ಬ್ಯಾಟಿಂಗ್ ಮಾಡಿದ್ದು ಸಾಕು… ತಿಲಕ್ ವರ್ಮಾನ ಅರ್ಧದಲ್ಲೇ ಕಳುಹಿಸಿದ ಹಾರ್ದಿಕ್ ಪಾಂಡ್ಯ

Lucknow Super Giants vs Mumbai Indians: ಲಕ್ನೋದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 203 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 191 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆ 12 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಬ್ಯಾಟಿಂಗ್ ಮಾಡಿದ್ದು ಸಾಕು... ತಿಲಕ್ ವರ್ಮಾನ ಅರ್ಧದಲ್ಲೇ ಕಳುಹಿಸಿದ ಹಾರ್ದಿಕ್ ಪಾಂಡ್ಯ
Tilak Varma - Hardik Pandya

Updated on: Apr 05, 2025 | 9:05 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯವು ರಿಟೈರ್ಡ್​ ಔಟ್​ಗೆ ಸಾಕ್ಷಿಯಾಯಿತು. ಅದು ಸಹ ಗಾಯಗೊಳ್ಳದ ಆಟಗಾರನನ್ನು ಪೆವಿಲಿಯನ್​ಗೆ ಕಳುಹಿಸಿ ಮತ್ತೋರ್ವ ಬ್ಯಾಟರ್​ನನ್ನು ಕರೆತರುವ ಮೂಲಕ. ಇಂತಹದೊಂದು ನಿರ್ಧಾರ ತೆಗೆದುಕೊಂಡಿದ್ದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ. ಗಾಯಗೊಂಡ ಆಟಗಾರರು ರಿಟೈರ್ಡ್ ಹರ್ಟ್ ಘೋಷಿಸಿ ಪೆವಿಲಿಯನ್​ಗೆ ಮರಳುವುದು ಸಾಮಾನ್ಯ. ಆದರೆ ತಿಲಕ್ ವರ್ಮಾ ಅವರು ಗಾಯಗೊಳ್ಳದಿದ್ದರೂ ಪಾಂಡ್ಯ ಅವರಿಗೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್​ಗೆ ಹೋಗುವಂತೆ ಸೂಚಿಸಿದರು.

ತಿಲಕ್ ವರ್ಮಾ ಪೆವಿಲಿಯನ್​ಗೆ ತೆರಳುತ್ತಿದ್ದಂತೆ ಮಿಚೆಲ್ ಸ್ಯಾಂಟ್ನರ್ ಕಣಕ್ಕಿಳಿದರು. ಇದಾಗ್ಯೂ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ
ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾದ ಮಾಜಿ ಆಟಗಾರನ ಪುತ್ರ
VIDEO: ವಿರಾಟ್ ಕೊಹ್ಲಿಗೆ ಬೌಲಿಂಗ್: ಭಾವುಕರಾಗಿ ಅರ್ಧದಲ್ಲೇ ನಿಂತ ಸಿರಾಜ್
11ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ವಿಶ್ವ ದಾಖಲೆ ಬರೆದ ನಸೀಮ್ ಶಾ
MS Dhoni: ಕೇವಲ 3 ರನ್​: ಗ್ರೇಟ್​ ಫಿನಿಶರ್ ಫಿನಿಶ್..!

ಔಟಾಗದೇ ಪೆವಿಲಿಯನ್​ಗೆ ಮರಳಿದ ತಿಲಕ್ ವರ್ಮಾ ವಿಡಿಯೋ:

ತಿಲಕ್ ವರ್ಮಾ ಅವರನ್ನು ಪೆವಿಲಿಯನ್​ಗೆ ಕಳಿಸಲು ಕಾರಣವೇನು?

ಈ ಪಂದ್ಯದಲ್ಲಿ ತಿಲಕ್ ವರ್ಮಾ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ 23 ಎಸೆತಗಳನ್ನು ಎದುರಿಸಿದ ಅವರು ಕಲೆಹಾಕಿದ್ದು ಕೇವಲ 25 ರನ್​ಗಳು ಮಾತ್ರ. ಕೊನೆಯ 12 ಎಸೆತಗಳಲ್ಲಿ 29 ರನ್​ ಬೇಕಿದ್ದಾಗಲೂ ತಿಲಕ್ ವರ್ಮಾ  ದೊಡ್ಡ ಹೊಡೆತ ಬಾರಿಸಲು ಪರದಾಡುತ್ತಿದ್ದರು.

ಇದನ್ನು ಗಮನಿಸಿದ ಹಾರ್ದಿಕ್ ಪಾಂಡ್ಯ ರಿಟೈರ್ಡ್ ಹರ್ಟ್​ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಅಲ್ಲದೆ ಕೊನೆಯ ಹಂತದಲ್ಲಿ ಮಿಚೆಲ್ ಸ್ಯಾಂಟ್ನರ್ ಅವರನ್ನು ಕಣಕ್ಕಿಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ನೀಡಿದ ಸ್ಪಷ್ಟನೆ ಏನು?

ತಿಲಕ್ ವರ್ಮಾ ಅವರನ್ನು ಅರ್ಧದಲ್ಲೇ ಪೆವಿಲಿಯನ್​ಗೆ ಕಳುಹಿಸಿದ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ನಮಗೆ ಕೆಲವು ದೊಡ್ಡ ಹಿಟ್‌ಗಳು ಬೇಕಾಗಿದ್ದವು. ಕ್ರಿಕೆಟ್‌ನಲ್ಲಿ ಬಿಗ್ ಹಿಟ್‌ಗಳನ್ನು ಬಾರಿಸಲಾಗದ ದಿನಗಳಿರುತ್ತವೆ. ತಿಲಕ್ ವರ್ಮಾಗೆ ದೊಡ್ಡ ಹೊಡೆತಗಳನ್ನು ಬಾರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರನ್ನು ವಾಪಸ್ ಕಳುಹಿಸಲು ನಿರ್ಧರಿಸಿದೆ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ಗಾಯ: ಬಿಗ್ ಅಪ್​ಡೇಟ್ ನೀಡಿದ RCB ಕೋಚ್

ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್:

ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 16ನೇ​ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ಗಳನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 191 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 12 ರನ್​ಗಳ ರೋಚಕ ಜಯ ಸಾಧಿಸಿದೆ.