IPL 2025: ದೇಹವನ್ನು ಗೌರವಿಸಬೇಕು; ಟಾಸ್ ವೇಳೆಯೇ ನಿವೃತ್ತಿಯ ಸುಳಿವು ನೀಡಿದ್ರಾ ಧೋನಿ? ವಿಡಿಯೋ
MS Dhoni's Future Uncertain: ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತು. ಹೀಗಾಗಿ ತಂಡ ಲೀಗ್ನಲ್ಲೇ ಪ್ರಯಾಣ ಮುಗಿಸಿತು. ಈ ನಡುವೆ ತಂಡದ ನಾಯಕ ಎಂ.ಎಸ್. ಧೋನಿ ನೀಡಿರುವ ಹೇಳಿಕೆ ಅವರ ಭವಿಷ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಅವರು ತಮ್ಮ ದೇಹದ ಸ್ಥಿತಿಯನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ವಯಸ್ಸು ಮತ್ತು ಫಿಟ್‌ನೆಸ್ ದೊಡ್ಡ ಸವಾಲುಗಳಾಗಿವೆ.

ಐಪಿಎಲ್ 2025 (IPL 2025) ರ ಸೀಸನ್ ಚೆನ್ನೈ ಸೂಪರ್ ಕಿಂಗ್ಸ್ಗೆ (CSK) ತುಂಬಾ ನಿರಾಶಾದಾಯಕವಾಗಿತ್ತು. ತಂಡವು ಆಡಿದ 14 ಪಂದ್ಯಗಳಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಹೀಗಾಗಿ ಚೆನ್ನೈ ತಂಡಕ್ಕೆ ಪ್ಲೇ ಆಫ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಏತನ್ಮಧ್ಯೆ, ಈ ಲೀಗ್ನ ಕೊನೆಯ ಪಂದ್ಯವನ್ನಾಡುತ್ತಿರುವ ಸಿಎಸ್‌ಕೆ ತಂಡವನ್ನು ಮುನ್ನಡೆಸುತ್ತಿರುವ ನಾಯಕ ಎಂಎಸ್ ಧೋನಿ (MS Dhoni) ಟಾಸ್ ಸಮಯದಲ್ಲಿ ನೀಡಿದ ಹೇಳಿಕೆ ಅಭಿಮಾನಿಗಳನ್ನು ಸಾಕಷ್ಟು ಗೊಂದಲಕ್ಕೀಡು ಮಾಡಿದೆ. ವಾಸ್ತವವಾಗಿ ಇದು ಧೋನಿಯ ಕೊನೆಯ ಐಪಿಎಲ್ ಪಂದ್ಯ ಎಂತಲೂ ಹೇಳಲಾಗುತ್ತಿದೆ. ಈ ನಡುವೆ ಧೋನಿ ನೀಡಿರುವ ಹೇಳಿಕೆ ಅವರು ಮುಂದಿನ ಸೀಸನ್ ಆಡುವ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಧೋನಿ ಹೇಳಿದ್ದೇನು?
ಗುಜರಾತ್ ಟೈಟನ್ಸ್ ವಿರುದ್ಧದ ಸಿಎಸ್‌ಕೆ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ನಡೆದ ಟಾಸ್ ಸಮಯದಲ್ಲಿ, ನಿರೂಪಕ ರವಿಶಾಸ್ತ್ರಿ, ಧೋನಿಗೆ, ‘ನೀವು 18 ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿದ್ದೀರಿ, ನಿಮ್ಮ ದೇಹವು ಈಗ ಹೇಗೆ ವರ್ತಿಸುತ್ತಿದೆ?’ ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಧೋನಿ, ದೇಹವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷವೂ ಹೊಸ ಸವಾಲನ್ನು ತರುತ್ತದೆ. ನಿಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾಗ, ದೇಹವನ್ನು ಗೌರವಿಸಬೇಕು. ಇದಕ್ಕೆ ಸಾಕಷ್ಟು ನಿರ್ವಹಣೆ ಅಗತ್ಯವಿರುತ್ತದೆ. ನಾನು ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾಗ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಲಿಲ್ಲ. ಇಷ್ಟು ವರ್ಷಗಳ ಕಾಲ ನನ್ನನ್ನು ಫಿಟ್ ಆಗಿಡಲು ಸಹಾಯ ಮಾಡಿದ ನನ್ನ ಸಹಾಯಕ ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು.
"When you've reached the last stage of your career…" – #MSDhoni 😢#OneLastTime, #CaptainCool wins the toss! 💛
Watch the LIVE action ➡ https://t.co/vroVQLpMts#Race2Top2 👉 #GTvCSK | LIVE NOW on Star Sports Network & JioHotstar! pic.twitter.com/5BejZIvsqu
— Star Sports (@StarSportsIndia) May 25, 2025
ಧೋನಿಯ ಈ ಹೇಳಿಕೆ ಅವರ ಹೋರಾಟ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. 43 ನೇ ವಯಸ್ಸಿನಲ್ಲಿಯೂ ಅವರು ಮೈದಾನಕ್ಕೆ ಬರುವ ಮೂಲಕ ತಮ್ಮ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ, ಆದರೆ ಅವರ ಮಾತುಗಳಿಂದ ಅವರ ದೇಹವು ಮೊದಲಿನಂತೆ ಅವರನ್ನು ಬೆಂಬಲಿಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಧೋನಿ ತಮ್ಮ ದೇಹದ ಸ್ಥಿತಿಯನ್ನು ನೋಡಿಯೇ ತಮ್ಮ ಭವಿಷ್ಯವನ್ನು ನಿರ್ಧರಿಸುವುದಾಗಿ ಈ ಹಿಂದೆ ಹಲವು ಬಾರಿ ಹೇಳಿದ್ದಾರೆ. ಈ ಸೀಸನ್‌ನಲ್ಲಿ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅವರು ಬ್ಯಾಟಿಂಗ್‌ನಲ್ಲಿ ದೊಡ್ಡ ಪರಿಣಾಮ ಬೀರಿಲ್ಲ, ಆದರೆ ಅವರ ಉಪಸ್ಥಿತಿಯು ತಂಡಕ್ಕೆ ಖಂಡಿತವಾಗಿಯೂ ಸ್ಫೂರ್ತಿ ನೀಡಿದೆ. ಆದರೆ, ಇದು ಅವರ ಕೊನೆಯ ಸೀಸನ್ ಅಥವಾ ಇಲ್ಲವೇ ಎಂಬುದನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.
ಐಪಿಎಲ್‌ನಲ್ಲಿ ವಿಶೇಷ ನಾಟೌಟ್ ಶತಕ ಪೂರ್ಣಗೊಳಿಸಿದ ಧೋನಿ
ಧೋನಿ ಭವಿಷ್ಯದ ಬಗ್ಗೆ ಸಸ್ಪೆನ್ಸ್
ಧೋನಿ ಅವರ ಈ ಹೇಳಿಕೆ ಅವರ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಇದು ಅವರ ಕೊನೆಯ ಐಪಿಎಲ್ ಸೀಸನ್ ಆಗಿತ್ತಾ? ಮುಂದಿನ ವರ್ಷ ಅವರು ಮತ್ತೆ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಾರಾ? ಧೋನಿ ಈ ಹಿಂದೆ ಪಾಡ್‌ಕ್ಯಾಸ್ಟ್‌ನಲ್ಲಿ ದೇಹಕ್ಕೆ 8-10 ತಿಂಗಳುಗಳನ್ನು ನೀಡುತ್ತೇನೆ. ಆ ನಂತರ ನಾನು ಮುಂದೆ ಆಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತೇನೆ ಎಂದು ಹೇಳಿದ್ದರು. ಆದರೆ ಅವರ ಇತ್ತೀಚಿನ ಹೇಳಿಕೆಗಳಿಂದ ವಯಸ್ಸು ಮತ್ತು ಫಿಟ್ನೆಸ್ ಈಗ ಅವರಿಗೆ ದೊಡ್ಡ ಸವಾಲುಗಳಾಗಿವೆ ಎಂಬುದು ಸ್ಪಷ್ಟವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Sun, 25 May 25
