IPL 2025: ಮುಂಬೈ ಇಂಡಿಯನ್ಸ್ ತಂಡದಿಂದ ಅಫ್ಘಾನ್ ಸ್ಪಿನ್ನರ್ ಔಟ್ – ಅಫ್ಘಾನ್ ಸ್ಪಿನ್ನರ್ ಎಂಟ್ರಿ
IPL 2025: ಅಫ್ಘಾನಿಸ್ತಾನ್ ಪರ 49 ಟಿ20 ಪಂದ್ಯಗಳನ್ನಾಡಿರುವ ಮುಜೀಬ್ ಉರ್ ರೆಹಮಾನ್ ಒಟ್ಟು 1080 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 1141 ರನ್ ಬಿಟ್ಟು ಕೊಟ್ಟಿರುವ ಅವರು 63 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೀಗ ಅನುಭವಿ ಸ್ಪಿನ್ನರ್ ಅನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂಬರುವ ಐಪಿಎಲ್ಗೆ ಆಯ್ಕೆ ಮಾಡಿಕೊಂಡಿದೆ.
Updated on: Feb 17, 2025 | 9:53 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿವೆ. ಆದರೆ ಅದಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದಿಂದ ಅಫ್ಘಾನಿಸ್ತಾನ್ ಸ್ಪಿನ್ನರ್ ಅಲ್ಲಾ ಗಝನ್‌ಫರ್ ಹೊರಗುಳಿದಿದ್ದಾರೆ. ಗಾಯಗೊಂಡು ಹೊರನಡೆದಿರುವ ಅಲ್ಲಾ ಗಝನ್‌ಫರ್ ಬದಲಿಗೆ ಇದೀಗ ಮುಂಬೈ ಇಂಡಿಯನ್ಸ್ ಮತ್ತೊರ್ವ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಅಲ್ಲಾ ಗಝನ್‌ಫರ್ ಅವರನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬರೋಬ್ಬರಿ 4.80 ಕೋಟಿ ರೂ. ನೀಡಿ ಖರೀದಿಸಿತ್ತು. ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ರಣತಂತ್ರ ರೂಪಿಸಲೆಂದೇ ಖರೀದಿಸಲಾಗಿದ್ದ ಆಟಗಾರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಮುಂಬರುವ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಇತ್ತ ಅಲ್ಲಾ ಗಝನ್‌ಫರ್ ಹೊರಗುಳಿಯುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅನುಭವಿ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. 23 ವರ್ಷದ ಮುಜೀಬ್ ಈ ಹಿಂದೆ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ಕಣಕ್ಕಿಳಿದಿದ್ದರು.

ಐಪಿಎಲ್ನಲ್ಲಿ ಒಟ್ಟು 19 ಪಂದ್ಯಗಳನ್ನಾಡಿರುವ ಮುಜೀಬ್ ಉರ್ ರೆಹಮಾನ್ ಒಟ್ಟು 19 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಅಫ್ಘಾನ್ ಸ್ಪಿನ್ನರ್ ಬಿಕರಿಯಾಗದೇ ಉಳಿದಿದ್ದಾರೆ. ಇದೀಗ ಅಲ್ಲಾ ಗಝನ್‌ಫರ್ ಹೊರಗುಳಿಯುತ್ತಿರುವುದರಿಂದ ಮುಜೀಬ್ ಉರ್ ರೆಹಮಾನ್ ಅವರಿಗೆ ಅದೃಷ್ಟ ಖುಲಾಯಿಸಿದೆ. ಅದರಂತೆ ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿಂಝ್, ಕರ್ಣ್ ಶರ್ಮಾ, ದೀಪಕ್ ಚಹರ್, ರೀಸ್ ಟೋಪ್ಲಿ, ರಿಯಾನ್ ರಿಕೆಲ್ಟನ್, ವಿಲ್ ಜ್ಯಾಕ್ಸ್, ಮಿಚೆಲ್ ಸ್ಯಾಂಟ್ನರ್, ಕರ್ಣ್ ಶರ್ಮಾ, ರಾಜ್ವ ಶರ್ಮಾ, ಸತ್ಯನಾರಾಯಣ ರಾಜು, ರಾಜ್ ಬಾವ, ಕೃಷ್ಣನ್ ಶ್ರೀಜಿತ್, ಅಶ್ವಾಣಿ ಕುಮಾರ್, ಬೆವನ್ ಜೇಕಬ್ಸ್, ಅರ್ಜುನ್ ತೆಂಡೂಲ್ಕರ್, ಲಿಝಾಡ್ ವಿಲಿಯಮ್ಸ್, ಮುಜೀಬ್ ಉರ್ ರೆಹಮಾನ್.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



