IPL 2026: ಇದಕ್ಕಿದ್ದಂತೆ ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ ಬಿಸಿಸಿಐ

IPL 2026 Schedule Change: ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಎರಡು ಪ್ರಮುಖ ಪಂದ್ಯಗಳ ವೇಳಾಪಟ್ಟಿಯಲ್ಲಿ ಬಿಸಿಸಿಐ ಗಮನಾರ್ಹ ಬದಲಾವಣೆ ಮಾಡಿದೆ. ಗುಜರಾತ್‌ನಲ್ಲಿ ನಡೆಯಲಿರುವ ಚುನಾವಣೆಗಳ ಕಾರಣ, ಏಪ್ರಿಲ್ 26 ಮತ್ತು ಮೇ 21ರ ಪಂದ್ಯಗಳ ಸ್ಥಳಗಳನ್ನು ಅದಲುಬದಲು ಮಾಡಲಾಗಿದೆ. ದಿನಾಂಕ ಮತ್ತು ಸಮಯ ಒಂದೇ ಆಗಿದ್ದರೂ, ಭದ್ರತಾ ದೃಷ್ಟಿಯಿಂದ ಅಹಮದಾಬಾದ್ ಮತ್ತು ಚೆನ್ನೈ ನಡುವೆ ಕ್ರೀಡಾಂಗಣಗಳನ್ನು ಬದಲಾಯಿಸಲಾಗಿದೆ.

IPL 2026: ಇದಕ್ಕಿದ್ದಂತೆ ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ ಬಿಸಿಸಿಐ
Csk Vs Gt

Updated on: Apr 13, 2026 | 9:37 PM

ಐಪಿಎಲ್ 2026 (IPL 2026) ರಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಪೂರ್ಣ ವೇಳಾಪಟ್ಟಿಯನ್ನು ಕೂಡ ಈಗಾಗಲೇ ಘೋಷಿಸಲಾಗಿದೆ. ಆದಾಗ್ಯೂ, ಲೀಗ್ ಆರಂಭವಾದ ಎರಡು ವಾರಗಳ ಬಳಿಕ ಬಿಸಿಸಿಐ (BCCI) ಇದ್ದಕ್ಕಿದ್ದಂತೆ ವೇಳಾಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಿದೆ. ಅದರಂತೆ ಎರಡು ಪ್ರಮುಖ ಪಂದ್ಯಗಳ ಸ್ಥಳಗಳನ್ನು ಬದಲಾಯಿಸಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ನಡುವಿನ ಎರಡು ಪಂದ್ಯಗಳಿಗೆ ಸಂಬಂಧಿಸಿದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

2 ಪಂದ್ಯಗಳ ಸ್ಥಳ ಬದಲು

ಈ ಬಗ್ಗೆ ಏಪ್ರಿಲ್ 13 ರಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಈ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಎರಡು ಪಂದ್ಯಗಳು ನಡೆಯಲಿವೆ. ಆರಂಭಿಕ ವೇಳಾಪಟ್ಟಿಯ ಪ್ರಕಾರ, ಎರಡೂ ತಂಡಗಳ ನಡುವಿನ ಮೊದಲ ಪಂದ್ಯವನ್ನು ಏಪ್ರಿಲ್ 26 ರಂದು ಮಧ್ಯಾಹ್ನ 3:30 ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿಗದಿಪಡಿಸಲಾಗಿತ್ತು. ಆದಾಗ್ಯೂ, ಈ ಪಂದ್ಯವನ್ನು ಈಗ ಅಹಮದಾಬಾದ್ ಬದಲಿಗೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅದೇ ಸಮಯ ಮತ್ತು ದಿನಾಂಕದಂದು ನಡೆಸಲಾಗುವುದು.

ಅದೇ ರೀತಿ, ಎರಡೂ ತಂಡಗಳ ನಡುವಿನ ಎರಡನೇ ಪಂದ್ಯವು ಮೇ 21 ರಂದು ಚೆನ್ನೈನಲ್ಲಿ ನಡೆಯಬೇಕಿತ್ತು. ಈ ಪಂದ್ಯವು ಮೂಲತಃ ಸಂಜೆ 7:30 ಕ್ಕೆ ಆರಂಭವಾಗಬೇಕಿತ್ತು, ಆದರೆ ಈಗ ಚಿದಂಬರಂ ಕ್ರೀಡಾಂಗಣದ ಬದಲಿಗೆ ಅದೇ ದಿನಾಂಕದಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಇದರರ್ಥ ಪಂದ್ಯಗಳ ದಿನಾಂಕಗಳು ಮತ್ತು ಸಮಯಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲವಾದರೂ ಸ್ಥಳಗಳನ್ನು ಮಾತ್ರ ಬದಲಾಯಿಸಲಾಗಿದೆ.

SRH vs RR IPL 2026 Live Score: ರಾಜಸ್ಥಾನಕ್ಕೆ 217 ರನ್ ಟಾರ್ಗೆಟ್

ಸ್ಥಳ ಬದಲಾವಣೆಗೆ ಕಾರಣವೇನು?

ಬಿಸಿಸಿಐ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಚುನಾವಣೆ. ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಏಪ್ರಿಲ್ 26 ರಂದು ಅಹಮದಾಬಾದ್ ಸೇರಿದಂತೆ ಗುಜರಾತ್‌ನ ಹಲವಾರು ಭಾಗಗಳಲ್ಲಿ ಪುರಸಭೆ ಚುನಾವಣೆಗಳು ನಡೆಯಲಿವೆ. ಪರಿಣಾಮವಾಗಿ, ಏಪ್ರಿಲ್ 26 ರಂದು ಅಹಮದಾಬಾದ್‌ನಲ್ಲಿ ಪಂದ್ಯವನ್ನು ನಡೆಸುವುದು ಭದ್ರತಾ ದೃಷ್ಟಿಕೋನದಿಂದ ಸವಾಲಿನದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಮಂಡಳಿಯು ಈ ಬದಲಾವಣೆಯನ್ನು ಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 pm, Mon, 13 April 26

Follow Us