನ್ಮದಿನದ ಶುಭಾಶಯ ಕಾರ್ಡ್​ನಲ್ಲಿ ನನ್ನ ಹೆಸರನ್ನು ತಪ್ಪಾಗಿ ಬರೆದಿದ್ದಾರೆ. 13 ವರ್ಷಗಳ ಕಾಲ ಇಂಗ್ಲೆಂಡ್ ಪರ ಆಡಿ 2 ವಿಶ್ವಕಪ್ ಗೆದ್ದ ಬಳಿಕ ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು, ಇದೀಗ ನನ್ನ ಹೆಸರನ್ನು ಅಧಿಕೃತವಾಗಿ ಜೋಶ್ ಬಟ್ಲರ್ ಎಂದು ಬದಲಾಯಿಸಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ವಾಸ್ತವವಾಗಿ ಬಟ್ಲರ್ ಅವರ ನಿಜವಾದ ಹೆಸರು ಜೋಸ್ ಬಟ್ಲರ್ (Jos Buttler) ಆದರೆ ಎಲ್ಲರೂ ಅವರನ್ನು ಜೋಶ್ ಬಟ್ಲರ್ (Josh Buttler) ಹೆಸರಿನಿಂದ ಇದುವರೆಗೆ ತಪ್ಪಾಗಿ ಕರೆಯುತ್ತಿದ್ದರು. ಇದನ್ನು ಬದಲಿಸಲು ಸಾಕಷ್ಟು ಪ್ರಯತ್ನ ಪಟ್ಟ ಬಟ್ಲರ್ ವಿಫಲರಾಗಿ ಕೊನೆಗೆ ತಮ್ಮ ಹೆಸರನ್ನು ಎಲ್ಲರೂ ಹೇಗೆ ಉಚ್ಚರಿಸುತ್ತಿದ್ದಾರೋ ಅದರಂತೆಯೇ ಬದಲಿಸಿಕೊಂಡಿದ್ದಾರೆ. ಅಂದರೆ ಜೋಸ್ ಬಟ್ಲರ್ ಬದಲಿಗೆ ಜೋಶ್ ಬಟ್ಲರ್ ಎಂದು ತಮ್ಮ ಹೆಸರನ್ನು ಅಧಿಕೃತವಾಗಿ ಬದಲಿಸಿಕೊಂಡಿದ್ದಾರೆ.

ಈ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ

ಐಪಿಎಲ್ 2024 ರಲ್ಲಿ, ರಾಜಸ್ಥಾನ ರಾಯಲ್ಸ್ ಉತ್ತಮ ಆರಂಭ ಪಡೆದುಕೊಂಡಿದೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಆದರೆ ತಂಡದ ಆರಂಭಿಕ ಜೋಶ್ ಬಟ್ಲರ್ ಮಾತ್ರ ಇನ್ನು ಲಯ ಕಂಡುಕೊಂಡಿಲ್ಲ. ಜೋಶ್ ಬಟ್ಲರ್ ಬ್ಯಾಟಿಂಗ್ ಮಾಡುವಾಗ ಸಾಕಷ್ಟು ಕಷ್ಟಪಡುತ್ತಿರುವುದು ಕಂಡುಬಂದಿದೆ. ಇದುವರೆಗೂ ಬಟ್ಲರ್ ಬ್ಯಾಟ್‌ನಿಂದ ಒಂದೇ ಒಂದು ಅದ್ಭುತ ಇನ್ನಿಂಗ್ಸ್ ಬಂದಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:55 pm, Mon, 1 April 24

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ