
ಐಪಿಎಲ್ 2024 (IPL 2024) ರ 62 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru vs Delhi Capitals) ತಂಡಗಳ ನಡುವೆ ಇಂದು ಸಂಜೆ 7:30ಕ್ಕೆ ಹೈವೋಲ್ಟೇಜ್ ಪಂದ್ಯ ನಡೆಯಲ್ಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಪ್ಲೇ ಆಫ್ಗೇರಲು ಉಭಯ ತಂಡಗಳಿಗೂ ಈ ಪಂದ್ಯ ನಡೆಯುವುದು ಅತ್ಯವಶ್ಯಕವಾಗಿದೆ. ಆದರೆ ಬೆಂಗಳೂರಿನಲ್ಲಿ ಒಂದು ವಾರದಿಂದ ಮಳೆಯಾಗುತ್ತಿದ್ದು, ಪಂದ್ಯದ ದಿನವೂ ವರುಣನ ಅವಕೃಪೆ ಎದುರಾಗುವ ಭೀತಿ ಅಭಿಮಾನಿಗಳಲ್ಲಿತ್ತು. ಅದರಂತೆ ಇಂದು ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇಂದು ಮಧ್ಯಾಹ್ನನದಿಂದಲೇ ಬೆಂಗಳೂರಿನಲ್ಲಿ ಮಳೆ ಸುರಿಯಲಾರಂಭಿಸಿದೆ. ಬಿರುಗಾಳಿ ಸಹಿತ ಧಾರಕಾರ ಮಳೆ ಸುರಿಯುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದು ಆರ್ಸಿಬಿ ಪ್ಲೇಆಫ್ಗೆ ಹತ್ತಿರವಾಗುವುದನ್ನು ನೋಡಬೇಕೆಂದುಕೊಂಡಿದ್ದ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.
ಅಕ್ಯುವೆದರ್ ಪ್ರಕಾರ ಇಂದು ನಗರದಲ್ಲಿ ಮಧ್ಯಾಹ್ನದ ವೇಳೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿತ್ತು. ಅದರಂತೆ ಮಧ್ಯಾಹ್ನದಿಂದ ಮಳೆ ಆರಂಭವಾಗಿದೆ. ಅಲ್ಲದೆ ಪಂದ್ಯವು ರಾತ್ರಿ 7.30 ಕ್ಕೆ ಪ್ರಾರಂಭವಾಗಲ್ಲಿದ್ದು, ಈ ವೇಳೆಯೂ ಅಂದರೆ ಸಂಜೆಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ವರದಿಯಾಗಿರುವಂತೆ ಸಂಜೆ ವೇಳೆಗೆ ಮಳೆ ಆರಂಭವಾದರೆ ಪಂದ್ಯಕ್ಕೆ ಅಡಚಣೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ಅದಾಗ್ಯೂ ಎಷ್ಟೇ ಮಳೆ ಬಂದು ನಿಂತರು ಮೈದಾನವನ್ನು ಕೇವಲ ಅರ್ಧ ಗಂಟೆಯೊಳಗೆ ಪಂದ್ಯಕ್ಕೆ ಸಜ್ಜುಗೊಳಿಸುವ ತಂತ್ರಜ್ಞಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿದೆ. ಈ ಮೈದಾನಕ್ಕೆ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮೈದಾನದಲ್ಲಿ ನಿಂತ ಮಳೆ ನೀರನ್ನು ಬೇಗನೇ ಮೈದಾನದಿಂದ ಹೊರಹಾಕಬಹುದಾಗಿದೆ. ಆದ್ದರಿಂದ ಇಂದು ಮಳೆ ಬಂದು ನಿಂತರೂ ಪಂದ್ಯ ಆರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಿರಂತರವಾಗಿ ಮಳೆಯಾದರೆ ಪಂದ್ಯವನ್ನು ಆರಂಭಿಸುವುದು ಕಷ್ಟಸಾಧ್ಯ.
ಈ ಮೈದಾನದಲ್ಲಿ ಇದುವರೆಗೆ 93 ಐಪಿಎಲ್ ಪಂದ್ಯಗಳು ನಡೆದಿವೆ. ಈ ಮೈದಾನದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡ ಅತಿ ಹೆಚ್ಚು ಪಂದ್ಯಗಳನ್ನು ಅಂದರೆ 50 ಪಂದ್ಯಗಳಲ್ಲಿ ಗೆದ್ದಿದೆ. ಉಳಿದಂತೆ 4 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಈ ಮೈದಾನದಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 166 ಆಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Sun, 12 May 24