
ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅನ್‌ಬಾಕ್ಸ್ ಹೆಸರಿನಲ್ಲಿ ರಂಗೀನ್ ಕಾರ್ಯಕ್ರಮ ಏರ್ಪಡಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 17 ರಂದು ನಡೆದ ಈ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದೆ. ಇದಾಗ್ಯೂ ಲೈವ್ ಸ್ಟ್ರೀಮಿಂಗ್ ವಿರುದ್ಧ ಅಭಿಮಾನಿಗಳು ಆಕ್ರೋಶವನ್ನು ವ್ಯಕಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅನ್‌ಬಾಕ್ಸ್ ಕಾರ್ಯಕ್ರಮದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು. ಖ್ಯಾತ ಡಿಜೆ ಟಿಮ್ಮಿ ಟ್ರಂಪೆಟ್ ಮತ್ತು ಸ್ಥಳೀಯ ಕಲಾವಿದರ ಪ್ರದರ್ಶನಗಳನ್ನು ಅಭಿಮಾನಿಗಳು ಮನಸೊರೆಗೊಂಡರು. ಆದರೆ ಇತ್ತ ಲೈವ್ ಸ್ಟ್ರೀಮಿಂಗ್ ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಮಾತ್ರ ಕಳಪೆ ಸ್ಟ್ರೀಮಿಂಗ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದರು.
99 ರೂ. ರಿಚಾರ್ಜ್ನೊಂದಿಗೆ ಆರ್ಸಿಬಿ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರಸ್ತುತಪಡಿಸಿತ್ತು. ಆದರೆ ಲೈವ್ ಸ್ಟ್ರೀಮಿಂಗ್ನಲ್ಲಿ ಬಫರಿಂಗ್, ವಿಳಂಬ ಕಂಡು ಬಂದಿದೆ. ಅಲ್ಲದೆ ಸ್ಟ್ರೀಮಿಂಗ್ ಗುಣಮಟ್ಟ ಸಹ ಕಳಪೆಯಿಂದ ಕೂಡಿತ್ತು.
The streaming quality is poor and the camera angles are terrible
This RCB unbox event stream is a complete mess pic.twitter.com/J5QkVtypCi— RCBIANS OFFICIAL (@RcbianOfficial) March 17, 2025
ಇದೀಗ ಈ ಬಗ್ಗೆ ಆರ್ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಅದರಲ್ಲೂ ಕೆಲವರು 99 ರೂ. ಪಾವತಿಸಿದರೂ ಉತ್ತಮ ಸ್ಟ್ರೀಮಿಂಗ್ ವ್ಯವಸ್ಥೆ ಮಾಡದ ಆರ್ಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Youtube pe stream krna chahiye tha 😢
Agar inko 99 rs hi chahiye the to hum superchat kr dete— DheEMaD (@DheEMaD_18) March 17, 2025
ಇನ್ನು ಕೆಲವರು ಲೈವ್ ಸ್ಟ್ರೀಮಿಂಗ್ ವೇಳೆ ಬಫರಿಂಗ್ ಸಮಸ್ಯೆ ಎದುರಿಸಿದ್ದಾಗಿ ತಿಳಿಸಿದ್ದು, ಹೀಗಾಗಿ ರಿಚಾರ್ಜ್ ಮೊತ್ತವನ್ನು ಹಿಂತಿರುಗಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
RCB Scammed ( 100 rupees ) . Return it everyone has bad experience after buying this shit . For watching your shit unboxing event.
— Berlin Jod 🦁👑 (@Berlin__Jod) March 17, 2025
ಒಟ್ಟಿನಲ್ಲಿ ಆರ್ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಯಶಸ್ವಿಯಾದರೂ, ಇತ್ತ ಕಳಪೆ ಗುಣಮಟ್ಟದ ಲೈವ್ ಸ್ಟ್ರೀಮಿಂಗ್ ಪ್ರಸ್ತುತಪಡಿಸಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ರಾಯಲ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.