
ಐಪಿಎಲ್ 2026 (IPL 2026) ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ (MI vs RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ಇನ್ನಿಂಗ್ಸ್ ವೇಳೆ ಕ್ರೀಸ್ನಲ್ಲಿದ್ದ ಟಿಮ್ ಡೇವಿಡ್ (Tim David), ಐಪಿಎಲ್ ನಿಯಮವನ್ನು ಉಲ್ಲಂಘಿಸಿದ ಕೃತ್ಯ ಎಸಗಿದರು. ಇದೀಗ ಅದಕ್ಕೆ ಪ್ರತಿಫಲವಾಗಿ ಟಿಮ್ ಡೇವಿಡ್ಗೆ ಪಂದ್ಯ ಶುಲ್ಕ ಶೇಕಡಾ 25% ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಟಿಮ್ ಡೇವಿಡ್ ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.4 ಅನ್ನು ಉಲ್ಲಂಘಿಸಿದ್ದಾರೆ. ಈ ಸೆಕ್ಷನ್ ಪ್ರಕಾರ, ಪಂದ್ಯದ ಸಮಯದಲ್ಲಿ ಅಂಪೈರ್‌ಗಳ ಸೂಚನೆಗಳನ್ನು ಪಾಲಿಸದ ಆಟಗಾರನಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಹಾಗೆಯೇ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗುತ್ತದೆ. ಆ ಪ್ರಕಾರ ಡೇವಿಡ್ಗೆ ಈ ಎರಡೂ ಶಿಕ್ಷೆಯನ್ನು ವಿಧಿಸಲಾಗಿದೆ.
ಮೇಲೆ ಹೇಳಿದಂತೆ ಆರ್‌ಸಿಬಿಯ ಇನ್ನಿಂಗ್ಸ್ನ 18 ನೇ ಓವರ್ ಅನ್ನು ಹಾರ್ದಿಕ್ ಪಾಂಡ್ಯ ಬೌಲ್ ಮಾಡಿದರು. ಈ ಓವರ್ನ ಮೊದಲ ಎಸೆತವನ್ನು ಟಿಮ್ ಡೇವಿಡ್ ಬೌಂಡರಿ ಗಟ್ಟಿದರು. ಹಾರ್ದಿಕ್ ಮುಂದಿನ ಎಸೆತವನ್ನು ನೋಬಾಲ್ ಮಾಡಿದರು. ಹೀಗಾಗಿ ಫ್ರಿ ಹಿಟ್ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಟಿಮ್ ಡೇವಿಡ್ ಭರ್ಜರಿ ಸಿಕ್ಸರ್ ಹೊಡೆದರು. ನಂತರದ ಎಸೆತಕ್ಕೂ ಮುನ್ನ ಅಂಪೈರ್‌ಗಳು ಚೆಂಡನ್ನು ಪರಿಶೀಲಿಸಿದಾಗ ಚೆಂಡು ಒದ್ದೆಯಾಗಿತ್ತು ಮತ್ತು ಅದರ ಆಕಾರವೂ ಸ್ವಲ್ಪ ಬದಲಾಗಿತ್ತು. ಆದ್ದರಿಂದ ಅಂಪೈರ್‌ಗಳು ಚೆಂಡನ್ನು ಬದಲಾಯಿಸಲು ನಿರ್ಧರಿಸಿದರು.
ಬಾಲ್ ಕೊಡು ಡೇವಿಡ್ ಅಣ್ಣ!😂
ವೀಕ್ಷಿಸಿ | #IPLRivalryWeek2026 👉 #MIvRCB | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ. #TATAIPL pic.twitter.com/y8t7AbdkK2
— Star Sports Kannada (@StarSportsKan) April 12, 2026
ಹೀಗಾಗಿ ಚೆಂಡುಗಳ ಪೆಟ್ಟಿಗೆ ಮೈದಾನಕ್ಕೆ ಬಂದಾಗ, ಟಿಮ್ ಡೇವಿಡ್ ಅದರಲ್ಲಿ ಒಂದು ಚೆಂಡನ್ನು ಎತ್ತಿಕೊಂಡು ಅದರೊಂದಿಗೆ ಆಟವಾಡಲು ಪ್ರಾರಂಭಿಸಿದರು. ಅಂಪೈರ್ ಪದೇ ಪದೇ ಚೆಂಡನ್ನು ಕೇಳುತ್ತಲೇ ಇದ್ದರೂ ಡೇವಿಡ್ ಮಾತ್ರ ಅದನ್ನು ಹಿಂತಿರುಗಿಸುವ ಬದಲು, ಆಟ ಮುಂದುವರೆಸಿದರು. ಡೇವಿಡ್‌ನ ಈ ಕ್ರಿಯೆಯಿಂದ ಅಂಪೈರ್ ಸ್ವಲ್ಪ ಸಿಟ್ಟಾದಂತೆ ತೋರುತ್ತಿತ್ತು.
ಟಿಮ್ ಡೇವಿಡ್ ಪದೇ ಪದೇ ಚೆಂಡನ್ನು ಪರಿಶೀಲಿಸುತ್ತಿದ್ದರು. ನಂತರ 20 ಓವರ್‌ನಲ್ಲಿ ಜಿತೇಶ್ ಅವರ ವಿಕೆಟ್ ಬಿದ್ದ ನಂತರ ಮತ್ತೆ ಚೆಂಡನ್ನು ತೆಗೆದುಕೊಂಡ ಡೇವಿಡ್, ಅಂಪೈರ್ ಪದೇ ಪದೇ ಚೆಂಡನ್ನು ಹಿಂದಿರುಗಿಸುವಂತೆ ಕೇಳಿದರು ಚೆಂಡನ್ನು ಹಿಂದಿರುಗಿಸಲಿಲ್ಲ. ಅಂಪೈರ್ ಸೂಚನೆಗಳನ್ನು ಅಥವಾ ನಿರ್ದೇಶನಗಳನ್ನು ಅನುಸರಿಸಲು ಡೇವಿಡ್ ನಿರಾಕರಿಸಿದರು. ಇದೀಗ ಅದಕ್ಕೆ ಶಿಕ್ಷೆಯಾಗಿ ಡೇವಿಡ್ಗೆ ದಂಡ ವಿಧಿಸಲಾಗಿದೆ. ಡೇವಿಡ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದು, ಪಂದ್ಯದ ಅಧಿಕಾರಿಗಳು ನೀಡಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ