
ಐಪಿಎಲ್ 2026 (IPL 2026) ರ 68 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (LSG vs PBKS) ತಂಡವನ್ನು ಎದುರಿಸುತ್ತಿದೆ. ಲೀಗ್ ಸುತ್ತಿನಲ್ಲಿ ಎರಡೂ ತಂಡಗಳ ಕೊನೆಯ ಪಂದ್ಯವಾಗಿದೆ. ಈ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಯಾಣ ಲೀಗ್ ಹಂತದಲ್ಲೇ ಅಂತ್ಯಗೊಂಡಿದೆ. ಇತ್ತ ಪ್ಲೇಆಫ್ಗೇರಬೇಕೆಂದರೆ ಪಂಜಾಬ್ ಕಿಂಗ್ಸ್ ಈ ಪಂದ್ಯವನ್ನು ಗೆಲ್ಲಲೇಬೇಕು. ಪಂಜಾಬ್ ಕಿಂಗ್ಸ್ ಈ ಪಂದ್ಯವನ್ನು ಸೋತರೆ, ಅದು ಕೂಡ ಲೀಗ್ನಿಂದ ಹೊರಬೀಳಲಿದೆ. ಇನ್ನು ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.
ಟಾಸ್ ಗೆದ್ದ ಬಳಿಕ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಪಂಜಾಬ್ ತನ್ನ ಪ್ಲೇಯಿಂಗ್ 11 ರಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ. ಅದರಂತೆ ಮಾರ್ಕೊ ಯಾನ್ಸನ್ ಮತ್ತು ವೈಶಾಕ್ ವಿಜಯ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಲಕ್ನೋ ಕೂಡ ತನ್ನ ಪ್ಲೇಯಿಂಗ್ 11 ರಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದು ಅರ್ಜುನ್ ತೆಂಡೂಲ್ಕರ್ ಮತ್ತು ಅರ್ಶಿನ್ ಕುಲಕರ್ಣಿಗೆ ತಂಡದಲ್ಲಿ ಅವಕಾಶ ನೀಡಿದೆ. ಮುಂಬೈ ತಂಡವನ್ನು ತೊರೆದು ಲಕ್ನೋ ಸೇರಿಕೊಂಡಿದ್ದ ಅರ್ಜುನ್ಗೆ ಕೊನೆಗೂ ಆಡುವ ಅವಕಾಶ ಸಿಕ್ಕಿದೆ.
LSG vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಾಂಶ್ ಶೆಡ್ಜ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಉಮರ್ಜಾಯ್, ಮಾರ್ಕೊ ಯಾನ್ಸೆನ್, ವಿಜಯ್ಕುಮಾರ್ ವೈಶಾಖ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
ಇಂಪ್ಯಾಕ್ಟ್ ಪ್ಲೇಯರ್ಸ್: ಹರ್ಪ್ರೀತ್ ಬ್ರಾರ್, ಮಾರ್ಕಸ್ ಸ್ಟೊಯಿನಿಸ್, ಕ್ಸೇವಿಯರ್ ಬಾರ್ಟ್ಲೆಟ್, ವಿಷ್ಣು ವಿನೋದ್, ಪ್ರವೀಣ್ ದುಬೆ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಜೋಶ್ ಇಂಗ್ಲಿಸ್, ಅರ್ಶಿನ್ ಕುಲಕರ್ಣಿ, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಮುಕುಲ್ ಚೌಧರಿ, ಅರ್ಜುನ್ ತೆಂಡೂಲ್ಕರ್, ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್, ಮೊಹ್ಸಿನ್ ಖಾನ್.
ಇಂಪ್ಯಾಕ್ಟ್ ಪ್ಲೇಯರ್ಸ್: ಶಹಬಾಜ್ ಅಹ್ಮದ್, ದಿಗ್ವೇಶ್ ಸಿಂಗ್ ರಾಠಿ, ಮಣಿಮಾರನ್ ಸಿದ್ಧಾರ್ಥ್, ಹಿಮ್ಮತ್ ಸಿಂಗ್, ಆಕಾಶ್ ಮಹಾರಾಜ್ ಸಿಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 pm, Sat, 23 May 26