
IPL 2026: ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹಣಾಹಣಿಯಲ್ಲಿ, ಡೆಲ್ಲಿ ತಂಡದ ವೇಗಿ ಕೈಲ್ ಜೇಮಿಸನ್ ತೋರಿದ ಅತಿಯಾದ ಆಕ್ರಮಣಕಾರಿ ವರ್ತನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೇವಲ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಔಟ್ ಮಾಡಿದ ನಂತರ ಜೇಮಿಸನ್ ತೋರಿದ ಈ ಅತೀರೇಕದ ವರ್ತನೆಗೆ ಇದೀಗ ಐಪಿಎಲ್ ಆಡಳಿತ ಮಂಡಳಿಯು ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.
ಪಂದ್ಯದ ಎರಡನೇ ಓವರ್‌ನಲ್ಲಿ ಜೇಮಿಸನ್ ಎಸೆದ ಅತ್ಯುತ್ತಮ ಯಾರ್ಕರ್ ಎಸೆತಕ್ಕೆ ಸೂರ್ಯವಂಶಿ ಕ್ಲೀನ್ ಬೌಲ್ಡ್ ಆಗಿದ್ದರು. ವಿಕೆಟ್ ಪಡೆದ ಸಂಭ್ರಮದಲ್ಲಿ ಜೇಮಿಸನ್ ಸೂರ್ಯವಂಶಿ ಅವರ ಹತ್ತಿರ ಹೋಗಿ ಆಕ್ರಮಣಕಾರಿಯಾಗಿ ಚಪ್ಪಾಳೆ ತಟ್ಟುತ್ತಾ, ಏನೋ ಹೇಳುತ್ತಾ ಪೆವಿಲಿಯನ್ ಕಡೆಗೆ ಹೋಗುವಂತೆ ಸನ್ನೆ ಮಾಡಿದರು. ಒಬ್ಬ ಅನುಭವಿ ಆಟಗಾರ 15 ವರ್ಷದ ಬಾಲಕನ ವಿರುದ್ಧ ತೋರಿದ ಈ ವರ್ತನೆ ಅಸಮಾಧಾನಕ್ಕೆ ಕಾರಣವಾಯಿತು.
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5ರ ಅಡಿಯಲ್ಲಿ ಕೈಲ್ ಜೇಮಿಸನ್ ತಪ್ಪಿತಸ್ಥರೆಂದು ಕಂಡುಬಂದಿದೆ. ಹೀಗಾಗಿ ಅವರಿಗೆ ಈ ಕೆಳಗಿನಂತಿನ ಶಿಕ್ಷಾರ್ಹ ಅಂಕಗಳನ್ನು ನಿಡಿದೆ.
ಕ್ರಿಕೆಟ್‌ನಲ್ಲಿ ಡೆಮೆರಿಟ್ ಪಾಯಿಂಟ್ (Demerit Points) ಎನ್ನುವುದು ಆಟಗಾರರು ಮೈದಾನದಲ್ಲಿ ಕೆಟ್ಟದಾಗಿ ವರ್ತಿಸಿದಾಗ ನೀಡುವ ಒಂದು ರೀತಿಯ ‘ಶಿಕ್ಷಾರ್ಹ ಅಂಕ’ಗಳು. ಇದು ಹೇಗೆ ಕೆಲಸ ಮಾಡುತ್ತದೆ ಎಂಬ ವಿವರ ಈ ಕೆಳಗಿನಂತಿದೆ…
ಅಂಕಗಳನ್ನು ಯಾವಾಗ ನೀಡಲಾಗುತ್ತದೆ?
ಒಬ್ಬ ಆಟಗಾರ ಐಸಿಸಿ (ICC) ಅಥವಾ ಐಪಿಎಲ್‌ನ ನೀತಿ ಸಂಹಿತೆಯನ್ನು (Code of Conduct) ಮೀರಿದಾಗ ಶಿಕ್ಷೆ ನೀಡಲಾಗುತ್ತದೆ. ಉದಾಹರಣೆಗೆ:
ಅಂಕಗಳ ಹಂಚಿಕೆ ಹೇಗೆ?
ಇಲ್ಲಿ ಆಟಗಾರನ ವರ್ತನೆಗೆ ಅಥವಾ ತಪ್ಪಿನ ತೀವ್ರತೆಗೆ ಅನುಗುಣವಾಗಿ ಅಂಕಗಳನ್ನು ನೀಡಲಾಗುತ್ತದೆ. ಇದನ್ನು ಮ್ಯಾಚ್ ರೆಫರಿ ನಿರ್ಧರಿಸುತ್ತಾರೆ. ಅದರಂತೆ ಈ ಕೆಳಗಿನ ಲೆವೆಲ್ ಹಂತದ ಅನ್ವಯ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ.
ನಿಷೇಧ ಯಾವಾಗ?
ಯಾವಾಗ ಈ ಡಿಮೆರಿಟ್ ಪಾಯಿಂಟ್‌ಗಳು ಹೆಚ್ಚಾಗುತ್ತವೆಯೋ, ಆಗ ಆಟಗಾರನನ್ನು ಪಂದ್ಯಗಳಿಂದ ನಿಷೇಧಿಸಲಾಗುತ್ತದೆ. ಉದಾಹರಣೆಗೆ…
ಇದನ್ನೂ ಓದಿ: ರಣರೋಚಕ ಪಂದ್ಯದಲ್ಲಿ 2 ರನ್ಗಳ ಜಯ ಸಾಧಿಸಿ ಫೈನಲ್ಗೇರಿದ ಹೈದರಾಬಾದ್
ಡಿಮೆರಿಟ್ ಪಾಯಿಂಟ್ಸ್ ಆಟಗಾರನ ಹೆಸರಿನಲ್ಲಿ ಶಾಶ್ವತವಾಗಿ ಇರುವುದಿಲ್ಲ. ಒಂದು ಪಾಯಿಂಟ್ ಪಡೆದ ನಂತರ 24 ತಿಂಗಳವರೆಗೆ (2 ವರ್ಷ) ಅದು ಆತನ ದಾಖಲೆಯಲ್ಲಿ ಇರುತ್ತದೆ. ಆ ಅವಧಿ ಮುಗಿದ ನಂತರ ಆ ಪಾಯಿಂಟ್ ರದ್ದಾಗುತ್ತದೆ.
ಸರಳವಾಗಿ ಹೇಳಬೇಕೆಂದರೆ, ಕೈಲ್ ಜೇಮಿಸನ್‌ಗೆ ಈಗ 1 ಡಿಮೆರಿಟ್ ಪಾಯಿಂಟ್ ಸಿಕ್ಕಿದೆ. ಮುಂದಿನ 24 ತಿಂಗಳೊಳಗೆ ಅವರು ಮತ್ತೆ ಇಂತಹ ತಪ್ಪು ಮಾಡಿ ಒಟ್ಟು 4 ಪಾಯಿಂಟ್ ಪಡೆದರೆ, ಅವರು ಒಂದು ಅಥವಾ ಎರಡು ಪಂದ್ಯಗಳಿಂದ ನಿಷೇಧಕ್ಕೊಳಗಾಗುತ್ತಾರೆ. ಹೀಗಾಗಿ ಡಿಮೆರಿಟರ್ ಪಾಯಿಂಟ್ಸ್ ಪಡೆದ ಆಟಗಾರರು 2 ವರ್ಷಗಳ ಅವಧಿಯಲ್ಲಿ ಇಂತಹ ಯಾವುದೇ ತಪ್ಪುಗಳನ್ನು ಮಾಡಲು ಮುಂದಾಗುವುದಿಲ್ಲ.