IPL 2025: ಒಂದು ವಾರದೊಳಗೆ ಸಿದ್ಧರಾಗಿರಿ… ಬಿಸಿಸಿಐ ಸೂಚನೆ

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 58 ಪಂದ್ಯಗಳು ಪಂದ್ಯಗಳು ಮುಗಿದಿವೆ. ಲೀಗ್ ಹಂತದಲ್ಲಿ ಇನ್ನೂ ಕೇವಲ 12 ಮ್ಯಾಚ್​ಗಳು ಮಾತ್ರ ಉಳಿದಿದ್ದು, ಇದಾದ ಬಳಿಕ 4 ಪಂದ್ಯಗಳ ಪ್ಲೇಆಫ್ ಜರುಗಬೇಕಿದೆ. ಈ ಪಂದ್ಯಗಳು ಒಂದು ವಾರದ ಬಳಿಕ ನಡೆಯುವ ಸಾಧ್ಯತೆಯಿದ್ದು, ಅದನ್ನು ಎಲ್ಲಿ ಆಯೋಜಿಸಲಿದ್ದಾರೆ ಎಂಬುದರ ಸ್ಪಷ್ಟ ಚಿತ್ರಣ ಈ ವಾರದೊಳಗೆ ದೊರೆಯಲಿದೆ.

IPL 2025: ಒಂದು ವಾರದೊಳಗೆ ಸಿದ್ಧರಾಗಿರಿ... ಬಿಸಿಸಿಐ ಸೂಚನೆ
IPL 2025

Updated on: May 10, 2025 | 1:29 PM

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್​ನ್ನು (IPL 2025) ಒಂದು ವಾರದವರೆಗೆ ಸ್ಥಗಿತಗೊಳಿಸಿದೆ. ಅಂದರೆ ಒಂದು ವಾರದ ನಂತರ ಹೊಸ ವೇಳಾಪಟ್ಟಿಯೊಂದಿಗೆ ಟೂರ್ನಿ ಮತ್ತೆ ಪ್ರಾರಂಭವಾಗಬಹುದು. ಇದಕ್ಕೂ ಮೊದಲು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆಟಗಾರರ ಸುರಕ್ಷತಾ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಈ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದೀಗ ಐಪಿಎಲ್​ನಲ್ಲಿ ಕಾಣಿಸಿಕೊಂಡ ವಿದೇಶಿ ಆಟಗಾರರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ ಎಂದು ವರದಿಯಾಗಿದೆ.

ಬಿಸಿಸಿಐ ಸೂಚನೆ:

ಐಪಿಎಲ್ ಸ್ಥಗಿತಗೊಂಡ ಬಳಿಕ ಎಲ್ಲಾ ಆಟಗಾರರು ಮನೆಗೆ ಮರಳುತ್ತಿದ್ದಾರೆ. ವಿದೇಶಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೂಡ ತಮ್ಮ ದೇಶಗಳಿಗೆ ತೆರಳುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಒಂದು ವಾರದ ನಂತರ ಐಪಿಎಲ್ ಮತ್ತೆ ಪ್ರಾರಂಭವಾದರೆ, ಈ ವಿದೇಶಿ ಆಟಗಾರರು ಹಿಂತಿರುಗುತ್ತಾರೋ ಇಲ್ಲವೋ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ.

ವರದಿಗಳ ಪ್ರಕಾರ, ಒಂದು ವಾರದೊಳಗೆ ಐಪಿಎಲ್ ಮತ್ತೆ ಆರಂಭವಾಗಲಿದ್ದು, ಅದಕ್ಕೆ ಸಿದ್ಧರಾಗಿರುವಂತೆ ತಮ್ಮ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ತಿಳಿಸುವಂತೆ ಬಿಸಿಸಿಐ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ. ಅಲ್ಲದೆ ವಿದೇಶಿ ಆಟಗಾರರಿಗೆ ಒಂದು ವಾರದೊಳಗೆ ಮತ್ತೆ ಭಾರತಕ್ಕೆ ಬರಲು ಸಿದ್ಧರಾಗಿರಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಇದಾಗ್ಯೂ, 7 ದಿನಗಳ ನಂತರ ಬಿಸಿಸಿಐ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸುತ್ತದೆ. ಅದರ ನಂತರವೇ ಐಪಿಎಲ್ ಮತ್ತೆ ಪ್ರಾರಂಭವಾಗಬಹುದು. ಅಂದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆಯಾದರೆ, ಬಿಸಿಸಿಐ ಒಂದು ವಾರದೊಳಗೆ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಇದಾದ ನಂತರ ಪಂದ್ಯಾವಳಿಯನ್ನು ಮತ್ತೆ ಆಯೋಜಿಸಲಾಗುತ್ತದೆ.

16 ಪಂದ್ಯಗಳು ಬಾಕಿ:

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​ 18 ರಲ್ಲಿ ಈವರೆಗೆ 58 ಪಂದ್ಯಗಳು ಮುಗಿದಿವೆ. ಇನ್ನು ಉಳಿದಿರುವುದು ಕೇವಲ 16 ಪಂದ್ಯಗಳು ಮಾತ್ರ. ಅಂದರೆ 12 ಲೀಗ್ ಪಂದ್ಯಗಳು ಹಾಗೂ 4 ಪ್ಲೇಆಫ್ ಮ್ಯಾಚ್​ಗಳು ಮಾತ್ರ ಬಾಕಿಯಿವೆ. ಈ ಪಂದ್ಯಗಳ ಮೂಲಕ ಐಪಿಎಲ್​ ಅನ್ನು ಪೂರ್ಣಗೊಳಿಸಲು ಬಿಸಿಸಿಐ ಮುಂದಿನ ವಾರ ಪ್ರಮುಖ ನಿರ್ಧಾರ ಕೈಗೊಳ್ಳಲಿದೆ.

ಇದನ್ನೂ ಓದಿ: IPL 2025: ಐಪಿಎಲ್ ತಡವಾದ್ರೆ, RCB ತಂಡದ ನಾಲ್ವರು ಅಲಭ್ಯ

ಒಂದು ವೇಳೆ ಭಾರತದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಾಗದಿದ್ದರೆ, ಯುಎಇ ಅಥವಾ ಸೌತ್ ಆಫ್ರಿಕಾದಲ್ಲಿ ಟೂರ್ನಿಯನ್ನು ಆಯೋಜಿಸಬಹುದು. ಅಲ್ಲದೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡ 16 ಪಂದ್ಯಗಳಿಗೆ ಆತಿಥ್ಯವಹಿಸಲು ಆಸಕ್ತಿ ತೋರಿಸಿದೆ. ಹೀಗಾಗಿ ಮುಂದಿನ ವಾರದಲ್ಲಿ ಐಪಿಎಲ್​ನ ಉಳಿದ ಪಂದ್ಯಗಳ ಆಯೋಜನೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

 

Published On - 1:24 pm, Sat, 10 May 25