- Kannada News Photo gallery Cricket photos Sunrisers Hyderabad retained Abdul Samad and Umran Malik with Kane Williamson
IPL 2022: ಸ್ಟಾರ್ ಆಟಗಾರರನ್ನು ಕೈಬಿಟ್ಟು, ಯುವ ಆಟಗಾರರನ್ನು ಉಳಿಸಿಕೊಂಡ SRH
SRH IPL 2022 Retained Players: 2021ರ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀಗಿತ್ತು: ಕೇನ್ ವಿಲಿಯಮ್ಸನ್, ಡೇವಿಡ್ ವಾರ್ನರ್, ಮನೀಶ್ ಪಾಂಡೆ, ವಿರಾಟ್ ಸಿಂಗ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್
Updated on: Nov 30, 2021 | 7:38 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಆದರೆ ತಂಡದಿಂದ ಡೇವಿಡ್ ವಾರ್ನರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್ ಸೇರಿದಂತೆ ಪ್ರಮುಖ ಆಟಗಾರರು ಹೊರಬಿದ್ದಿದ್ದಾರೆ.

ಅದರಂತೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟಿಗ ಇರುವುದು ವಿಶೇಷ. ಹೌದು, ನಿರೀಕ್ಷೆಯಂತೆ ಎಸ್ಆರ್ಹೆಚ್ ಫ್ರಾಂಚೈಸಿ ನಾಯಕನಾಗಿ ಕೇನ್ ವಿಲಿಯಮ್ಸನ್ ಅವರನ್ನು ಮೊದಲ ಆಯ್ಕೆಯಾಗಿ ಉಳಿಸಿಕೊಂಡಿದೆ.

ಇನ್ನು ಎರಡನೇ ಆಯ್ಕೆಯಾಗಿ ತಂಡದಲ್ಲಿ ಸ್ಥಾನ ಪಡೆದಿರುವುದು ಯುವ ವೇಗಿ ಉಮ್ರಾನ್ ಮಲಿಕ್ ಎಂಬುದು ವಿಶೇಷ. ಕಳೆದ ಸೀಸನ್ನಲ್ಲಿ ಚೊಚ್ಚಲ ಬಾರಿ ಅವಕಾಶ ಪಡೆದ ಉಮ್ರಾನ್ 150 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಗಮನ ಸೆಳೆದಿದ್ದರು. ಇದೀಗ ಉಮ್ರಾನ್ರನ್ನು ಎಸ್ಆರ್ಹೆಚ್ ಉಳಿಸಿಕೊಂಡಿರುವುದು ವಿಶೇಷ.

ಹಾಗೆಯೇ ಐಪಿಎಲ್ನ ಯುವ ಬಿಗ್ ಹಿಟ್ಟರ್ ಎನಿಸಿಕೊಂಡಿರುವ ಅಬ್ದುಲ್ ಸಮದ್ ಅವರನ್ನೂ ಕೂಡ ಸನ್‌ರೈಸರ್ಸ್ ಹೈದರಾಬಾದ್ ತಂಡ ರಿಟೈನ್ ಮಾಡಿಕೊಂಡಿದೆ. ಕಳೆದ ಎರಡು ಸೀಸನ್ಗಳಲ್ಲಿ ಎಸ್ಆರ್ಹೆಚ್ ಪರ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಯುವ ಬ್ಯಾಟರ್ ಸಮದ್ ಇದೀಗ ತಂಡದಲ್ಲೇ ರಿಟೈನ್ ಆಗಿದ್ದಾರೆ.

ಅಂದಹಾಗೆ ಎಸ್ಆರ್ಹೆಚ್ ತಂಡವು ಉಳಿಸಿಕೊಂಡಿರುವ ಉಮ್ರಾನ್ ಮಲಿಕ್ ಹಾಗೂ ಅಬ್ದುಲ್ ಸಮದ್ ಜಮ್ಮು-ಕಾಶ್ಮೀರದ ಯುವ ಕ್ರಿಕೆಟಿಗರು ಎಂಬುದು ವಿಶೇಷ.

2021ರ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀಗಿತ್ತು: ಕೇನ್ ವಿಲಿಯಮ್ಸನ್, ಡೇವಿಡ್ ವಾರ್ನರ್, ಮನೀಶ್ ಪಾಂಡೆ, ವಿರಾಟ್ ಸಿಂಗ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಟಿ ನಟರಾಜನ್, ಅಭಿಷೇಕ್ ಶರ್ಮಾ, ಶಹಬಾಜ್ ನದೀಮ್, ಮಿಚೆಲ್ ಮಾರ್ಷ್ , ರಶೀದ್ ಖಾನ್, ಕೇದರ್ ಜಾಧವ್ , ಮುಜೀಬುರ್ ರೆಹಮಾನ್ , ಜೆ ಸುಚಿತ್
