- Kannada News Photo gallery Cricket photos IPL 2022 retention Sunrisers Hyderbad set to release rashid khan will retain Umran Malik Abdul Samad punjab kings stick with Arshdeep
IPL 2022 Retention: ರಶೀದ್, ಆರ್ಚರ್, ಸ್ಟೋಕ್ಸ್ಗೆ ಗೇಟ್ಪಾಸ್! ಮಯಾಂಕ್, ಮಲಿಕ್, ಸಮದ್ಗೆ ಜಾಕ್ಪಾಟ್
IPL 2022 Retention: ಸನ್‌ರೈಸರ್ಸ್ ಹೈದರಾಬಾದ್ ರಶೀದ್ ಖಾನ್ ಅವರನ್ನು ಉಳಿಸಿಕೊಳ್ಳದಿರಲು ನಿರ್ಧರಿಸಿದೆ. ರಶೀದ್ ಖಾನ್ ತಮ್ಮನ್ನು ಪ್ರಾಂಚೈಸಿ ನಂಬರ್ ಒನ್ ಸ್ಥಾನದಲ್ಲಿ ಉಳಿಸಿಕೊಳ್ಳಬೇಕೆಂದು ಬಯಸಿದ್ದರು ಆದರೆ ಸನ್ ರೈಸರ್ಸ್ ಅವರ ಸ್ಥಾನದಲ್ಲಿ ಕೇನ್ ವಿಲಿಯಮ್ಸನ್ ಅವರನ್ನು ನಂಬರ್ ಒನ್ ಸ್ಥಾನಕ್ಕೆ ಆಯ್ಕೆ ಮಾಡುತ್ತಿದೆ.
Updated on: Nov 30, 2021 | 7:00 PM

ಐಪಿಎಲ್ 2022 ರ ಮೆಗಾ ಹರಾಜಿಗೂ ಮೊದಲು, ಯಾವ ತಂಡವು ಯಾವ ಆಟಗಾರನನ್ನು ತಂಡದಲ್ಲಿ ಉಳಿಸಿಕೊಳ್ಳುತ್ತದೆ ಎಂಬುದು ಮಂಗಳವಾರ ರಾತ್ರಿ ನಿರ್ಧರಿಸಲಾಗುತ್ತದೆ. ಆದರೆ ಉಳಿಸಿಕೊಳ್ಳುವ ಘೋಷಣೆಗೂ ಮುನ್ನವೇ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಪಾಳಯದಿಂದ ಆಘಾತಕಾರಿ ಸುದ್ದಿ ಬರುತ್ತಿದೆ.

ಕ್ರಿಕ್‌ಬಝ್‌ನ ವರದಿಯ ಪ್ರಕಾರ, ರಾಜಸ್ಥಾನ್ ರಾಯಲ್ಸ್ ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ಅವರನ್ನು ಉಳಿಸಿಕೊಳ್ಳದಿರಲು ನಿರ್ಧರಿಸಿದೆ. ಇಬ್ಬರೂ ಆಟಗಾರರು ಗಾಯದ ಕಾರಣದಿಂದಾಗಿ ಐಪಿಎಲ್ 2021 ಅನ್ನು ಆಡಲು ಸಾಧ್ಯವಾಗಲಿಲ್ಲ, ಇದು ಫ್ರಾಂಚೈಸಿಗೆ ನಷ್ಟವನ್ನುಂಟು ಮಾಡಿತ್ತು.

ಸನ್‌ರೈಸರ್ಸ್ ಹೈದರಾಬಾದ್ ರಶೀದ್ ಖಾನ್ ಅವರನ್ನು ಉಳಿಸಿಕೊಳ್ಳದಿರಲು ನಿರ್ಧರಿಸಿದೆ. ರಶೀದ್ ಖಾನ್ ತಮ್ಮನ್ನು ಪ್ರಾಂಚೈಸಿ ನಂಬರ್ ಒನ್ ಸ್ಥಾನದಲ್ಲಿ ಉಳಿಸಿಕೊಳ್ಳಬೇಕೆಂದು ಬಯಸಿದ್ದರು ಆದರೆ ಸನ್ ರೈಸರ್ಸ್ ಅವರ ಸ್ಥಾನದಲ್ಲಿ ಕೇನ್ ವಿಲಿಯಮ್ಸನ್ ಅವರನ್ನು ನಂಬರ್ ಒನ್ ಸ್ಥಾನಕ್ಕೆ ಆಯ್ಕೆ ಮಾಡುತ್ತಿದೆ.

ವರದಿಗಳ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್ ಕೂಡ ವೇಗದ ಬೌಲರ್ ಉಮ್ರಾನ್ ಮಲಿಕ್ ಮತ್ತು ಬ್ಯಾಟ್ಸ್‌ಮನ್ ಅಬ್ದುಲ್ ಸಮದ್ ಅವರನ್ನು ಉಳಿಸಿಕೊಳ್ಳಲಿದೆ.

ಕೆಎಲ್ ರಾಹುಲ್ ಬಿಡುಗಡೆ ಮಾಡಿದ ಪಂಜಾಬ್ ಕಿಂಗ್ಸ್ 2 ಆಟಗಾರರನ್ನು ಉಳಿಸಿಕೊಳ್ಳಲಿದೆ. ಇದರಲ್ಲಿ ಮಯಾಂಕ್ ಅಗರ್ವಾಲ್ ಮತ್ತು ಎಡಗೈ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ಅವರ ಹೆಸರನ್ನು ಸೇರಿಸಲಾಗಿದೆ.




