IPL 2025: ಮೊದಲ ಓವರ್​ನಲ್ಲೇ ಅಭಿಷೇಕ್- ಹೆಡ್ ಕ್ಯಾಚ್ ಡ್ರಾಪ್; ಎಷ್ಟು ದುಬಾರಿಯಾಯ್ತು?

Mumbai Indians vs Sunrisers Hyderabad: ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ, ಮುಂಬೈ ತಂಡದ ಫೀಲ್ಡರ್​​ಗಳು ಎರಡು ನಿರ್ಣಾಯಕ ಕ್ಯಾಚ್‌ಗಳನ್ನು ಕೈಬಿಟ್ಟರು. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರು ಈ ಅವಕಾಶವನ್ನು ಬಳಸಿಕೊಂಡು, ತಂಡಕ್ಕೆ 59 ರನ್‌ಗಳ ಜೊತೆಯಾಟವನ್ನು ನೀಡಿದರು.

IPL 2025: ಮೊದಲ ಓವರ್​ನಲ್ಲೇ ಅಭಿಷೇಕ್- ಹೆಡ್ ಕ್ಯಾಚ್ ಡ್ರಾಪ್; ಎಷ್ಟು ದುಬಾರಿಯಾಯ್ತು?
Head, Abhishek

Updated on: Apr 17, 2025 | 9:13 PM

ಐಪಿಎಲ್ 2025  (IPL 2025)ರ 33 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (MI vs SRH) ನಡುವೆ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್​ಗೆ ಇಳಿದಿದ್ದ ಸನ್‌ರೈಸರ್ಸ್ ತಂಡಕ್ಕೆ ಮೊದಲ ಓವರ್​ನಲ್ಲೇ ಎರಡು ಬ್ಯಾಕ್ ಟು ಬ್ಯಾಕ್ ಆಘಾತಗಳು ಎದುರಾಗಿದ್ದವು. ಆದರೆ ಮುಂಬೈ ತಂಡದ ಆಟಗಾರರು ಮಾಡಿದ ತಪ್ಪಿನಿಂದಾಗಿ ಸನ್‌ರೈಸರ್ಸ್ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಶೂನ್ಯಕ್ಕೆ ಔಟಾಗುವುದರಿಂದ ಪಾರಾದರು.

ಮೊದಲ ಓವರ್​ನಲ್ಲಿ 2 ಕ್ಯಾಚ್ ಡ್ರಾಪ್

ವಾಸ್ತವವಾಗಿ, ಮುಂಬೈ ಕಡೆಯಿಂದ ದೀಪಕ್ ಚಹಾರ್ ಮೊದಲ ಓವರ್​ ಬೌಲಿಂಗ್ ಮಾಡುವ ಜವಬ್ದಾರಿ ಹೊತ್ತಿದ್ದರು. ಅದರಂತೆ ದೀಪ್ ಎಸೆದ ಪಂದ್ಯದ ಮೊದಲ ಚೆಂಡು ಅಭಿಷೇಕ್ ಶರ್ಮಾ ಅವರ ಬ್ಯಾಟ್‌ನ ಅಂಚನ್ನು ತಗುಲಿ ಮೊದಲ ಸ್ಲಿಪ್‌ಗೆ ಹೋಯಿತು. ಆದರೆ ಅಲ್ಲೇ ನಿಂತಿದ್ದ ವಿಲ್ ಜ್ಯಾಕ್ಸ್ ಕ್ಯಾಚ್ ಕೈಬಿಟ್ಟರು. ಇಡೀ ಮುಂಬೈ ತಂಡ ಒಂದು ಕ್ಷಣ ಆಘಾತಕ್ಕೊಳಗಾಯಿತು. ಇದಾದ ನಂತರ, ದೀಪಕ್ ಮತ್ತೊಮ್ಮೆ ಆ ಓವರ್‌ನ ನಾಲ್ಕನೇ ಎಸೆತದಲ್ಲಿ ಹೆಡ್ ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸಿದ್ದರು. ಹೆಡ್ ಮಿಡ್‌ವಿಕೆಟ್ ಕಡೆಗೆ ಹೊಡೆದ ಶಾಟ್ ನೇರವಾಗಿ ಕರ್ಣ್ ಶರ್ಮಾ ಕೈಗೆ ಹೋದಂತೆ ತೋರುತ್ತಿತ್ತು. ಆದರೆ ಕರ್ಣ್ ಅವರ ಕಳಪೆ ಫೀಲ್ಡಿಂಗ್ ಪ್ರಯತ್ನದಿಂದಾಗಿ, ಚೆಂಡು ಅವರಿಗಿಂತ ಸ್ವಲ್ಪ ಮುಂದೆ ಬಿದ್ದಿತು.

ಈ ಎರಡು ಕ್ಯಾಚ್​​ಗಳು ಡ್ರಾಪ್ ಆದಾಗ ಈ ಇಬ್ಬರು ಬ್ಯಾಟ್ಸ್‌ಮನ್​ಗಳು ಖಾತೆ ಕೂಡ ತೆರೆದಿರಲಿಲ್ಲ. ಈ ಎರಡು ಜೀವದಾನಗಳ ಲಾಭ ಪಡೆದ ಈ ಇಬ್ಬರು ಆಟಗಾರರು ತಂಡಕ್ಕೆ ಮೊದಲ ವಿಕೆಟ್​ಗೆ 59 ರನ್​ಗಳ ಜೊತೆಯಾಟ ನೀಡಿದರು. ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 7 ಬೌಂಡರಿ ಸಹಿತ 40 ರನ್ ಬಾರಿಸಿ ಔಟಾದರೆ, ಟ್ರಾವಿಸ್ ಹೆಡ್ 29 ಎಸೆತಗಳಲ್ಲಿ 3 ಬೌಂಡರಿ ಸಹಿತ 28 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.

IPL 2025: ತವರಿನಲ್ಲಿ ಆರ್​ಸಿಬಿಗೆ 3ನೇ ಪಂದ್ಯ; ಎದುರಾಳಿ ಯಾರು? ಪಂದ್ಯ ಯಾವಾಗ ಆರಂಭ?

ಉಭಯ ತಂಡಗಳು

ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ, ಇಶಾನ್ ಮಾಲಿಂಗ.

ಮುಂಬೈ ಇಂಡಿಯನ್ಸ್: ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಕರ್ಣ್​ ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:13 pm, Thu, 17 April 25