
ಐಪಿಎಲ್ 2026 (IPL 2026) ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು, ಸನ್ರೈಸರ್ಸ್ ಹೈದರಾಬಾದ್ (RR vs SRH) ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿತು. ರಾಜಸ್ಥಾನ್ ತಂಡದ ಈ ಗೆಲುವಿನಲ್ಲಿ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಪಾತ್ರ ಅಪಾರವಾಗಿತ್ತು. ಸನ್ರೈಸರ್ಸ್ ವಿರುದ್ಧದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್ಗಳು ಮತ್ತು 5 ಬೌಂಡರಿಗಳನ್ನು ಒಳಗೊಂಡಂತೆ 97 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ವೈಭವ್ ಅವರ ಇನ್ನಿಂಗ್ಸ್ನಿಂದಾಗಿ ರಾಜಸ್ಥಾನ್ ರಾಯಲ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 47 ರನ್ಗಳಿಂದ ಸೋಲಿಸಿ ಕ್ವಾಲಿಫೈಯರ್ 2 ಕ್ಕೆ ಅರ್ಹತೆ ಪಡೆಯಿತು.
ವೈಭವ್ ಅವರ ಈ ಅಮೋಘ ಪ್ರದರ್ಶನಕ್ಕೆ ಇಡೀ ಕ್ರಿಕೆಟ್ ಜಗತ್ತೇ ಸಲಾಂ ಹೊಡೆದಿದೆ. ವೈಭವ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸುವುದರ ಜೊತೆಗೆ ಹಲವು ದಾಖಲೆಗಳನ್ನು ಮುರಿದರು. ಇದರಲ್ಲಿ ಕ್ರಿಸ್ ಗೇಲ್ ಅವರ ಅತಿ ಹೆಚ್ಚು ಸಿಕ್ಸರ್ಗಳ ದಾಖಲೆಯೂ ಸೇರಿದೆ. ಹಾಗೆಯೇ ಕೇವಲ 3 ರನ್ಗಳಿಂದ ಶತಕ ವಂಚಿತರಾದ ವೈಭವ್, ಐಪಿಎಲ್ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆಯಿಂದಲೂ ವಂಚಿತರಾದರು. ಈ ದಾಖಲೆ ಕೂಡ ಕ್ರಿಸ್ ಗೇಲ್ ಅವರ ಹೆಸರಿನಲ್ಲೇ ಇದೆ.
ಗೇಲ್ ಅವರ ಎರಡು ಪ್ರಮುಖ ದಾಖಲೆಗಳಲ್ಲಿ ಒಂದು ದಾಖಲೆಯನ್ನು ಮುರಿದು, ಮತ್ತೊಂದು ದಾಖಲೆಯನ್ನು ಮುರಿಯುವಲ್ಲಿ ವಿಫಲರಾದ ಕ್ರಿಸ್ ಗೇಲ್ ಅವರ ಆಟದ ಬಗ್ಗೆ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಭವ್ ಸೂರ್ಯವಂಶಿ ಅವರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಗೇಲ್, ವೈಭವ್ ಎಂತಹ ಅಸಾಧಾರಣ ಮತ್ತು ಅದ್ಭುತ ಆಟಗಾರ. ಯುವ ಆಟಗಾರ, ಹೊಸ ಸಿಕ್ಸರ್ ಮೆಷಿನ್!. ಆದಾಗ್ಯೂ ವೇಗದ ಶತಕದ ದಾಖಲೆಯನ್ನು ಮುರಿಯದಿರುವುದು ಬೇಸರದ ಸಂಗತಿ’ ಎಂದು ಬರೆದುಕೊಂಡಿದ್ದಾರೆ.
SRH vs RR: ಅತಿ ಹೆಚ್ಚು ಸಿಕ್ಸರ್; ಕ್ರಿಸ್ ಗೇಲ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ
ಐಪಿಎಲ್ನ 19 ನೇ ಸೀಸನ್ನಲ್ಲಿ ಇಲ್ಲಿಯವರೆಗೆ ವೈಭವ್ 15 ಇನ್ನಿಂಗ್ಸ್ಗಳಲ್ಲಿ 680 ರನ್ ಗಳಿಸಿದ್ದಾರೆ. ಅವರ ಸರಾಸರಿ 45.33 ಮತ್ತು ಸ್ಟ್ರೈಕ್ ರೇಟ್ 242.85 ಆಗಿದೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ. ಅವರ ಅತ್ಯಧಿಕ ಸ್ಕೋರ್ 103 ರನ್ಗಳಾಗಿದ್ದು, ಇದರಲ್ಲಿ ಅವರು ಕೇವಲ 280 ಎಸೆತಗಳಲ್ಲಿ 55 ಬೌಂಡರಿ ಮತ್ತು 65 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ