IPL 2025: ಬದಲಾದ ನಿಯಮ: ಒಂದೇ ಗ್ರೂಪ್​ನ 4 ತಂಡಗಳು ಪ್ಲೇಆಫ್ ಪ್ರವೇಶಿಸಿದರೂ ಅಚ್ಚರಿಯಿಲ್ಲ..!

IPL 2025 Schedule: ಐಪಿಎಲ್ 2025 ರಲ್ಲಿ 10 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು 2 ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದೆ. ಹೀಗೆ ವಿಂಗಡಿಸಲಾದ ಗ್ರೂಪ್​ಗಳ ಮೂಲಕವೇ ಈ ಬಾರಿ ವೇಳಾಪಟ್ಟಿ ರೂಪಿಸಲಾಗಿದೆ. ಇದರಿಂದ ಒಂದು ತಂಡವು 4 ಟೀಮ್​ಗಳ ವಿರುದ್ಧ ಏಕೈಕ ಪಂದ್ಯಗಳನ್ನು ಮಾತ್ರ ಆಡಲಿದೆ. ಈ ಮೂಲಕ ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.

IPL 2025: ಬದಲಾದ ನಿಯಮ: ಒಂದೇ ಗ್ರೂಪ್​ನ 4 ತಂಡಗಳು ಪ್ಲೇಆಫ್ ಪ್ರವೇಶಿಸಿದರೂ ಅಚ್ಚರಿಯಿಲ್ಲ..!
Ipl 2025

Updated on: Feb 17, 2025 | 7:56 AM

ಇಂಡಿಯನ್ ಪ್ರೀಮಿಯರ್ ಲೀಗ್​​​ನ ವೇಳಾಪಟ್ಟಿ ಪ್ರಕಟಗೊಂಡಿದೆ. ಈ ವೇಳಾಪಟ್ಟಿ ರೂಪಿಸಲು 10 ತಂಡಗಳನ್ನು 2 ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ. ಅದರಂತೆ ಈ ಬಾರಿ ಪ್ರತಿ ತಂಡಗಳು ತನ್ನದೇ ಗ್ರೂಪ್​ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಹಾಗೆಯೇ ಮತ್ತೊಂದು ಗ್ರೂಪ್​ನಲ್ಲಿರುವ 4 ತಂಡಗಳ ವಿರುದ್ದ ತಲಾ ಒಂದು ಪಂದ್ಯ ಹಾಗೂ ಒಂದು ತಂಡದ ವಿರುದ್ದ 2 ಪಂದ್ಯಗಳನ್ನಾಡಲಾಗುತ್ತದೆ. ಈ ಮೂಲಕ ಲೀಗ್​ ಹಂತದಲ್ಲಿ ಒಟ್ಟು 14 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಇದಾಗ್ಯೂ ಈ ಬಾರಿ ಕೂಡ ಈ ಹಿಂದಿನಂತೆ ಪಾಯಿಂಟ್ ಟೇಬಲ್ ಇರಲಿದೆ. ಅಂದರೆ 10 ತಂಡಗಳ ನೇರ ಅಂಕ ಪಟ್ಟಿ ಇರಲಿದ್ದು, ಇದರಲ್ಲಿ ಅಗ್ರಸ್ಥಾನ ಪಡೆಯುವ ನಾಲ್ಕು ತಂಡಗಳು ಪ್ಲೇಆಫ್​ ಪ್ರವೇಶಿಸಲಿದೆ.

2011 ರಲ್ಲೂ ಇದೇ ಮಾದರಿಯಲ್ಲಿ ಐಪಿಎಲ್ ನಡೆಸಲಾಗಿತ್ತು. ವಿಶೇಷ ಎಂದರೆ ಇಲ್ಲಿ ಪಾಯಿಂಟ್​ ಲೆಕ್ಕಚಾರಗಳ ಮೂಲಕ ಅಗ್ರ ನಾಲ್ಕು ತಂಡಗಳನ್ನು ನಿರ್ಧರಿಸುವುದರಿಂದ ಪ್ಲೇಆಫ್​ಗೆ ಒಂದೇ ಗ್ರೂಪ್​ನ ತಂಡಗಳೇ ಬಂದರೂ ಅಚ್ಚರಿಪಡಬೇಕಿಲ್ಲ.

2011ರ ಐಪಿಎಲ್ ತಂಡಗಳ ಗ್ರೂಪ್:

  • ಗ್ರೂಪ್-​ A
  • ಡೆಕ್ಕನ್ ಚಾರ್ಜರ್ಸ್
  • ಡೆಲ್ಲಿ ಡೇರ್ ಡೆವಿಲ್ಸ್
  • ಕಿಂಗ್ಸ್ ಇಲೆವೆನ್ ಪಂಜಾಬ್
  • ಮುಂಬೈ ಇಂಡಿಯನ್ಸ್
  • ಪುಣೆ ವಾರಿಯರ್ಸ್ ಇಂಡಿಯಾ

_____________________________

  • ಗ್ರೂಪ್​- B
  • ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಚೆನ್ನೈ ಸೂಪರ್ ಕಿಂಗ್ಸ್
  • ಕೊಚ್ಚಿ ಟಸ್ಕರ್ಸ್ ಕೇರಳ
  • ಕೋಲ್ಕತ್ತಾ ನೈಟ್ ರೈಡರ್ಸ್
  • ರಾಜಸ್ಥಾನ್ ರಾಯಲ್ಸ್

ಇಲ್ಲಿ 10 ತಂಡಗಳನ್ನು 2 ಗುಂಪುಗಳಾಗಿ ಕಣಕ್ಕಿಳಿಸಲಾಗಿತ್ತು. ಈ ವೇಳೆ ಟಾಪ್ 10 ಪಾಯಿಂಟ್​ ಟೇಬಲ್​ನಲ್ಲಿ ಆರ್​ಸಿಬಿ ತಂಡವು 14 ಪಂದ್ಯಗಳಲ್ಲಿ 9 ಜಯ ಸಾಧಿಸಿ ಅಗ್ರಸ್ಥಾನ ಪಡೆದುಕೊಂಡಿತ್ತು. ಹಾಗೆಯೇ ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ತೃತೀಯ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡಗಳಿದ್ದವು. ಇನ್ನು ನಾಲ್ಕನೇ ಸ್ಥಾನವನ್ನು ಕೊಲ್ಕತ್ತಾ ನೈಟ್​ ರೈಡರ್ಸ್ ತಂಡ ಅಲಂಕರಿಸಿತು. ಈ ಮೂಲಕ ಆರ್​ಸಿಬಿ, ಸಿಎಸ್​ಕೆ, ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ಪ್ಲೇ ಆಫ್​ ಪ್ರವೇಶಿಸಿತ್ತು.

ವಿಶೇಷ ಎಂದರೆ ಪ್ಲೇ ಆಫ್ ಆಡಿದ ನಾಲ್ಕು ತಂಡಗಳ ಪೈಕಿ ಮೂರು ತಂಡಗಳು ಗ್ರೂಪ್-ಬಿ ನಿಂದ ಆಯ್ಕೆಯಾಗಿದ್ದವು. ಅಂದರೆ ಆರ್​ಸಿಬಿ, ಸಿಎಸ್​ಕೆ, ಕೆಕೆಆರ್​ ಒಂದೇ ಗ್ರೂಪ್​ನಲ್ಲಿದ್ದರೂ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿತ್ತು. ಇನ್ನು ಗ್ರೂಪ್-ಎ ನಿಂದ ಪ್ಲೇಆಫ್​ ಪ್ರವೇಶಿಸಿದ ಏಕೈಕ ತಂಡವೆಂದರೆ ಮುಂಬೈ ಇಂಡಿಯನ್ಸ್ ಮಾತ್ರ.

ಇಲ್ಲಿ ಟೂರ್ನಿ ರೌಂಡ್ ರಾಬಿನ್ ಫಾರ್ಮಾಟ್​ನಲ್ಲಿ ಟೂರ್ನಿ ಆಯೋಜಿಸುತ್ತಿರುವುದರಿಂದ ಪ್ರತಿ ತಂಡಗಳು 5 ತಂಡಗಳ ವಿರುದ್ದ 2 ಪಂದ್ಯಗಳನ್ನು ಆಡಲಿದೆ. ಹಾಗೆಯೇ 4 ತಂಡಗಳ ವಿರುದ್ದ ಒಂದೊಂದು ಪಂದ್ಯಗಳನ್ನು ಆಡಲಾಗುತ್ತದೆ. ಅಂದರೆ 9 ತಂಡಗಳ ವಿರುದ್ದ ಒಂದೊಂದು ಪಂದ್ಯ ಹಾಗೂ ಅದರಲ್ಲಿ 5 ತಂಡಗಳ ವಿರುದ್ದ 2ನೇ ಬಾರಿ ಸೆಣಸಲಿದೆ. ಇದರಿಂದ ಪಾಯಿಂಟ್​ ಟೇಬಲ್​ನಲ್ಲಿ ಆಗಾಗ್ಗೆ ಬದಲಾವಣೆ ಕಂಡು ಬರಲಿದೆ.

ಹೀಗಾಗಿ ಲೀಗ್ ಹಂತದ ಮುಕ್ತಾಯದ ವೇಳೆಗೆ ಒಂದೇ ಗ್ರೂಪ್​ನ ನಾಲ್ಕು ತಂಡಗಳಿಗೂ ಪ್ಲೇಆಫ್​ ಪ್ರವೇಶಿಸುವ ಅವಕಾಶ ದೊರೆಯಲಿದೆ. ಇದಕ್ಕೆ ಉತ್ತಮ ಉದಾಹರಣೆ 2011 ರಲ್ಲಿ ಗ್ರೂಪ್-ಬಿನಲ್ಲಿದ್ದ ಆರ್​ಸಿಬಿ, ಸಿಎಸ್​ಕೆ, ಕೆಕೆಆರ್​ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿರುವುದು. ಹೀಗಾಗಿ ಈ ಬಾರಿ ಕೂಡ ಬಲಿಷ್ಠ ತಂಡಗಳ ಲೆಕ್ಕಚಾರಗಳು ತಲೆಕೆಳಗಾದರೆ ಅಚ್ಚರಿಪಡಬೇಕಿಲ್ಲ.

IPL 2025ರ ಗ್ರೂಪ್​ಗಳು:

  • ಗ್ರೂಪ್-1 ತಂಡಗಳು
  • ಕೊಲ್ಕತ್ತಾ ನೈಟ್ ರೈಡರ್ಸ್
  • ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ರಾಜಸ್ಥಾನ್ ರಾಯಲ್ಸ್
  • ಚೆನ್ನೈ ಸೂಪರ್ ಕಿಂಗ್ಸ್
  • ಪಂಜಾಬ್ ಕಿಂಗ್ಸ್

ಇದನ್ನೂ ಓದಿ: IPL 2025: ಐಪಿಎಲ್ 2025ರ ವೇಳಾಪಟ್ಟಿ ಪ್ರಕಟ

  • ಗ್ರೂಪ್- 2 ತಂಡಗಳು
  • ಸನ್​ರೈಸರ್ಸ್ ಹೈದರಾಬಾದ್
  • ಲಕ್ನೋ ಸೂಪರ್ ಜೈಂಟ್ಸ್​
  • ಮುಂಬೈ ಇಂಡಿಯನ್ಸ್
  • ಡೆಲ್ಲಿ ಕ್ಯಾಪಿಟಲ್ಸ್
  • ಗುಜರಾತ್ ಟೈಟಾನ್ಸ್