AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Auction 2023: ಸ್ಟೋಕ್ಸ್​ಗೆ ಚೆನ್ನೈ ನಾಯಕತ್ವ..! ಸಿಎಸ್​ಕೆ ಸಿಇಓ ಹೇಳಿದ್ದೇನು? ಧೋನಿ ಫುಲ್ ಖುಷ್

IPL Auction 2023: 'ಸ್ಟೋಕ್ಸ್ ನಮ್ಮ ತಂಡವನ್ನು ಸೇರಿಕೊಂಡಿರುವುದು ನಮಗೆ ತುಂಬಾ ಖುಷಿ ತಂದಿದೆ. ಅವರು ಅಂತಿಮವಾಗಿ ನಮ್ಮ ತಂಡವನ್ನು ಸೇರಿಕೊಂಡದ್ದು ನಮ್ಮ ಅದೃಷ್ಟ. ನಮಗೆ ಆಲ್ ರೌಂಡರ್ ಬೇಕು ಎಂದಿದ್ದಾರೆ.

IPL Auction 2023: ಸ್ಟೋಕ್ಸ್​ಗೆ ಚೆನ್ನೈ ನಾಯಕತ್ವ..! ಸಿಎಸ್​ಕೆ ಸಿಇಓ ಹೇಳಿದ್ದೇನು? ಧೋನಿ ಫುಲ್ ಖುಷ್
ಧೋನಿ, ಸ್ಟೋಕ್ಸ್
TV9 Web
| Updated By: ಪೃಥ್ವಿಶಂಕರ|

Updated on: Dec 24, 2022 | 1:00 PM

Share

ಶುಕ್ರವಾರ ನಡೆದ ಐಪಿಎಲ್ 2023ರ ಐಪಿಎಲ್ ಮಿನಿ ಹರಾಜಿನಲ್ಲಿ (IPL mini auction) ಚೆನ್ನೈ ಸೂಪರ್ ಕಿಂಗ್ಸ್ (CSK) ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಅವರನ್ನು ರೂ. 16.25 ಕೋಟಿಗಳಷ್ಟು ದುಬಾರಿ ಬೆಲೆಗೆ ಖರೀದಿಸಿದೆ. ಈ ಮೂಲಕ ಸ್ಟೋಕ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಮೂರನೇ ಆಟಗಾರ ಎಂಬ ದಾಖಲೆಯನ್ನೂ ಬರೆದರು. ಈ ಹರಾಜಿನಲ್ಲಿ ಸಿಕ್ಕ ಬೆಲೆಯಿಂದ ಬೆನ್ ಸ್ಟೋಕ್ಸ್​ ಸಂತಸಗೊಂಡಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇತ್ತ ವಿಶ್ವದ ಬೆಸ್ಟ್ ಆಲ್​ರೌಂಡರ್​ಗಳಲ್ಲಿ ಒಬ್ಬರಾದ ಸ್ಟೋಕ್ಸ್​ರನ್ನು ಖರೀದಿಸಿರುವುದು ಚೆನ್ನೈ ಸೂಪರ್ ಕಿಂಗ್ಸ್​ ಪಾಳಯದಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ. ಏಕೆಂದರೆ ಈ ಐಪಿಎಲ್ ಸಿಎಸ್​ಕೆ ಹಾಲಿ ನಾಯಕ ಧೋನಿಯವರ (MS Dhoni) ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಚೆನ್ನೈ ಧೋನಿ ಬದಲಿ ಆಟಗಾರನನ್ನು ಹುಡುಕುತ್ತಿತ್ತು. ಇದೀಗ ಸ್ಟೋಕ್ಸ್ ಎಂಟ್ರಿ ಚೆನ್ನೈ ತಂಡದ ನಾಯಕತ್ವದ ಸಮಸ್ಯೆಯನ್ನು ಬಗೆಹರಿಸಿದೆ ಎಂತಲೇ ಹೇಳಲಾಗುತ್ತಿದೆ.

ನಮಗೆ ಆಲ್ ರೌಂಡರ್ ಬೇಕು

ಮಿನಿ-ಹರಾಜಿನ ನಂತರ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಜೊತೆ ಮಾತನಾಡಿದ ಚೆನ್ನೈ ಸಿಇಒ ಕಾಶಿ ವಿಶ್ವನಾಥ್, ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಿದಕ್ಕೆ ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಇಂಗ್ಲಿಷ್ ಆಲ್‌ರೌಂಡರ್‌ನನ್ನು ಖರೀದಿಸುವ ಬಗ್ಗೆ ಎಂಎಸ್ ಧೋನಿ ಅವರ ಪ್ರತಿಕ್ರಿಯೆಯನ್ನು ಅವರು ಬಹಿರಂಗಪಡಿಸಿದರು. ವಿಶ್ವನಾಥ್, ‘ಸ್ಟೋಕ್ಸ್ ನಮ್ಮ ತಂಡವನ್ನು ಸೇರಿಕೊಂಡಿರುವುದು ನಮಗೆ ತುಂಬಾ ಖುಷಿ ತಂದಿದೆ. ಅವರು ಅಂತಿಮವಾಗಿ ನಮ್ಮ ತಂಡವನ್ನು ಸೇರಿಕೊಂಡದ್ದು ನಮ್ಮ ಅದೃಷ್ಟ. ನಮಗೆ ಆಲ್ ರೌಂಡರ್ ಬೇಕು. ಹಾಗೆಯೇ ಸ್ಟೋಕ್ಸ್ ನಮ್ಮ ತಂಡವನ್ನು ಸೇರಿಕೊಂಡಿರುವುದಕ್ಕೆ ಎಂಎಸ್ ಧೋನಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

Dinesh Karthik: ‘ಕ್ರಿಕೆಟರ್ ಆಗಬೇಕಾದರೆ, ಮೊದಲು ಆಲ್​ರೌಂಡರ್ ಆಗಬೇಕು’; ಮಿನಿ ಹರಾಜಿನ ಬಗ್ಗೆ ಡಿಕೆ ವ್ಯಂಗ್ಯ

ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ

ಅಲ್ಲದೆ ಚೆನ್ನೈ ತಂಡದ ಮುಂದಿನ ನಾಯಕನಾಗಿ ಬೆನ್ ಸ್ಟೋಕ್ಸ್ ಅವರನ್ನು ಆಯ್ಕೆ ಮಾಡಲಾಗುವುದು ಎಂದು ಕ್ರಿಕೆಟ್ ತಜ್ಞರು ನಿರೀಕ್ಷಿಸಿದ್ದಾರೆ. ಬಹುಶಃ ಅದಕ್ಕಾಗಿಯೇ ಚೆನ್ನೈ ಫ್ರಾಂಚೈಸಿ ಕೂಡ ಸ್ಟೋಕ್ಸ್ ಮೇಲೆ ದೊಡ್ಡ ಬೆಟ್ಟಿಂಗ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ವಿಶ್ವನಾಥ್, ‘ಹೌದು, ಚೆನ್ನೈ ತಂಡದಲ್ಲಿ ನಾಯಕತ್ವದ ಆಯ್ಕೆ ಇದೆ. ಸದ್ಯ ಎಂಎಸ್ ಧೋನಿ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿದ್ದಾರೆ. ಚೆನ್ನೈ ತಂಡ ಈಗ ಉತ್ತಮ ಪ್ರದರ್ಶನ ನೀಡುತ್ತಿದೆ. ಮುಂದಿನ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ನಾವು ಯಾವಾಗಲೂ ಒಂದು ಪ್ರಕ್ರಿಯೆಯನ್ನು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪೂರ್ಣ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ಅಂಬಾಟಿ ರಾಯುಡು, ಡ್ವೇನ್ ಪ್ರಿಟೋರಿಯಸ್, ಮಹಿಷ್ ತೀಕಷ್ಣ, ಪ್ರಶಾಂತ್ ಸೋಲಂಕಿ, ದೀಪಕ್ ಚಹಾರ್, ಮುಕೇಶ್ ಚೌಧರಿ, ಸಿಮರ್ಜೀತ್ ಸಿಂಗ್, ರಾಜವರ್ಧನ್ ಹಂಗರ್ಗಾಕರ್, ಮಿಚೆಲ್ ಸ್ಯಾಂಟ್ನರ್, ಮತಿಶಾ ಪತಿರಾನಾ, ಸುಭ್ರಾಂಶು ಸೇನಾಪತಿ, ತುಷಾರ್ ದೇಶಪಾಂಡೆ, ಬೆನ್ ಸ್ಟೋಕ್ಸ್, ಭಗತ್ ವರ್ಮಾ, ಅಜಯ್ ಜಾಧವ್ ಮಂಡಲ್, ಕೈಲ್ ಜೇಮಿಸನ್, ನಿಶಾಂತ್ ಸಿಂಧು, ಶೇಖ್ ರಶೀದ್, ಅಜಿಂಕ್ಯಾ ರಹಾನೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ