IPL 2022: ಸ್ಟಾರ್​ ಆಟಗಾರರನ್ನು ಕೈಬಿಟ್ಟು, ಯುವ ಆಟಗಾರರನ್ನು ಉಳಿಸಿಕೊಂಡ SRH

SRH IPL 2022 Retained Players: 2021ರ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀಗಿತ್ತು: ಕೇನ್ ವಿಲಿಯಮ್ಸನ್, ಡೇವಿಡ್ ವಾರ್ನರ್, ಮನೀಶ್ ಪಾಂಡೆ, ವಿರಾಟ್ ಸಿಂಗ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್

TV9 Web
| Updated By: ಝಾಹಿರ್ ಯೂಸುಫ್

Updated on: Nov 30, 2021 | 7:38 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಸನ್​ರೈಸರ್ಸ್​ ಹೈದರಾಬಾದ್ ತಂಡವು ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಆದರೆ ತಂಡದಿಂದ ಡೇವಿಡ್ ವಾರ್ನರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್ ಸೇರಿದಂತೆ ಪ್ರಮುಖ ಆಟಗಾರರು ಹೊರಬಿದ್ದಿದ್ದಾರೆ.

1 / 6
ಅದರಂತೆ ಸನ್​ರೈಸರ್ಸ್​ ಹೈದರಾಬಾದ್ ತಂಡವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟಿಗ ಇರುವುದು ವಿಶೇಷ. ಹೌದು, ನಿರೀಕ್ಷೆಯಂತೆ ಎಸ್​ಆರ್​ಹೆಚ್ ಫ್ರಾಂಚೈಸಿ ನಾಯಕನಾಗಿ ಕೇನ್ ವಿಲಿಯಮ್ಸನ್ ಅವರನ್ನು ಮೊದಲ ಆಯ್ಕೆಯಾಗಿ ಉಳಿಸಿಕೊಂಡಿದೆ.

2 / 6
ಇನ್ನು ಎರಡನೇ ಆಯ್ಕೆಯಾಗಿ ತಂಡದಲ್ಲಿ ಸ್ಥಾನ ಪಡೆದಿರುವುದು ಯುವ ವೇಗಿ ಉಮ್ರಾನ್ ಮಲಿಕ್ ಎಂಬುದು ವಿಶೇಷ. ಕಳೆದ ಸೀಸನ್​ನಲ್ಲಿ ಚೊಚ್ಚಲ ಬಾರಿ ಅವಕಾಶ ಪಡೆದ ಉಮ್ರಾನ್ 150 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಗಮನ ಸೆಳೆದಿದ್ದರು. ಇದೀಗ ಉಮ್ರಾನ್​ರನ್ನು ಎಸ್​ಆರ್​ಹೆಚ್​ ಉಳಿಸಿಕೊಂಡಿರುವುದು ವಿಶೇಷ.

3 / 6
ಹಾಗೆಯೇ ಐಪಿಎಲ್​ನ ಯುವ ಬಿಗ್ ಹಿಟ್ಟರ್ ಎನಿಸಿಕೊಂಡಿರುವ ಅಬ್ದುಲ್ ಸಮದ್ ಅವರನ್ನೂ ಕೂಡ ಸನ್​ರೈಸರ್ಸ್​ ಹೈದರಾಬಾದ್ ತಂಡ ರಿಟೈನ್ ಮಾಡಿಕೊಂಡಿದೆ. ಕಳೆದ ಎರಡು ಸೀಸನ್​ಗಳಲ್ಲಿ ಎಸ್​ಆರ್​ಹೆಚ್​ ಪರ ಆಲ್​ರೌಂಡರ್ ಆಗಿ ಕಾಣಿಸಿಕೊಂಡಿದ್ದ ಯುವ ಬ್ಯಾಟರ್ ಸಮದ್ ಇದೀಗ ತಂಡದಲ್ಲೇ ರಿಟೈನ್ ಆಗಿದ್ದಾರೆ.

4 / 6
ಅಂದಹಾಗೆ ಎಸ್​​ಆರ್​ಹೆಚ್ ತಂಡವು ಉಳಿಸಿಕೊಂಡಿರುವ ಉಮ್ರಾನ್ ಮಲಿಕ್ ಹಾಗೂ ಅಬ್ದುಲ್ ಸಮದ್ ಜಮ್ಮು-ಕಾಶ್ಮೀರದ ಯುವ ಕ್ರಿಕೆಟಿಗರು ಎಂಬುದು ವಿಶೇಷ.

5 / 6
2021ರ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀಗಿತ್ತು: ಕೇನ್ ವಿಲಿಯಮ್ಸನ್, ಡೇವಿಡ್ ವಾರ್ನರ್, ಮನೀಶ್ ಪಾಂಡೆ, ವಿರಾಟ್ ಸಿಂಗ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಟಿ ನಟರಾಜನ್, ಅಭಿಷೇಕ್ ಶರ್ಮಾ, ಶಹಬಾಜ್ ನದೀಮ್, ಮಿಚೆಲ್ ಮಾರ್ಷ್​ , ರಶೀದ್ ಖಾನ್, ಕೇದರ್ ಜಾಧವ್ , ಮುಜೀಬುರ್ ರೆಹಮಾನ್ , ಜೆ ಸುಚಿತ್

6 / 6
Follow us