ಗೋವಾದಲ್ಲಿ ಈ ದಿನದಂದು ನಡೆಯಲಿದೆ ಐಪಿಎಲ್ 2027 ರ ಮಿನಿ ಹರಾಜು

2027ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿದೆ. ಬಿಸಿಸಿಐ ಫ್ರಾಂಚೈಸಿಗಳಿಗೆ ಈಗಾಗಲೇ ವಾಟ್ಸಾಪ್ ಮೂಲಕ ಮಾಹಿತಿ ನೀಡಿದೆ. ಮೂರು ವರ್ಷಗಳ ನಂತರ ಭಾರತದಲ್ಲಿ ನಡೆಯುತ್ತಿರುವ ಈ ಹರಾಜು ಐಪಿಎಲ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಡಿಸೆಂಬರ್ 15ರಂದು ಪೂರ್ವಭಾವಿ ಸಭೆ ನಿಗದಿಪಡಿಸಲಾಗಿದೆ. ಹರಾಜು ದಿನಾಂಕದಲ್ಲಿ ಸಣ್ಣ ಬದಲಾವಣೆಯ ಸಾಧ್ಯತೆಗಳಿವೆ.

ಗೋವಾದಲ್ಲಿ ಈ ದಿನದಂದು ನಡೆಯಲಿದೆ ಐಪಿಎಲ್ 2027 ರ ಮಿನಿ ಹರಾಜು
ಐಪಿಎಲ್ ಮಿನಿ ಹರಾಜು
Image Credit source: Sports Tiger x

Updated on: Oct 17, 2026 | 8:21 PM

2027 ರ ಐಪಿಎಲ್​ಗೆ ಬಿಸಿಸಿಐ ಈಗಾಗಲೇ ತಯಾರಿ ಶುರು ಮಾಡಿದೆ. ಅದರಂತೆ ಐಪಿಎಲ್ ಆರಂಭಕ್ಕೂ ಮುನ್ನ ನಡೆಯಬೇಕಿರುವ ಮಿನಿ ಹರಾಜಿನ ಬಗ್ಗೆ ಬಿಸಿಸಿಐ ಈಗಾಗಲೇ ಮಾಹಿತಿ ನೀಡಿತ್ತು. ಆ ಪ್ರಕಾರ ಮೂರು ವರ್ಷಗಳ ನಂತರ ಐಪಿಎಲ್ ಮಿನಿ ಹರಾಜನ್ನು ಭಾರತದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಇದೀಗ ಕ್ರಿಕ್​ಬಜ್ ವರದಿಯ ಪ್ರಕಾರ, ಗೋವಾದ ಐಟಿಸಿ ಗ್ರ್ಯಾಂಡ್ 5-ಸ್ಟಾರ್ ಹೋಟೆಲ್​ನಲ್ಲಿ ಡಿಸೆಂಬರ್ 16 ರಂದು ಐಪಿಎಲ್ ಮಿನಿ ಹರಾಜು ನಡೆಯಲಿದೆ ಎಂದು ವರದಿಯಾಗಿದೆ. ಅಲ್ಲದೆ ಈ ಮಿನಿ ಹರಾಜಿನ ಬಗ್ಗೆ ಬಿಸಿಸಿಐ, ಎಲ್ಲಾ 10 ಫ್ರಾಂಚೈಸಿಗಳಿಗೆ ವಾಟ್ಸಾಪ್ ಸಂದೇಶದ ಮೂಲಕ ಹರಾಜು ದಿನಾಂಕ ಮತ್ತು ಸ್ಥಳಗಳ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ವರದಿಯಾಗಿದೆ.

16 ರಂದು ಮಿನಿ ಹರಾಜು

ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬರದಿದ್ದರೂ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯುವುದು ಖಚಿತ ಎನ್ನಲಾಗುತ್ತಿದೆ. ಅಲ್ಲದೆ ಹರಾಜು ದಿನಾಂಕದ ಜೊತೆಗೆ, ಡಿಸೆಂಬರ್ 15 ರಂದು ಹರಾಜಿಗೆ ಸಂಬಂಧಿಸಿದ ಸಭೆಯನ್ನು ಸಹ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಮುಂಬರುವ ಹರಾಜಿಗೆ ಫ್ರಾಂಚೈಸ್ ಮಾಲೀಕರು ಮತ್ತು ಸಿಇಒಗಳು ಸಿದ್ಧರಾಗಲು ಸಹಾಯ ಮಾಡುವುದು ಈ ಸಭೆಯ ಉದ್ದೇಶವಾಗಿದೆ.

ಬಿಸಿಸಿಐ ಮಾಹಿತಿ ನೀಡಲಿದೆ

ಗೋವಾದಲ್ಲಿ ಮಿನಿ ಹರಾಜು ನಡೆಯುವುದಂತೂ ಖಚಿತ. ಆದರೆ ಹರಾಜು ನಡೆಯುವ ದಿನಾಂಕದಲ್ಲಿ ಬದಲಾವಣೆಯಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವರದಿಯ ಪ್ರಕಾರ, ಈ ಕುರಿತು ಅಧಿಕೃತ ಮಾಹಿತಿಯನ್ನು ಮುಂಬರುವ ದಿನಗಳಲ್ಲಿ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಮತ್ತು ಸಿಇಒಗಳಿಗೆ ಬಿಸಿಸಿಐ ಮಾಹಿತಿ ನೀಡಲಿದೆ.

ಗೋವಾದಲ್ಲಿ ನಡೆಯಲಿದೆ 2027 ರ ಐಪಿಎಲ್ ಮಿನಿ ಹರಾಜು; ಅಧಿಕೃತ ಘೋಷಣೆ

3 ವರ್ಷಗಳ ನಂತರ ಭಾರತದಲ್ಲಿ ಹರಾಜು

ಇನ್ನು ಮೇಲೆ ಹೇಳಿದಂತೆ 3 ವರ್ಷಗಳ ನಂತರ ಭಾರತದಲ್ಲಿ ಐಪಿಎಲ್ ಹರಾಜು ನಡೆಯುತ್ತಿದೆ. ಇದಕ್ಕೂ ಮೊದಲು, ಭಾರತದಲ್ಲಿ ಹರಾಜು 2023 ರ ಆವೃತ್ತಿಗೂ ಮೊದಲು ನಡೆದಿತ್ತು. ಅಂದಿನಿಂದ, ಹರಾಜುಗಳನ್ನು ವಿದೇಶಗಳಲ್ಲಿ ನಡೆಸಲಾಗುತ್ತಿದೆ. 2024 ರ ಹರಾಜನ್ನು ದುಬೈನಲ್ಲಿ, 2025 ರ ಮುಖ್ಯ ಹರಾಜನ್ನು ಜೆಡ್ಡಾದಲ್ಲಿ ಮತ್ತು 2026 ರ ಮಿನಿ ಹರಾಜನ್ನು ಅಬುಧಾಬಿಯಲ್ಲಿ ನಡೆಸಲಾಗಿತ್ತು. ಇದೀಗ 2027 ರ ಐಪಿಎಲ್​ನ ಮಿನಿ ಹರಾಜನ್ನು ಗೋವಾದಲ್ಲಿ ನಡೆಸಲಾಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:18 pm, Sat, 17 October 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us