AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mayank Dagar: ಫಿಟ್ನೆಸ್ ಪರೀಕ್ಷೆಯಲ್ಲಿ ಕೊಹ್ಲಿಯನ್ನೇ ಮೀರಿಸಿದ್ದ ಸೆಹ್ವಾಗ್ ಸೋದರಳಿಯನಿಗೆ ಜಾಕ್​ಪಾಟ್!

IPL 2023 Auction: ತನ್ನ ಮೂಲ ಬೆಲೆಯನ್ನು 20 ಲಕ್ಷ ರೂಪಾಯಿಗೆ ನಿಗದಿ ಪಡಿಸುವುದರೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ್ದ ಮಯಾಂಕ್​ರನ್ನು ಖರೀದಿಸಲು ಸನ್‌ರೈಸರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಸಾಕಷ್ಟು ಫೈಪೋಟಿ ನಡೆಯಿತು.

Mayank Dagar: ಫಿಟ್ನೆಸ್ ಪರೀಕ್ಷೆಯಲ್ಲಿ ಕೊಹ್ಲಿಯನ್ನೇ ಮೀರಿಸಿದ್ದ ಸೆಹ್ವಾಗ್ ಸೋದರಳಿಯನಿಗೆ ಜಾಕ್​ಪಾಟ್!
ಮಯಾಂಕ್ ದಾಗರ್
TV9 Web
| Edited By: |

Updated on:Dec 24, 2022 | 3:25 PM

Share

ಐಪಿಎಲ್ (IPL 2023) 16ನೇ ಆವೃತ್ತಿಗೆ ಈಗ ಚಿತ್ರಣ ಸಂಪೂರ್ಣ ಸ್ಪಷ್ಟವಾಗಿದೆ. ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವುದರೊಂದಿಗೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರಚಿಸಿಕೊಂಡಿವೆ. ನಿರೀಕ್ಷೆಯಂತೆ ಈ ಬಾರಿಯ ಹರಾಜಿನಲ್ಲೂ ಆಟಗಾರರ ಮೇಲೆ ಭಾರಿ ಹಣದ ಸುರಿಮಳೆಯಾಗಿದೆ. ಈ ಮಿನಿ ಹರಾಜಿನಲ್ಲಿ ಕೆಲವು ಖ್ಯಾತ ನಾಮರು ಹರಾಜಾಗದೆ ಉಳಿದರೆ, ಇನ್ನು ಕೆಲವು ಆಟಗಾರರು ನಿರೀಕ್ಷೆಗೂ ಮೀರಿದ ಬೆಲೆ ಪಡೆದಿದ್ದಾರೆ. ಅವರಲ್ಲಿ ಒಬ್ಬರು ಭಾರತದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ (Virender Sehwag) ಅವರ ಸೋದರಳಿಯ ಮಯಾಂಕ್ ದಾಗರ್ (Mayank Dagar). ಮಯಾಂಕ್ ಅವರನ್ನು 1.8 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ಖರೀದಿಸಿದೆ.

ತನ್ನ ಮೂಲ ಬೆಲೆಯನ್ನು 20 ಲಕ್ಷ ರೂಪಾಯಿಗೆ ನಿಗದಿ ಪಡಿಸುವುದರೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ್ದ ಮಯಾಂಕ್​ರನ್ನು ಖರೀದಿಸಲು ಸನ್‌ರೈಸರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಸಾಕಷ್ಟು ಫೈಪೋಟಿ ನಡೆಯಿತು. ಆದರೆ ಒಂದು ಹಂತದಲ್ಲಿ ರಾಜಸ್ಥಾನ ಬಿಡ್​ನಿಂದ ಹಿಂದೆ ಸರಿದಿದ್ದರಿಂದ ಮಯಾಂಕ್​ರನ್ನು ಖರೀದಿಸುವಲ್ಲಿ ಸನ್‌ರೈಸರ್ಸ್ ಯಶಸ್ವಿಯಾಯಿತು. ಈ ಹಿಂದೆ ಮಯಾಂಕ್ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದರು.

IPL Auction 2023: ಮಿನಿ ಹರಾಜಿನಲ್ಲಿ ಯಾವ ಆಟಗಾರ, ಎಷ್ಟು ಮೊತ್ತಕ್ಕೆ, ಯಾವ ತಂಡ ಸೇರಿದ? ಇಲ್ಲಿದೆ ವಿವರ

19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಶೈನ್

ಮಯಾಂಕ್ ದಾಗರ್ 2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಆಗ ಇಶಾನ್ ಕಿಶನ್ ನಾಯಕತ್ವದಲ್ಲಿ ತಂಡವು ಆ ವರ್ಷ ವಿಶ್ವಕಪ್‌ನ ಫೈನಲ್‌ಗೆ ಕಾಲಿಟ್ಟಿತು. ಇಂದು ಭಾರತದ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಈ ತಂಡದ ಕೋಚ್ ಆಗಿದ್ದರು. ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮಯಾಂಕ್ 2016 ರಲ್ಲಿ ಹಿಮಾಚಲ ಪ್ರದೇಶ ಪರ ದೇಶೀ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಬಳಿಕ 2018 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಅವರನ್ನು ಪಂಜಾಬ್ ಖರೀದಿಸಿತು. ಆದರೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ನೀಡಲಿಲ್ಲ. ಇದಾದ ನಂತರ ನಾಲ್ಕು ವರ್ಷಗಳ ಕಾಲ ಐಪಿಎಲ್​ನಿಂದ ಹಿಂದೆ ಸರಿದಿದ್ದ ಮಯಾಂಕ್ ಅವರನ್ನು ಸನ್‌ರೈಸರ್ಸ್ ಹೈದರಬಾದ್ ತಂಡ ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಕೊಹ್ಲಿಯನ್ನೂ ಹಿಂದಿಕ್ಕಿದ್ದ ಮಯಾಂಕ್

ತಮ್ಮ ಆಟಕ್ಕಿಂತ ಹೆಚ್ಚು ಫಿಟ್‌ನೆಸ್‌ಗೆ ಹೆಸರುವಾಸಿಯಾದ ಆಟಗಾರರಲ್ಲಿ ಮಯಾಂಕ್ ಕೂಡ ಒಬ್ಬರು. ಕ್ರಿಟ್ರಾಕರ್‌ನ ವರದಿಯ ಪ್ರಕಾರ, 2018 ರಲ್ಲಿ ನಡೆದಿದ್ದ ಯೋ-ಯೋ ಟೆಸ್ಟ್‌ನಲ್ಲಿ ಮಯಾಂಕ್, ವಿರಾಟ್ ಕೊಹ್ಲಿಯನ್ನು ಮೀರಿಸಿದ್ದರು. ಆ ವರ್ಷ ಮಯಾಂಕ್ ಅವರ ಯೋ-ಯೋ ಸ್ಕೋರ್ 19.3 ಆಗಿದ್ದರೆ, ಕೊಹ್ಲಿಯ ಸ್ಕೋರ್ 19 ಆಗಿತ್ತು. ಅಲ್ಲದೆ ಮನೀಷ್ ಪಾಂಡೆಯನ್ನೂ ಹಿಂದಿಕ್ಕುವಲ್ಲಿ ಮಯಾಂಕ್ ಯಶಸ್ವಿಯಾಗಿದ್ದರು. ಆ ವರ್ಷ ಮನೀಶ್ ಪಾಂಡೆ ಸ್ಕೋರ್ 19.2 ಆಗಿತ್ತು.

ಮಯಾಂಕ್ ಅವರ ಈವರೆಗಿನ ವೃತ್ತಿಜೀವನವನ್ನು ಗಮನಿಸಿದರೆ, 29 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಮಯಾಂಕ್ 3.05 ರ ಎಕಾನಮಿಯಲ್ಲಿ 87 ವಿಕೆಟ್ಗಳನ್ನು ಪಡೆದಿದ್ದಾರೆ. ಅಲ್ಲದೆ 20.33 ರ ಸರಾಸರಿಯಲ್ಲಿ 732 ರನ್​ಗಳನ್ನು ಸಹ ಬಾರಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳು ಸೇರಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Sat, 24 December 22