AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮುಂಬೈ ಇಂಡಿಯನ್ಸ್ ತಂಡದಿಂದ ಅಫ್ಘಾನ್ ಸ್ಪಿನ್ನರ್ ಔಟ್ – ಅಫ್ಘಾನ್ ಸ್ಪಿನ್ನರ್ ಎಂಟ್ರಿ

IPL 2025: ಅಫ್ಘಾನಿಸ್ತಾನ್ ಪರ 49 ಟಿ20 ಪಂದ್ಯಗಳನ್ನಾಡಿರುವ ಮುಜೀಬ್ ಉರ್ ರೆಹಮಾನ್ ಒಟ್ಟು 1080 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 1141 ರನ್​ ಬಿಟ್ಟು ಕೊಟ್ಟಿರುವ ಅವರು 63 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದೀಗ ಅನುಭವಿ ಸ್ಪಿನ್ನರ್ ಅನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂಬರುವ ಐಪಿಎಲ್​ಗೆ ಆಯ್ಕೆ ಮಾಡಿಕೊಂಡಿದೆ.

ಝಾಹಿರ್ ಯೂಸುಫ್
|

Updated on: Feb 17, 2025 | 9:53 AM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿವೆ. ಆದರೆ ಅದಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದಿಂದ ಅಫ್ಘಾನಿಸ್ತಾನ್ ಸ್ಪಿನ್ನರ್ ಅಲ್ಲಾ ಗಝನ್‌ಫರ್ ಹೊರಗುಳಿದಿದ್ದಾರೆ. ಗಾಯಗೊಂಡು ಹೊರನಡೆದಿರುವ ಅಲ್ಲಾ ಗಝನ್​ಫರ್ ಬದಲಿಗೆ ಇದೀಗ ಮುಂಬೈ ಇಂಡಿಯನ್ಸ್ ಮತ್ತೊರ್ವ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

1 / 5
ಅಲ್ಲಾ ಗಝನ್‌ಫರ್ ಅವರನ್ನು ಈ ಬಾರಿಯ ಐಪಿಎಲ್ ಮೆಗಾ​ ಹರಾಜಿನ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬರೋಬ್ಬರಿ 4.80 ಕೋಟಿ ರೂ. ನೀಡಿ ಖರೀದಿಸಿತ್ತು. ಸ್ಪಿನ್ ಸ್ನೇಹಿ ಪಿಚ್​​ಗಳಲ್ಲಿ ರಣತಂತ್ರ ರೂಪಿಸಲೆಂದೇ ಖರೀದಿಸಲಾಗಿದ್ದ ಆಟಗಾರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಮುಂಬರುವ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

2 / 5
ಇತ್ತ ಅಲ್ಲಾ ಗಝನ್‌ಫರ್ ಹೊರಗುಳಿಯುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅನುಭವಿ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. 23 ವರ್ಷದ ಮುಜೀಬ್ ಈ ಹಿಂದೆ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ಕಣಕ್ಕಿಳಿದಿದ್ದರು.

3 / 5
ಐಪಿಎಲ್​ನಲ್ಲಿ ಒಟ್ಟು 19 ಪಂದ್ಯಗಳನ್ನಾಡಿರುವ ಮುಜೀಬ್ ಉರ್ ರೆಹಮಾನ್ ಒಟ್ಟು 19 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಅಫ್ಘಾನ್ ಸ್ಪಿನ್ನರ್ ಬಿಕರಿಯಾಗದೇ ಉಳಿದಿದ್ದಾರೆ. ಇದೀಗ ಅಲ್ಲಾ ಗಝನ್‌ಫರ್ ಹೊರಗುಳಿಯುತ್ತಿರುವುದರಿಂದ ಮುಜೀಬ್ ಉರ್ ರೆಹಮಾನ್ ಅವರಿಗೆ ಅದೃಷ್ಟ ಖುಲಾಯಿಸಿದೆ. ಅದರಂತೆ ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

4 / 5
ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್​ಪ್ರೀತ್ ಬುಮ್ರಾ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿಂಝ್, ಕರ್ಣ್ ಶರ್ಮಾ, ದೀಪಕ್ ಚಹರ್, ರೀಸ್ ಟೋಪ್ಲಿ, ರಿಯಾನ್ ರಿಕೆಲ್ಟನ್, ವಿಲ್ ಜ್ಯಾಕ್ಸ್, ಮಿಚೆಲ್ ಸ್ಯಾಂಟ್ನರ್, ಕರ್ಣ್ ಶರ್ಮಾ, ರಾಜ್ವ ಶರ್ಮಾ, ಸತ್ಯನಾರಾಯಣ ರಾಜು, ರಾಜ್​ ಬಾವ, ಕೃಷ್ಣನ್ ಶ್ರೀಜಿತ್, ಅಶ್ವಾಣಿ ಕುಮಾರ್, ಬೆವನ್ ಜೇಕಬ್ಸ್, ಅರ್ಜುನ್ ತೆಂಡೂಲ್ಕರ್, ಲಿಝಾಡ್ ವಿಲಿಯಮ್ಸ್, ಮುಜೀಬ್ ಉರ್ ರೆಹಮಾನ್.

5 / 5
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ: ಕಣ್ಣೀರಿಡುತ್ತಲೇ ಹೊರಹೋದ ಶಾಸಕಿ ರೂಪಕಲಾ!

ಉಪ್ಪಿನ ಬಳಕೆಗೆ ಬ್ರೇಕ್ ಹಾಕಲು ಹೆಲ್ತ್ ಡಿಪಾರ್ಟ್‌ಮೆಂಟ್ ಪ್ಲಾನ್

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಯಶವಂತರಾಯಗೌಡ ಖಡಕ್ ಮಾತು

‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ

ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ

ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ

ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ

ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ

ವಾಯುಭಾರ ಕುಸಿತದ ಎಫೆಕ್ಟ್​​: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ

ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!