Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐಪಿಎಲ್ ಆರಂಭಕ್ಕೂ ಮುನ್ನ ಎಲ್ಲಾ 10 ತಂಡಗಳ ನಾಯಕರ ಸಭೆ ಕರೆದ ಬಿಸಿಸಿಐ

IPL 2025 Captains' Meeting: ಬಿಸಿಸಿಐ ಮಾರ್ಚ್ 22 ರಿಂದ ಆರಂಭವಾಗುವ ಐಪಿಎಲ್ 2025 ರ ಮುನ್ನ ಎಲ್ಲಾ 10 ತಂಡಗಳ ನಾಯಕರ ಸಭೆಯನ್ನು ಮಾರ್ಚ್ 20 ರಂದು ಮುಂಬೈನಲ್ಲಿ ಆಯೋಜಿಸಿದೆ. ಈ ಸಭೆಯಲ್ಲಿ ಹೊಸ ನಿಯಮಗಳ ಬಗ್ಗೆ ಚರ್ಚೆ, ಫೋಟೋಶೂಟ್ ಮತ್ತು ಇತರ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲಾ ಫ್ರಾಂಚೈಸಿಗಳ ವ್ಯವಸ್ಥಾಪಕರನ್ನು ಸಹ ಆಹ್ವಾನಿಸಲಾಗಿದೆ. ಈ ಸಭೆಯು ಸುಮಾರು 4 ಗಂಟೆಗಳ ಕಾಲ ನಡೆಯಲಿದೆ.

IPL 2025: ಐಪಿಎಲ್ ಆರಂಭಕ್ಕೂ ಮುನ್ನ ಎಲ್ಲಾ 10 ತಂಡಗಳ ನಾಯಕರ ಸಭೆ ಕರೆದ ಬಿಸಿಸಿಐ
ಐಪಿಎಲ್ 2025
Follow us
ಪೃಥ್ವಿಶಂಕರ
|

Updated on: Mar 17, 2025 | 9:23 PM

2025 ರ ಐಪಿಎಲ್ ಇದೇ ಮಾರ್ಚ್ 22 ರಿಂದ ಆರಂಭವಾಗಲಿದೆ. ಅಂದರೆ ಈ ಟೂರ್ನಿ ಆರಂಭವಾಗಲು ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ನಡುವೆ ಬಿಸಿಸಿಐ ಎಲ್ಲಾ 10 ತಂಡಗಳ ನಾಯಕರ ಸಭೆ ಕರೆದಿದೆ. ಹೀಗಾಗಿ ಮಾರ್ಚ್​ 20 ರಂದು ಮುಂಬೈನಲ್ಲಿ ನಡೆಯಲ್ಲಿರುವ ಈ ಸಭೆಗೆ 10 ತಂಡಗಳು ನಾಯಕರು ಇದೀಗ ತಮ್ಮ ತಮ್ಮ ತಂಡಗಳನ್ನು ತೊರೆದು ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಗೆ ತೆರಳಲಿದ್ದಾರೆ. ಬಿಸಿಸಿಐ ಕರೆದಿರುವ ಈ ಸಭೆಯಲ್ಲಿ ನಾಯಕರ ಫೋಟೋಶೂಟ್ ಕೂಡ ನಡೆಯಲಿದೆ.

ಮುಂಬೈನಲ್ಲಿ ನಾಯಕರ ಸಭೆ

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆಯಲ್ಲಿರುವ ಈ ಸಭೆಯಲ್ಲಿ ನಾಯಕರಲ್ಲದೆ, ಎಲ್ಲಾ 10 ಫ್ರಾಂಚೈಸಿಗಳ ವ್ಯವಸ್ಥಾಪಕರು ಸಹ ಹಾಜರಾಗುವಂತೆ ಸೂಚಿಸಲಾಗಿದೆ. ಕ್ರಿಕೆಟ್ ಸೆಂಟರ್‌ನಲ್ಲಿ ನಡೆಯಲಿರುವ ಸಭೆ ಸುಮಾರು 1 ಗಂಟೆ ಕಾಲ ನಡೆಯಲಿದ್ದು, ಎಲ್ಲಾ ತಂಡಗಳ ನಾಯಕರಿಗೆ ಹೊಸ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಇದಾದ ನಂತರ, ತಾಜ್ ಹೋಟೆಲ್‌ನಲ್ಲಿ ಇತರ ಕೆಲವು ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುವುದು. ಒಟ್ಟಾರೆಯಾಗಿ ಈ ಕಾರ್ಯಕ್ರಮ ಸುಮಾರು 4 ಗಂಟೆಗಳ ಕಾಲ ನಡೆಯಲಿದ್ದು, ಎಲ್ಲಾ ನಾಯಕರ ಸಾಂಪ್ರದಾಯಿಕ ಫೋಟೋ ಶೂಟ್‌ನೊಂದಿಗೆ ಮುಕ್ತಾಯಗೊಳ್ಳುತ್ತದೆ.

10 ತಂಡಗಳ ನಾಯಕರ ಪಟ್ಟಿ

  1. ಅಕ್ಷರ್ ಪಟೇಲ್- ಡೆಲ್ಲಿ ಕ್ಯಾಪಿಟಲ್ಸ್
  2. ಹಾರ್ದಿಕ್ ಪಾಂಡ್ಯ- ಮುಂಬೈ ಇಂಡಿಯನ್ಸ್
  3. ಪ್ಯಾಟ್ ಕಮ್ಮಿನ್ಸ್- ಸನ್‌ರೈಸರ್ಸ್ ಹೈದರಾಬಾದ್
  4. ರುತುರಾಜ್ ಗಾಯಕ್ವಾಡ್- ಚೆನ್ನೈ ಸೂಪರ್ ಕಿಂಗ್ಸ್
  5. ರಜತ್ ಪಾಟಿದಾರ್- ರಾಯಲ್ ಚಾಲೆಂಜರ್ಸ್ ಬೆಂಗಳೂರು
  6. ರಿಷಭ್ ಪಂತ್- ಲಕ್ನೋ ಸೂಪರ್ ಜೈಂಟ್ಸ್
  7. ಶ್ರೇಯಸ್ ಅಯ್ಯರ್- ಪಂಜಾಬ್ ಕಿಂಗ್ಸ್
  8. ಸಂಜು ಸ್ಯಾಮ್ಸನ್- ರಾಜಸ್ಥಾನ್ ರಾಯಲ್ಸ್
  9. ಅಜಿಂಕ್ಯ ರಹಾನೆ- ಕೊಲ್ಕತ್ತಾ ನೈಟ್ ರೈಡರ್ಸ್​
  10. ಶುಭ್​ಮನ್ ಗಿಲ್- ಗುಜರಾತ್ ಟೈಟಾನ್ಸ್

ಉದ್ಘಾಟನಾ ಸಮಾರಂಭ

ಐಪಿಎಲ್‌ನ ಮೊದಲ ಪಂದ್ಯ ಮಾರ್ಚ್ 22 ರಂದು ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ಮತ್ತು ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ನಡುವೆ ನಡೆಯಲಿದೆ. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಿವುಡ್​ನ ಸ್ಟಾರ್ ನಟಿಯಾದ ದಿಶಾ ಪಟಾನಿ, ಖ್ಯಾತ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್ ಹಾಗೂ ಪಂಜಾಬಿ ಗಾಯಕ ಕರಣ್ ಔಜ್ಲಾ ಅವರು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು