IPL 2022: ಚೆನ್ನೈ ಮೇಲುಗೈ; 2008 ರಿಂದ 2021 ರವರೆಗೆ ಪರ್ಪಲ್ ಕ್ಯಾಪ್ ಗೆದ್ದ ಬೌಲರ್‌ಗಳಿವರು

IPL 2022: ಚೆನ್ನೈನ ಬ್ರಾವೋ ಮತ್ತು ಸನ್‌ರೈಸರ್ಸ್‌ನ ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ಗೆದ್ದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇಬ್ಬರೂ ಎರಡು ಬಾರಿ ಈ ಕ್ಯಾಪ್ ಗೆದ್ದಿದ್ದಾರೆ, ಆದರೆ ತಂಡದ ದೃಷ್ಟಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ಮುಂಚೂಣಿಯಲ್ಲಿದೆ.

IPL 2022: ಚೆನ್ನೈ ಮೇಲುಗೈ; 2008 ರಿಂದ 2021 ರವರೆಗೆ ಪರ್ಪಲ್ ಕ್ಯಾಪ್ ಗೆದ್ದ ಬೌಲರ್‌ಗಳಿವರು
ಹರ್ಷಲ್ ಪಟೇಲ್
Updated By: ಪೃಥ್ವಿಶಂಕರ

Updated on: Mar 23, 2022 | 11:36 AM

ವಿಶ್ವದ ಅತ್ಯುತ್ತಮ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್ (IPL-2022) ಮಾರ್ಚ್ 26 ರಿಂದ ಪ್ರಾರಂಭವಾಗುತ್ತಿದೆ. ಈ ಲೀಗ್ ಬೌಲಿಂಗ್ ಮತ್ತು ಬ್ಯಾಟ್‌ನಿಂದ ಅಬ್ಬರಿಸುವ ಪ್ರತಿಭೆಗೆ ಹೊಸ ಆಯಾಮಗಳನ್ನು ನೀಡಿದ್ದು, ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುದ್ದಿ ಮಾಡಿದ ಆಟಗಾರರನ್ನು ನೀಡಿದೆ. ಒಂದು ವೇಳೆ ಟಿ20 ಮಾದರಿಯಲ್ಲಿ ಲೀಗ್‌ ನಡೆದರೆ ವೇಗದ ಕ್ರಿಕೆಟ್‌ನಲ್ಲಿ ರನ್‌ಗಳ ಸುರಿಮಳೆಯಾಗುತ್ತದೆ. ಆದರೆ ಈ ಲೀಗ್‌ನಲ್ಲಿ ಬೌಲರ್‌ಗಳಲ್ಲಿ ಪ್ರತಿಭೆ ಇದ್ದರೆ ಚೆಂಡಿನಿಂದಲೂ ಪಂದ್ಯದ ದಿಕ್ಕನ್ನು ತಿರುಗಿಸಬಹುದು ಎಂಬುದನ್ನು ಸಾಭೀತುಪಡಿಸಿದ್ದಾರೆ. ಐಪಿಎಲ್‌ನಲ್ಲಿ, ಬೌಲಿಂಗ್​ನಲ್ಲಿ ಅದ್ಭುತಗಳನ್ನು ಮಾಡುವವರಿಗೆ ಮನ್ನಣೆ ಸಿಗುತ್ತದೆ. ಅದರ ಫಲವಾಗಿ ಪ್ರತಿ ಋತುವಿನಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆದವರಿಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ.

ಐಪಿಎಲ್‌ನ ಮೊದಲ ಆವೃತ್ತಿ ಅಂದರೆ 2008 ರಿಂದ ಪರ್ಪಲ್ ಕ್ಯಾಪ್ ನೀಡುವ ಟ್ರೆಂಡ್ ಶುರುವಾಯಿತು. ಲೀಗ್‌ನ ಕೊನೆಯಲ್ಲಿ, ಹೆಚ್ಚು ಬೇಟೆಯಾಡುವ ಬೌಲರ್ ಅವರ ತಲೆಯ ಮೇಲೆ ಈ ಕ್ಯಾಪ್ ಇರುತ್ತದೆ. ಈ ಸಮಯದಲ್ಲಿ, ಲೀಗ್ ಸಮಯದಲ್ಲಿ ಕ್ಯಾಪ್ ಅನ್ನು ಸಹ ನೀಡಲಾಗುತ್ತದೆ ಆದರೆ ಇದು ಪಂದ್ಯದ ಪ್ರಕಾರ ಬದಲಾಗುತ್ತದೆ. ಪಂದ್ಯದ ನಂತರ, ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ನಂಬರ್-1 ಬೌಲರ್ ಈ ಕ್ಯಾಪ್ ಪಡೆಯುತ್ತಾನೆ. 2008 ರಿಂದ ಇಲ್ಲಿಯವರೆಗೆ ಈ ಕ್ಯಾಪ್ ಗೆದ್ದವರ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

2008 ರಿಂದ 2021 ರವರೆಗೆ ಪರ್ಪಲ್ ಕ್ಯಾಪ್ ಗೆದ್ದ ಬೌಲರ್‌ಗಳು

1. ಸೊಹೈಲ್ ತನ್ವೀರ್, ರಾಜಸ್ಥಾನ ರಾಯಲ್ಸ್, 22 ವಿಕೆಟ್, 2008

2. ಆರ್ ಪಿ ಸಿಂಗ್, ಡೆಕ್ಕನ್ ಚಾರ್ಜಸ್, 23 ವಿಕೆಟ್, 2009

3. ಪ್ರಗ್ಯಾನ್ ಓಜಾ, ಡೆಕ್ಕನ್ ಚಾರ್ಜಸ್, 21 ವಿಕೆಟ್, 2010

4. ಲಸಿತ್ ಮಾಲಿಂಗ, ಮುಂಬೈ ಇಂಡಿಯನ್ಸ್, 28 ವಿಕೆಟ್, 2011

5. ಮೊರ್ನೆ ಮೊರ್ಕೆಲ್, ಡೆಲ್ಲಿ ಡೇರ್‌ಡೆವಿಲ್ಸ್, 25 ವಿಕೆಟ್, 2012

6. ಡ್ವೇನ್ ಬ್ರಾವೋ, ಚೆನ್ನೈ ಸೂಪರ್ ಕಿಂಗ್ಸ್, 32 ವಿಕೆಟ್, 2013

7. ಮೋಹಿತ್ ಶರ್ಮಾ, ಚೆನ್ನೈ ಸೂಪರ್ ಕಿಂಗ್ಸ್, 23 ವಿಕೆಟ್, 2014

8. ಡ್ವೇನ್ ಬ್ರಾವೋ, ಚೆನ್ನೈ ಸೂಪರ್ ಕಿಂಗ್ಸ್, 26 ವಿಕೆಟ್, 2015

9. ಭುವನೇಶ್ವರ್ ಕುಮಾರ್, ಸನ್ ರೈಸರ್ಸ್ ಹೈದರಾಬಾದ್, 23 ವಿಕೆಟ್, 2016

10. ಭುವನೇಶ್ವರ್ ಕುಮಾರ್, ಸನ್ ರೈಸರ್ಸ್ ಹೈದರಾಬಾದ್, 26 ವಿಕೆಟ್, 2017

11. ಆಂಡ್ರ್ಯೂ ಟೈ, ಕಿಂಗ್ಸ್ XI ಪಂಜಾಬ್, 24 ವಿಕೆಟ್, 2018

12. ಇಮ್ರಾನ್ ತಾಹಿರ್, ಚೆನ್ನೈ ಸೂಪರ್ ಕಿಂಗ್ಸ್, 26 ವಿಕೆಟ್, 2019

13. ಕಗಿಸೊ ರಬಾಡ, ದೆಹಲಿ ಕ್ಯಾಪಿಟಲ್ಸ್, 30 ವಿಕೆಟ್, 2020

14. ಹರ್ಷಲ್ ಪಟೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, 32 ವಿಕೆಟ್, 2021

ಬ್ರಾವೋಗೆ ಅತಿ ಹೆಚ್ಚು ಪರ್ಪಲ್ ಕ್ಯಾಪ್
ಚೆನ್ನೈನ ಬ್ರಾವೋ ಮತ್ತು ಸನ್‌ರೈಸರ್ಸ್‌ನ ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ಗೆದ್ದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇಬ್ಬರೂ ಎರಡು ಬಾರಿ ಈ ಕ್ಯಾಪ್ ಗೆದ್ದಿದ್ದಾರೆ, ಆದರೆ ತಂಡದ ದೃಷ್ಟಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ಮುಂಚೂಣಿಯಲ್ಲಿದೆ. ಈ ತಂಡದ ಆಟಗಾರರು ನಾಲ್ಕು ಬಾರಿ ಈ ಕ್ಯಾಪ್ ಗೆದ್ದಿದ್ದಾರೆ.

ಇದನ್ನೂ ಓದಿ:WWC 2022: ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ಭಾರತಕ್ಕಿದೆ ಸೆಮಿಫೈನಲ್​​ಗೇರುವ ಅವಕಾಶ! ಆದರೆ..?