- Kannada News Photo gallery Cricket photos IPL 2022: RCB have added Mohammed Siraj to their retention list
IPL 2022: ಉಳಿಸಿಕೊಂಡ 3ನೇ ಆಟಗಾರನನ್ನು ಖಚಿತಪಡಿಸಿದ RCB
RCB IPL 2022 Retained Players: ಆರ್ಸಿಬಿ ಆಯ್ಕೆ ಮಾಡಿಕೊಂಡಿರುವ ಎರಡನೇ ಆಟಗಾರ ವಿದೇಶಿ ಪ್ಲೇಯರ್ ಎಂಬುದು ವಿಶೇಷ. ಈ ಬಾರಿಯ ರಿಟೈನ್ ನಿಯಮದಂತೆ ಒಂದು ಫ್ರಾಂಚೈಸಿ ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ ಮೂವರು ಭಾರತೀಯ ಆಟಗಾರರು ಹಾಗೂ ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು.
Updated on: Nov 30, 2021 | 6:26 PM

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ಉಳಿಸಿಕೊಂಡ ಆಟಗಾರರ ಪಟ್ಟಿ ಸಲ್ಲಿಸಲು ಇಂದು ಕೊನೆಯ ದಿನ. ಐಪಿಎಲ್ ರಿಟೈನ್ ನಿಯಮದ ಪ್ರಕಾರ ಗರಿಷ್ಠ 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿರುವುದು ಖಚಿತವಾಗಿದೆ. ಅದರಂತೆ ಆರ್ಸಿಬಿ ಪರ ಮುಂದಿನ ಸೀಸನ್ನಲ್ಲೂ ವಿರಾಟ್ ಕೊಹ್ಲಿ ಆಡಲಿದ್ದಾರೆ.

ಆರ್ಸಿಬಿ ತಂಡದ ಸ್ಟಾರ್ ಪ್ಲೇಯರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿ ಬಯಸಿದ್ದಾರೆ. ಹೀಗಾಗಿ ಮೊದಲ ಆಯ್ಕೆಯಾಗಿ ಆರ್ಸಿಬಿ ಕೊಹ್ಲಿಯನ್ನು ಆರಿಸಿಕೊಂಡಿದೆ. ಅಂದರೆ ಮೊದಲ ಆಯ್ಕೆಯಾಗಿ ರಿಟೈನ್ ಮಾಡಿಕೊಂಡ ಆಟಗಾರನಿಗೆ ಫ್ರಾಂಚೈಸಿ 16 ಕೋಟಿ ರೂ. ನೀಡಬೇಕಾಗುತ್ತದೆ. ಅದರಂತೆ ಮುಂದಿನ ಸೀಸನ್ಗಾಗಿ ಕೊಹ್ಲಿ 16 ಕೋಟಿ ರೂ. ಪಡೆಯುವುದು ಖಚಿತ.

ಗ್ಲೆನ್ ಮ್ಯಾಕ್ಸ್ವೆಲ್

ಇನ್ನು ಸದ್ಯ ಮಾಹಿತಿ ಪ್ರಕಾರ ಆರ್ಸಿಬಿ ರಿಟೈನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೂರನೇ ಆಟಗಾರನೆಂದರೆ ವೇಗಿ ಮೊಹಮ್ಮದ್ ಸಿರಾಜ್. ಆರ್ಸಿಬಿ ತಂಡವು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಜೊತೆಗೆ ವೇಗಿ ಸಿರಾಜ್ ಅವರನ್ನೂ ಕೂಡ ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದ್ದು, ಅದರಂತೆ ಈ ಮೂವರು ಆರ್ಸಿಬಿ ತಂಡದಲ್ಲಿರುವುದು ಖಚಿತವಾಗಿದೆ.