IPL 2025: ಒಂದೇ ಓವರ್​ನಲ್ಲಿ 28 ರನ್; ಸಿಎಸ್​ಕೆಗೆ ಸಿಕ್ಕಿದ್ದಾನೆ ಹೊಸ ಹಿಟ್‌ಮ್ಯಾನ್

Aayush Mhatre: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2025 ರ 67ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಯುಷ್ ಮ್ಹಾತ್ರೆ ಅವರು ಗುಜರಾತ್ ಟೈಟನ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಅರ್ಷದ್ ಖಾನ್ ಎಸೆದ ಒಂದು ಓವರ್‌ನಲ್ಲಿ 28 ರನ್ ಗಳಿಸಿ, ಮೂರು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿದರು. ಆದಾಗ್ಯೂ, ಅವರು 34 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.

IPL 2025: ಒಂದೇ ಓವರ್​ನಲ್ಲಿ 28 ರನ್; ಸಿಎಸ್​ಕೆಗೆ ಸಿಕ್ಕಿದ್ದಾನೆ ಹೊಸ ಹಿಟ್‌ಮ್ಯಾನ್
Aayush Mhatre

Updated on: May 25, 2025 | 4:59 PM

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2025 (IPL 2025) ರ 67ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ (CSK vs GT) ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಸಿಎಸ್​ಕೆ ಪರ ತಂಡದ ಯುವ ಓಪನರ್ ಆಯುಷ್ ಮ್ಹಾತ್ರೆ (Ayush Mhatre) ಹೊಡಿಬಡಿ ಆಟದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಗುಜರಾತ್ ವೇಗಿ ಅರ್ಷದ್ ಖಾನ್ ಎಸೆದ ಇನ್ನಿಂಗ್ಸ್​ನ 2ನೇ ಓವರ್​ನಲ್ಲಿ ಆಯುಷ್ ಬರೋಬ್ಬರಿ 28 ರನ್‌ ಕಲೆಹಾಕಿದರು. ಈ ಓವರ್‌ನಲ್ಲಿ ಗುಜರಾತ್ ವೇಗಿ ಅರ್ಷದ್ 3 ಸಿಕ್ಸರ್‌ ಮತ್ತು 2 ಬೌಂಡರಿಗಳನ್ನು ಬಿಟ್ಟುಕೊಟ್ಟರು.

ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್‌ನ ಎರಡನೇ ಓವರ್ ಅನ್ನು ಅರ್ಷದ್ ಖಾನ್ ಎಸೆದರು. ಮಿಡ್-ವಿಕೆಟ್ ಕಡೆಗೆ ಎಸೆದ ಮೊದಲ ಎಸೆತದಲ್ಲೇ ಆಯುಷ್ ಮ್ಹಾತ್ರೆ ಎರಡು ರನ್ ಗಳಿಸಿದರು. ಇದಾದ ನಂತರ, ಆಯುಷ್ ಲಾಂಗ್-ಆನ್ ಕಡೆಗೆ ಎಸೆದ ಎರಡನೇ ಎಸೆತದಲ್ಲಿ ಸಿಕ್ಸರ್ ಮತ್ತು ಮಿಡ್-ಆನ್ ಕಡೆಗೆ ಎಸೆದ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.

ಆಯುಷ್ ಮ್ಹಾತ್ರೆ ಓವರ್‌ನ ನಾಲ್ಕನೇ ಎಸೆತವನ್ನು ಮಿಡ್-ಆಫ್ ಕಡೆಗೆ ಆಡುವ ಮೂಲಕ ಬೌಂಡರಿ ಬಾರಿಸಿದರು. ನಂತರ ಐದನೇ ಎಸೆತದಲ್ಲಿ ಅವರು ಮಿಡ್-ವಿಕೆಟ್ ಕಡೆಗೆ ಬೃಹತ್ ಬೌಂಡರಿ ಬಾರಿಸಿದರು. ನಂತರ ಕೊನೆಯ ಎಸೆತದಲ್ಲಿ, ಆಯುಷ್ ಫೈನ್-ಲೆಗ್ ಕಡೆಗೆ ಸಿಕ್ಸರ್ ಬಾರಿಸಿ ಆ ಓವರ್‌ನಲ್ಲಿ ಮೂರು ಸಿಕ್ಸರ್‌ ಮತ್ತು ಎರಡು ಬೌಂಡರಿಗಳನ್ನು ಒಳಗೊಂಡ 28 ರನ್ ಕಲೆಹಾಕಿದರು. ಆದಾಗ್ಯೂ ಆಯುಷ್ ಅವರ ಇನ್ನಿಂಗ್ಸ್ ಹೆಚ್ಚು ಹೊತ್ತು ಉಳಿಯಲಿಲ್ಲ. ಪ್ರಸಿದ್ಧ್ ಕೃಷ್ಣ ವಿರುದ್ಧದ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಆಯುಷ್ 17 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 34 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

Rohit Sharma: ಐಪಿಎಲ್ ​ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ರೋಹಿತ್ ಶರ್ಮಾ

ಆಯುಷ್ ಪ್ರದರ್ಶನ

ಆಯುಷ್ ಮ್ಹಾತ್ರೆ ಏಪ್ರಿಲ್ 20 ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಈ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 7 ಪಂದ್ಯಗಳನ್ನು ಆಡಿದ್ದು, 34.33 ಸರಾಸರಿಯಲ್ಲಿ 240 ರನ್ ಗಳಿಸಿದ್ದಾರೆ. 188.98 ಸ್ಟ್ರೈಕ್ ರೇಟ್​ನಲ್ಲಿ ರನ್ ಕಲೆಹಾಕಿರುವ ಆಯುಷ್ ಅವರ ಈ ಇನ್ನಿಂಗ್ಸ್​ನಲ್ಲಿ ಒಂದು ಅರ್ಧಶತಕವೂ ಸೇರಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Sun, 25 May 25