ನೋಡ್ತಾ ಇರಿ… ನಾವೇ ನಂಬರ್ 1: ನಿಜವಾದ ಪಂಜಾಬ್ ಕಿಂಗ್ಸ್ ಆಟಗಾರನ ಭವಿಷ್ಯ
IPL 2025 PBKS vs MI: ಮುಂಬೈ ಇಂಡಿಯನ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಪಂಜಾಬ್ ಕಿಂಗ್ಸ್ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 184 ರನ್ ಕಲೆಹಾಕಿದರೆ, ಈ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡವು 18.3 ಓವರ್ಗಳಲ್ಲಿ ಚೇಸ್ ಮಾಡಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಆಟಗಾರ ಶಶಾಂಕ್ ಸಿಂಗ್ ನುಡಿದ ಭವಿಷ್ಯ ನಿಜವಾಗಿದೆ. ಈ ಬಾರಿಯ ಐಪಿಎಲ್ನ ಲೀಗ್ ಹಂತದ ಪಂದ್ಯಗಳ ಬಳಿಕ ನಾವು ನಂಬರ್ ಒನ್ ಆಗ್ತೀವಿ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ 14 ಪಂದ್ಯಗಳ ಬಳಿಕ ಪಂಜಾಬ್ ಪಡೆ ಮೊದಲ ಸ್ಥಾನ ಅಲಂಕರಿಸಿದೆ.
ಈ ಬಾರಿಯ ಐಪಿಎಲ್ಗೂ ಮುನ್ನ ಶಶಾಂಕ್ ಸಿಂಗ್ ಪಾಡ್ಕಾಸ್ಟ್ವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಈ ಸೀಸನ್ನಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳಾವುವು ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಶಶಾಂಕ್ ಸಿಂಗ್, ಟಾಪ್-1 ಪಂಜಾಬ್ ಕಿಂಗ್ಸ್. ಇದೇ ವೇಳೆ ಸಂದರ್ಶಕನು, ನೀವು ಅಗ್ರ ನಾಲ್ಕರಲ್ಲಿ ಕಾಣಿಸುತ್ತೀರಾ ಎಂದು ಮರು ಪ್ರಶ್ನಿಸಿದ್ದಾರೆ.
ಈ ವೇಳೆ ಪಂಜಾಬ್ ಕಿಂಗ್ಸ್ ತಂಡವು ಟಾಪ್-2 ನಲ್ಲಿ ಮೊದಲ ಸ್ಥಾನ ಅಲಂಕರಿಸಲಿದೆ. 14 ಪಂದ್ಯಗಳ ಬಳಿಕ ನಾನು ನಿಮಗೆ ಮೆಸೇಜ್ ಮಾಡ್ತೀನಿ. ಈ ಸಂದರ್ಶನವನ್ನು ನೀವು ಮತ್ತೆ ಹಾಕಬೇಕು ಎಂದು ಶಶಾಂಕ್ ಸಿಂಗ್ ಆತ್ಮ ವಿಶ್ವಾಸದಿಂದಲೇ ನುಡಿದಿದ್ದರು.
ಅದರಂತೆ ಇದೀಗ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿ ಲೀಗ್ ಹಂತವನ್ನು ಮುಗಿಸಿದೆ. ಇತ್ತ ಪಂಜಾಬ್ ಪಡೆ ಟಾಪ್-1 ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಶಶಾಂಕ್ ಸಿಂಗ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶಶಾಂಕ್ ಸಿಂಗ್ ಸಂಧರ್ಶನದ ವಿಡಿಯೋ:
𝐁𝐞𝐥𝐢𝐞𝐯𝐞𝐝 𝐢𝐭! 𝐋𝐢𝐯𝐞𝐝 𝐢𝐭! 😤@shashank2191 pic.twitter.com/2dE7K0s5nk
— Punjab Kings (@PunjabKingsIPL) May 26, 2025
ಮೊದಲ ಕ್ವಾಲಿಫೈಯರ್ಗೆ ಪಂಜಾಬ್ ಪಡೆ:
ಜೈಪುರ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 69ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಣಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 39 ಎಸೆತಗಳಲ್ಲಿ 57 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು.
