IPL 2024: ಆರ್ಸಿಬಿ- ರಾಜಸ್ಥಾನ್ ಪಂದ್ಯ ಮಳೆಗಾಹುತಿ? ಇಂದು ಅಹಮದಾಬಾದ್ ಹವಾಮಾನ ಹೇಗಿರಲಿದೆ?
IPL 2024 RCB vs RR Eliminator Ahmedabad Weather Report: ಇಲ್ಲಿಯವರೆಗೆ ಐಪಿಎಲ್ 2024 ರಲ್ಲಿ ಒಟ್ಟು 3 ಪಂದ್ಯಗಳನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದೆ, ಆದ್ದರಿಂದ ಇಂದಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸುಬಹುದು ಎಂಬುದು ಅಭಿಮಾನಿಗಳ ಆತಂಕವಾಗಿದೆ. ಈ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಪಂದ್ಯದ ವೇಳೆ ಅಹಮದಾಬಾದ್‌ನ ಹವಾಮಾನ ಹೇಗಿರುತ್ತದೆ ಎಂಬುದರ ವಿವರ ಇಲ್ಲಿದೆ.

ಐಪಿಎಲ್ 2024 ರ (IPL 2024) ಎಲಿಮಿನೇಟರ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ (RCB vs RR) ನಡುವೆ ನಡೆಯಲಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಒಂದೆಡೆ ಈ ಪಂದ್ಯದ ಬಗ್ಗೆ ಅಭಿಮಾನಿಗಳಲ್ಲಿ ಉತ್ಸುಕತೆ ಮೂಡಿದ್ದರೆ, ಮತ್ತೊಂದೆಡೆ ಈ ಪಂದ್ಯ ಮಳೆಗೆ ಕೊಚ್ಚಿ ಹೋಗಬಹುದೆಂಬ ಆತಂಕವೂ ಅಭಿಮಾನಿಗಳಲ್ಲಿ ಮೂಡಿದೆ. ಇಲ್ಲಿಯವರೆಗೆ ಐಪಿಎಲ್ 2024 ರಲ್ಲಿ ಒಟ್ಟು 3 ಪಂದ್ಯಗಳನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದೆ, ಆದ್ದರಿಂದ ಇಂದಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸುಬಹುದು ಎಂಬುದು ಅಭಿಮಾನಿಗಳ ಆತಂಕವಾಗಿದೆ. ಈ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಪಂದ್ಯದ ವೇಳೆ ಅಹಮದಾಬಾದ್‌ನ ಹವಾಮಾನ (Ahmedabad Weather Report) ಹೇಗಿರುತ್ತದೆ ಎಂಬುದರ ವಿವರ ಇಲ್ಲಿದೆ.
ಅಹಮದಾಬಾದ್‌ನ ಹವಾಮಾನ ಹೇಗಿದೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವು ಕ್ವಾಲಿಫೈಯರ್ 2 ಕ್ಕೆ ಮುನ್ನಡೆಯುತ್ತದೆ. ಇತ್ತ ಸೋತ ತಂಡ ಟ್ರೋಫಿ ರೇಸ್‌ನಿಂದ ಹೊರಗುಳಿಯುತ್ತದೆ. ಹೀಗಾಗಿ ಇಂತಹ ರೋಚಕ ಪಂದ್ಯ ಮಳೆಯಿಂದಾಗಿ ನಿಂತು ಹೋಗುವುದನ್ನು ಯಾರೂ ಬಯಸುವುದಿಲ್ಲ. ಇದೀಗ ಈ ಬಗ್ಗೆ ಹವಾಮಾನ ಇಲಾಖೆ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಎಲಿಮಿನೇಟರ್ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಂದ್ಯದ ವೇಳೆ ಅಹಮದಾಬಾದ್‌ನಲ್ಲಿ ವಾತಾವರಣ ಸ್ಪಷ್ಟವಾಗಿರಲಿದ್ದು. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
Breaking: ಅಹಮದಾಬಾದ್‌ನಲ್ಲಿ ನಾಲ್ವರು ಶಸ್ತ್ರಾಸ್ತ್ರಧಾರಿಗಳ ಬಂಧನ! ಅಭ್ಯಾಸ ರದ್ದುಗೊಳಿಸಿದ ಆರ್ಸಿಬಿ..!
ಪಂದ್ಯ ರದ್ದಾದರೆ ಯಾರಿಗೆ ಲಾಭ?
ಈ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲದಿದ್ದರೂ ಪ್ರಕೃತಿ ಕೃಪೆ ತೋರದೇ ಮಳೆಯಿಂದಾಗಿ ಪಂದ್ಯ ರದ್ದಾದರೆ ಫಲಿತಾಂಶ ಏನಾಗಬಹುದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅಷ್ಟಕ್ಕೂ ಇಂದು ಮಳೆ ಬಂದರೆ ಪಂದ್ಯವನ್ನು ಇನ್ನೊಂದು ದಿನ ನಡೆಸುವ ಸಲುವಾಗಿ ಎಲ್ಲಾ ಕ್ವಾಲಿಫೈಯರ್ ಪಂದ್ಯಗಳಿಗೆ ಮೀಸಲು ದಿನವನ್ನು ಇರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯ ಮಳೆಯಿಂದ ರದ್ದಾದರೂ, ಮೀಸಲು ದಿನದಂದು ಪಂದ್ಯ ನಡೆಯಲಿದೆ. ಮೀಸಲು ದಿನವೂ ಪಂದ್ಯ ನಡೆಯದಿದ್ದರೆ, ರಾಜಸ್ಥಾನವು ನೇರವಾಗಿ ಕ್ವಾಲಿಫೈಯರ್ 2 ಗೆ ಪ್ರವೇಶಿಸುತ್ತದೆ. ಏಕೆಂದರೆ ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ ಆರ್ಸಿಬಿಗಿಂತ ಮೇಲಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾದರೆ ರಾಜಸ್ಥಾನಕ್ಕೆ ನೇರವಾಗಿ ಲಾಭವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Wed, 22 May 24
