
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಹರಾಜಿಗಾಗಿ ಬೇಕಾದ ತಯಾರಿಗಳು ಆರಂಭವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಆಟಗಾರರ ರಿಟೈನ್ ಪ್ರಕ್ರಿಯೆ ನಡೆಯುತ್ತಿದೆ. ಇದಾದ ಬಳಿಕ ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಮೆಗಾ ಹರಾಜು ನಡೆಯಲಿದೆ. ಆದರೆ ಈ ಬಾರಿ ನಡೆಯಲಿರುವ ಮೆಗಾ ಹರಾಜು ಐಪಿಎಲ್ನ ಕೊನೆಯ ಮೆಗಾ ಹರಾಜು ಆಗಿರಲಿದೆ ಎಂದು ವರದಿಯಾಗಿದೆ. ಬಹುತೇಕ ಫ್ರಾಂಚೈಸಿಗಳು ಮೆಗಾ ಹರಾಜಿನ ಬಗ್ಗೆ ಸಂತುಷ್ಟರಾಗಿಲ್ಲ. ಹೀಗಾಗಿ ಇನ್ಮುಂದೆ ಮೆಗಾ ಹರಾಜು ಇರುವುದಿಲ್ಲ ಎಂದು ಹೇಳಲಾಗಿದೆ. ಐಪಿಎಲ್ನಲ್ಲಿ ಪ್ರತಿ ಮೂರು ಸೀಸನ್ಗೊಮ್ಮೆ ಮೆಗಾ ಹರಾಜು ನಡೆಸಲಾಗುತ್ತಿದ್ದು, ಇದರಿಂದ ತಂಡದಲ್ಲಿ ಮಹತ್ವ ಬದಲಾವಣೆಯಾಗುತ್ತದೆ. ಆದರೆ ಫ್ರಾಂಚೈಸಿಗಳು ಇಂತಹ ಬದಲಾವಣೆ ಬಗ್ಗೆ ಆಸಕ್ತಿ ಹೊಂದಿಲ್ಲ. ಹೀಗಾಗಿ ಮೆಗಾ ಹರಾಜಿನ ಕಾನ್ಸೆಪ್ಟ್ ಅನ್ನು ಬಿಸಿಸಿಐ ಕೈ ಬಿಡುವ ಸಾಧ್ಯತೆಯಿದೆ.
ಬದಲಾಗಿ ಪ್ರತಿ ವರ್ಷ ನಡೆಯುವಂತೆ ಮಿನಿ ಹರಾಜು ಮೂಲಕವೇ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಫ್ರಾಂಚೈಸಿಗಳು ಬಯಸಿದ್ದಾರೆ. ಅದರಂತೆ ಪ್ರತಿ ವರ್ಷ ಬೇಡದ ಆಟಗಾರರನ್ನು ಕೈಬಿಟ್ಟು ಅವರ ಸ್ಥಾನದಲ್ಲಿ ಹೊಸ ಆಟಗಾರರನ್ನು ಹರಾಜಿನ ಮೂಲಕ ತಂಡಕ್ಕೆ ಸೇರಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯದಲ್ಲಿದೆ ಫ್ರಾಂಚೈಸಿಗಳು. ಇದರಿಂದ ತಂಡದಲ್ಲೂ ಮಹತ್ವದ ಬದಲಾವಣೆ ಆಗುವುದಿಲ್ಲ. ಮೆಗಾ ಹರಾಜು ನಡೆಸುವುದರಿಂದ ಬಹುತೇಕ ತಂಡಗಳಲ್ಲಿ ಬದಲಾವಣೆ ಕಂಡು ಬರುತ್ತದೆ. ಇದರಿಂದ ತಂಡದ ಒಟ್ಟಾರೆ ಬ್ರಾಂಡ್ ಕುಸಿತಕ್ಕೊಳಗಾಗುತ್ತದೆ. ಅಷ್ಟೇ ಅಲ್ಲದೆ ಬಹುತೇಕ ತಂಡಗಳ ಮಾಲೀಕರು ಉದ್ಯಮಿಗಳಾಗಿರುವುದರಿಂದ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರುವಾಗ ಹೂಡಿಕೆದಾರರು ಕೂಡ ಹಿಂದೇಟು ಹಾಕುತ್ತಾರೆ ಎಂದು ಹೇಳಲಾಗಿದೆ.
ಹೀಗಾಗಿ ಮೆಗಾ ಹರಾಜಿನ ಕಾನ್ಸೆಪ್ಟ್ ಬಿಟ್ಟು, ಪ್ರತಿ ಸೀಸನ್ಗೂ ಮುನ್ನ ಬೇಡವಾದ ಆಟಗಾರರನ್ನು ರಿಲೀಸ್ ಮಾಡಿ ಅವರ ಸ್ಥಾನದಲ್ಲಿ ಹೊಸ ಆಟಗಾರರನ್ನು ಖರೀದಿಸುವ ಮಿನಿ ಹರಾಜು ಐಪಿಎಲ್ ಫ್ರಾಂಚೈಸಿಗಳು ಆಸಕ್ತಿ ಹೊಂದಿದೆ. ಹೀಗಾಗಿ ಮುಂದಿನ ಬಾರಿ ಮೆಗಾ ಹರಾಜು ನಡೆಯುವುದು ಅನುಮಾನ ಎನ್ನಲಾಗಿದೆ.
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ ಈ 10 ಸ್ಟಾರ್ ಆಟಗಾರರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ..!
ಇದನ್ನೂ ಓದಿ: IPL 2022 Retained Players: ಐಪಿಎಲ್ ರಿಟೈನ್ ಪಟ್ಟಿಯಲ್ಲಿರುವ 18 ಆಟಗಾರರ ಹೆಸರು ಬಹಿರಂಗ..!
ಇದನ್ನೂ ಓದಿ: IPL 2022: ಐಪಿಎಲ್ನ 5 ತಂಡಗಳಿಗೆ ಹೊಸ ನಾಯಕ..?
(IPL Auction 2022: Will this be the last mega auction?)